ಶ್ರೀನಿವಾಸಪುರ:ಕೇಂದ್ರದ ಮಾಜಿ ಸಚಿವೆ ದಿವಂಗತ ಎನ್.ಟಿ.ಆರ್ ಪುತ್ರಿ, ನಟ ಬಾಲಕೃಷ್ಣ ಅವರ ಸಹೋದರಿ ದಗ್ಗುಪಾಟಿಪುರಂದರೇಶ್ವರಿ ಇಂದು ತಾಲೂಕಿನ ಗೌವನಪಲ್ಲಿಯಲ್ಲಿ ಬಿಜೆಪಿ ಪರ ರೋಡ್ ಶೋ ನಡೆಸಿ ಮತಯಾಚಿಸಿದರು.
ಕಳೆದ ನಲವತೈದು ವರ್ಷಗಳಿಂದ ತೀರಾ ಹಿಂದುಳಿದ ಪ್ರದೇಶವಾಗಿದೆ ಇದನ್ನು ಹೋಗಾಲಾಡಿಸಲು ಇಲ್ಲಿ ಬದಲಾವಣೆ ಆಗಬೇಕಿದೆ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಹೇಳಿದ ಅವರು ನಿಮ್ಮ ಮತ ಬಿಜೆಪಿಗೆ ಹಾಕಿದರೆ ಕರ್ನಾಟಕದ ಅಭಿವೃದ್ಧಿಯೊಂದಿಗೆ ನಿಮ್ಮ ಪ್ರಾಂತ್ಯದ ಅಭಿವೃದ್ಧಿಯಾಗಲಿದೆ ಎಂದ ಅವರು ಇಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರು ಸ್ಪೀಕರ್ ಆಗಿದ್ದರು ಅವರ ಪ್ರಭಾವ ಸರ್ಕಾರದ ಮೇಲೆ ಎಷ್ಟಿರುತ್ತದೆ ಎಂದರೆ ಎಲ್ಲರೀಗೂ ತಿಳಿದ ವಿಚಾರವೆ ಆದರೂ ಪ್ರಭಾವಿ ವ್ಯಕ್ತಿ ರಮೇಶ್ ಕುಮಾರ್ ಅಭಿವೃದ್ದಿಗೆ ಮುಂದಾಗಿಲ್ಲ ಎಂದು ದೂರಿದರು.ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದು ಡಬಲ್ ಇಂಜಿನ್ ಸರ್ಕಾರದ ಮೂಲಕ ಕರ್ನಾಟಕ ಅಭಿವೃದ್ದಿ ಕಾಣಬೇಕಿದೆ ಎಂದು ಪುರಂದರೇಶ್ವರಿ ಹೇಳಿದರು.
ವಿಧಾನಪರಿಷತ್ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ ಮಾತನಾಡಿ ಬಿಜೆಪಿಯನ್ನು ಬೆಂಬಲಿಸಿ ಕರ್ನಾಟಕವನ್ನು ಅಭಿವೃದ್ಧಿ ಪತದತ್ತ ಕೊಂಡೋಯ್ಯೊಣ ಎಂದರು.
ರೋಡ್ ಶೋ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ,ತಾಲೂಕು ಬಿಜೆಪಿ ಅಧ್ಯಕ್ಷ ಆಶೋಕ್ ರೆಡ್ಡಿ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ತಾಲೂಕುಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ,ಶ್ರೀರಾಮ್,ಸೋಮಶೇಖರೆಡ್ಡಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ರೆಡ್ಡಿ, ಮುಂತಾದವರು ಇದ್ದರು

