ಶ್ರೀನಿವಾಸಪುರ:-ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದ ವಿಜಯವಾಡ-ಬೆಂಗಳೂರು ನಾಲ್ಕು ಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗಕ್ಕೆ ಆಂಧ್ರದ ಸರ್ಕಾರ ಅಡ್ಡಗಾಲು ಹಾಕಿ ಮಾರ್ಗ ಬದಲಾವಣೆ ಮಾಡಿಸಿಕೊಂಡಿರುವುದರ ಕುರಿತಾಗಿ ಯುವಶಕ್ತಿ ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸ್ಪೀಕರ್ ಪ್ರಶಿಂಸೆ ವ್ಯಕ್ತಪಡಿಸಿದರು,ಯುವಶಕ್ತಿ ಪದಾಧಿಕಾರಿಗಳೊಂದಿಗೆ ಇಂದು ಬೆಂಗಳೂರಿನ ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಚರ್ಚೆ ನಡೆಸಿದ ಅವರು ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವಶಕ್ತಿ ನಡೆಸುತ್ತಿರುವ ಹೋರಾಟ ಗಮನಿಸಿದೆ ನೀವು ಸಾಮಜಿಕ ಕಾಳಜಿ ಇಟ್ಟುಕೊಂಡು ಮುಂದುವರೆದಿರುವುದು ಉತ್ತಮ ಬೆಳವಣಿಗೆ ಎಂದರು.
ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗ ಬದಲಾವಣೆಗೆ ಅಂಧ್ರ ಸರ್ಕಾರ ಮತ್ತು ಕಂಟ್ರಾಕ್ಟರ್ ಗಳ ಚಿತಾವಣೆಯಿಂದ ನಡೆದಿರುವುದಾಗಿ ಅನುಮಾನ ವ್ಯಕ್ತಪಡಿಸಿದರು. ಮದನಪಲ್ಲಿ ಹಾಗು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದು ಹೋಗಬೇಕಿದ್ದ ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗವನ್ನು, ಅನಂತಪುರ ಮಾರ್ಗವಾಗಿ ಬದಲಾಯಿಸಿರುವುದಕ್ಕೆ ತೀವ್ರ ಬೆಸರ ವ್ಯಕ್ತಪಡಿಸಿದರು. ಡಿ.ಪಿ.ಆರ್. ಆಗಿರುವ ಹಳೇಯ ಮಾರ್ಗದ ರಸ್ತೆ ಅಭಿವೃದ್ದಿ ಮಾಡಿದರೆ ಆಂಧ್ರದ ಪ್ರಕಾಶಂ ಜಿಲ್ಲೆ, ಕಡಪಾ ಹಾಗು ಅರ್ದಭಾಗದಷ್ಟು ಚಿತ್ತೂರು ಜಿಲ್ಲೆಯ ನಿವಾಸಿಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಹತ್ತಿರ ಹಾಗು ಉತ್ತಮ ರಸ್ತೆಯಾಗುತ್ತದೆ ಹಾಗೇ ಬೆಂಗಳೂರಿನ ಜನ ತಿರುಪತಿಗೆ ಹೋಗಲು ಹತ್ತಿರದ ರಸ್ತೆಯಾಗಲಿದೆ ಎಂದರು.ಮತ್ತು ತೀರಾ ಹಿಂದುಳಿದಿರುವ ಶ್ರೀನಿವಾಸಪುರ-ಚಿಂತಾಮಣಿ ತಾಲೂಕುಗಳ ಅಭಿವೃದ್ದಿಗೆ ಅನಕೂಲವಾಗಲಿದ್ದ ನಾಲ್ಕು ಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗ ಬದಲಾವಣೆಯಿಂದ ಅಡ್ಡಿಪಡಿಸಿದ್ದಾರೆ ಎಂದರು.
ಮೊದಲಿನ ಯೋಜನೆಯಂತೆ ಹಳೇ ಮಾರ್ಗ, ಶ್ರೀನಿವಾಸಪುರ ಚಿಂತಾಮಣಿ ಮೂಲಕ ನಾಲ್ಕುಪಥ ಎಕ್ಸ್ ಪ್ರೆಸ್ ವೇ ಹೋಗಲು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಾಜ್ಯ ಲೋಕೋಪಯೋಗಿ ಸಚಿವರಿಗೆ ಪತ್ರ ಬರೆದು ಒತ್ತಾಯಿಸುವುದು ಹಾಗು ಈ ಭಾಗದ ಜನಪ್ರತಿನಿಧಿಗಳ ನಿಯೋಗದ ಮೂಲಕ ರಾಜ್ಯ ಮುಖ್ಯಮಂತ್ರಿ,ಕೇಂದ್ರ ಹೆದ್ದಾರಿ ಸಚಿವರುಗಳ ಬಳಿ ಹೋಗಿ ಒತ್ತಾಯ ಮಾಡುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಕೃಷಿ ಸಚಿವರುಗಳಾದ ಕೃಷ್ಣಭೈರೇಗೌಡ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ, ಮುಖಂಡ ಎಲ್.ವಿ.ಗೋವಿಂದಪ್ಪ ಯುವಶಕ್ತಿ ಪದಾಧಿಕಾರಿಗಳಾದ ಸಂಚಾಲಕ ಶಿಪ್ರಕಾಶ್ ರೆಡ್ಡಿ, ರಮೇಶ್ ಬಾಬು,ನಾಗಭೂಷಣ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.