ಕೇಜ್ರಿವಾಲ್ ತಂದಿರುವ ಬದಲಾವಣೆ ಎಲ್ಲಾ ರಾಜ್ಯಗಳಲ್ಲೂ ಆಗಬೇಕು
ನಾನೂ ಒಬ್ಬ ಆಮ್ ಆದ್ಮಿ ಎಂದಿರುವ ರಮೇಶ್ ಕುಮಾರ್
ಬೆಂಗಳೂರು:ಆರೋಗ್ಯ ಸಚಿವನಾಗಿದ್ದಾಗ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಆಮ್ ಆದ್ಮಿ ಸರ್ಕಾರ ಪ್ರಾರಂಭಿಸಿರುವ ಮೊಹಲ್ಲಾ ಕ್ಲಿನಿಕ್,ಸರ್ಕಾರಿ ಶಾಲೆಗಳ ಕಾರ್ಯವೈಖರಿ ಕಂಡು ಆಶ್ಚರ್ಯಚಕಿತನಾದೆ, ಸಾಮಜಿಕ ಬದಲಾವಣೆಗಾಗಿ ಹಾಗು ಜನಸಾಮನ್ಯರಿಗೆ ಮೂಲಭುತ ಸೌಕರ್ಯ ಒದಗಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಗೆದುಕೊಂಡಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ನೋಡಿ ಅವರ ದೊಡ್ಡ ಅಭಿಮಾನಿಯಾದೆ ಜೊತೆಗೆ ಅವರ ಕಾರ್ಯಕ್ರಮಗಳ ಅನುಸರಣೆಗೆ ಮುಂದಾದೆ ಎಂದು ಶಾಸಕ ಹಾಗು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ಅವರು ಬೆಂಗಳೂರು ನಗರದ ಶಾಂತಿನಗರದ ಬಸಪ್ಪ ರಸ್ತೆಯಲ್ಲಿ ಇರುವ ಆಮ್ ಆದ್ಮಿ ಕ್ಲಿನಿಕ್ ಕಾರ್ಯವೈಖರಿ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಕುಮಾರ್ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಜನತೆ ಒಂದೇ ಒಂದು ಬಾರೀ ಅವಕಾಶ ಕೊಟ್ಟರು. ಈ ಅವಕಾಶವನ್ನು ಅವರು,ಜನಪರ ಸೇವೆ ಮಾಡುವುದಕ್ಕೆ ಬಳಸಿಕೊಂಡರು.ಕೇಜ್ರಿವಾಲ್ ಅವರು ಆರೋಗ್ಯ,ಶಿಕ್ಷಣ,ಉಚಿತ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಸೇವೆ ಎಲ್ಲಾ ರಾಜ್ಯಗಳಲ್ಲೂ ಆಗಬೇಕಿದೆ ಎಂದರು.
ಶಾಂತಿನಗರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೇರಿ ಪ್ರಾರಂಭಿಸಿರುವ ದೆಹಲಿ ಮಾದರಿಯಲ್ಲಿನ ಮೊಹಲ್ಲಾ ಕ್ಲಿನಿಕ್ ಕಂಡು ತುಂಬಾ ಸಂತೋಷವಾಗಿದೆ.ಯಾವುದೇ ರೀತಿಯ ಅಂತಸ್ತು, ಆದಾಯ, ಜಾತಿ ಕೇಳದೆ ಎಲ್ಲರಿಗೂ ಈ ಸೌಲಭ್ಯ ವಿಸ್ತರಿಸಿರುವುದು ಮೆಚ್ಚುಗೆಯಾಗಿದೆ ಎಂದಿರುತ್ತಾರೆ.
ಆಮ್ ಆದ್ಮಿ ಕ್ಲಿನಿಕ್ ಒಳಗೆ ಬಂದರೆ ದೊಡ್ಡ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಇದ್ದಾರೆ.ಇವರೆಲ್ಲ ಮನೆಗೆಲಸಕ್ಕೆ ಹೋಗುವಂತಹವರು ಇಂತಹ ಕಟ್ಟ ಕಡೆಯ ಜನರ ಸೇವೆಗೆ ನಿಂತಿರುವ ಆಮ್ ಆದ್ಮಿಗಳಿಗೆ ವಂದನೆಗಳನ್ನು ತಿಳಿಸಿದ್ದಾರೆ.
ನಾನು ಒಬ್ಬ ಆಮ್ ಆದ್ಮಿ
ಆಮ್ ಆದ್ಮಿ ಪಕ್ಷ ಸೇರುತ್ತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ರಮೇಶ್ ಕುಮಾರ್, ‘ನಾನೂ ಒಬ್ಬ ಆಮ್ ಆದ್ಮಿ. ಅಂದರೆ ಜನ ಸಾಮಾನ್ಯ.. ಜನಸಾಮಾನ್ಯರಿಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರ ಜೊತೆ ನಾನು ಇರಲು ಬಯಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿರುತ್ತಾರೆ.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಹಿರಿಯ ಮುಖಂಡರಾದ ಗೋಪಾಲ್ ರೆಡ್ಡಿ, ಹರಿಹರನ್, ರೇಣುಕಾ ವಿಶ್ವನಾಥನ್, ಜಂಟಿ ಕಾರ್ಯದರ್ಶಿ ದರ್ಶನ್, ಮುಖ್ಯ ವಕ್ತಾರ ಶರತ್ ಖಾದ್ರಿ,ಉಪಾಧ್ಯಕ್ಷ ಸುರೇಶ್ ರಾಥೋಡ್ ಇದ್ದರು.
ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಶ್ರೀನಿವಾಸಪುರ ಮತ್ತು ಕೋಲಾರ ನಗರದಲ್ಲಿ ಪ್ರಾರಂಭಿಸಿದ್ದ ಮೊಹ್ಹಲ್ಲಾ ಕ್ಲಿನಿಕ್ ಇಗಲೂ ಚಾಲ್ತಿಯಲ್ಲಿದೆ.