ತಿರುಮಲದ ಸಪ್ತಗಿರಿಗಳಲ್ಲಿ ಒಂದಾದ ಶೇಷಾಚಲಂ ಬೆಟ್ಟದ ತಪ್ಪಲು ಆಂಧ್ರದ ಅನ್ನಮಯ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ ಇಲ್ಲಿನ ಗುಂಡಲಕೋಣ ಕಾಡಿನ ಮೂಲಕ ತಲಕೋನದಲ್ಲಿರುವ ಶ್ರೀಸಿದ್ದೇಶ್ವರಸ್ವಾಮಿಗೆ ಹರಕೆ ಮಾಡಿಕೊಂತ ಶಿವ ಭಕ್ತರ ದಂಡು ನಡೆದುಕೊಂಡು ಹೋಗುತ್ತಿದ್ದರು ಈ ಸಂದರ್ಬದಲ್ಲಿ ಅವರ ಮೇಲೆ ಆನೆಗಳು ದಾಳಿ ಮಾಡಿದ್ದು ಸ್ಥಳದಲ್ಲೆ ನಾಲ್ವರು ಸಾವನಪ್ಪಿದ್ದು ಇತರೆ ಮೂವರು ಗಾಯಗೊಂಡಿದ್ದಾರೆ.
ನ್ಯೂಜ್ ಡೆಸ್ಕ್:ಅರಣ್ಯ ಪ್ರದೇಶದ ಮೂಲಕ ಶಿವನ ದೇವಾಸ್ಥಾನಕ್ಕೆ ಹೋಗುತ್ತಿದ್ದ ಭಕ್ತರ ಮೇಲೆ ಆನೆಗಳು ದಾಳಿ ಮಾಡಿಡ್ಡೂ ದಾಳಿಯಲ್ಲಿ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ,ಇತರೆ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.ಈ ಘಟನೆ ಮಂಗಳವಾರ ಮುಂಜಾನೆ ಸುಮಾರು ಐದು ಸಮಯದಲ್ಲಿ ನಡೆದಿದೆ. ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಆಂಧ್ರದ ಅನ್ನಮಯ್ಯ ಜಿಲ್ಲೆಯ ಬಾಕರಪೇಟ ಬಳಿಯ ತಲಕೋನ ಭಾಗದಲ್ಲಿನ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ಹೋಗಲು ಭಕ್ತರ ದಂಡು ಶೇಷಾಚಲಂ ಕಾಡಿನ ಮೂಲಕ ತಲಕೋನಾಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿಗೆ ಆನೆಗಳ ಗುಂಪು ಬಂದಿದೆ ದೊಡ್ದಸಂಖ್ಯೆಯಲ್ಲಿದ್ದ ಜನರನ್ನು ನೋಡಿದ ಆನೆಗಳು ಭಕ್ತರನ್ನು ನೋಡಿ ಬೆದರಿ ಜನರ ಗುಂಪಿನ ಮೇಲೆ ನುಗ್ಗಿ ಬಂದಿವೆ ಆನೆಗಳನ್ನು ಎದುರಿಸಲು ಜನರು ಜೋರಾಗಿ ಕೂಗಿ ಗದ್ದಲ ಎಬ್ಬಿಸಿದ್ದಾರೆ ಇದಕ್ಕೆ ಪ್ರತಿಯಾಗಿ ಆನೆಗಳ ಗುಂಪು ಜನರ ಮೇಲೆ ದಾಳಿ ಮಾಡಿವೆ ಜನರು ಓಡಲು ಅರಂಭಿಸಿದ್ದಾರೆ ಆದಾಗ್ಯೂ ಅವರನ್ನು ಬಿಡದ ಆನೆಗಳು ಬೆನ್ನಟ್ಟಿದ್ದಾವೆ ಇದರಿಂದಾಗಿ ದಾಳಿಗೆ ಸಿಲುಕಿದ ಅನೆಗಳು ನಾಲ್ಕು ಜನರನ್ನು ಬಲಿಪಡೆದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು
ಮೃತದೇಹಗಳನ್ನು ರೈಲ್ವೆ ಕೊಡೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ತಿರುಪತಿ ರುಯಾಗೆ ಕರೆದೊಯ್ಯಲಾಗಿದೆ.
ಮೃತಪಟ್ಟ ಭಕ್ತರು ಅನ್ನಮಯ್ಯ ಜಿಲ್ಲೆಯ ರೈಲ್ವೆ ಕೊಡೂರು ಮಂಡಲದ ಉರ್ಲಗಡ್ಡಪಾಡು ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.