ಶ್ರೀನಿವಾಸಪುರ: ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿ ಅಮ್ಮನ ದೇವಾಲಯಕ್ಕೆ ತೆರಳಲು ಶ್ರೀನಿವಾಸಪುರದ ಓಂ ಶಕ್ತಿ ಮಾಲಧಾರಿ ಭಕ್ತರಿಗೆ ಸಮಾಜ ಸೇವಕ ಗುಂಜೂರು ಶ್ರೀನಿವಾಸರೆಡ್ದಿ ಬಸ್ಸುಗಳನ್ನು ವ್ಯವಸ್ಥೆ ಮಾಡಿರುತ್ತಾರೆ.
ಇದುವರಿಗೂ ಸಾವಿರಾರು ಭಕ್ತರು ನೂರಾರು ಬಸ್ಸುಗಳಲ್ಲಿ ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿ ಅಮ್ಮನ ದೇವಾಲಯಕ್ಕೆ ಹೋಗಿಬರಲು ತಾಲೂಕಿನ ವಿವಿಧ ಭಾಗದ ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಿರುವುದಾಗಿ ಗುಂಜೂರು ಶ್ರೀನಿವಾಸರೆಡ್ದಿ ಹೇಳಿದರು. ಭಕ್ತಾಧಿಗಳು ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿಅಮ್ಮನ ದೇವಾಲಯಕ್ಕೆ ತೆರಳುವ ಸಂದರ್ಭದಲ್ಲಿ ಶುಭಹಾರೈಸಿ ಮಾತನಾಡಿದ ಅವರು ಭಕ್ತರಿಗೆ ಅವಕಾಶ ಕಲ್ಪಿಸಲು ಜನರೆ ನನಗೆ ಪ್ರೇರಣೆ ಎಂದ ಅವರು ವ್ರತಾಚರಣೆ ನಮ್ಮ ಸಂಸೃತಿಯ ಪ್ರತಿಕ,ಓಂ ಶಕ್ತಿ ಮಾಲಧಾರಿ ವ್ರತಾಚರಣೆ ಮಾಡುವಂತ ಭಕ್ತರನ್ನು ಪಕ್ಷ ಜಾತಿ ಬೇದ ಇಲ್ಲದೆ ಲೋಕಕಲ್ಯಾಣಾರ್ಥವಾಗಿ ಎಲ್ಲರೀಗೂ ಉಚಿತವಾಗಿ ಬಸ್ ವ್ಯವಸ್ಥೆ ಮಾಡುತ್ತಿರುವುದಾಗಿ ಹೇಳಿದರು.ಜನವರಿ ಮುಂದಿನ ವಾರದ ತನಕ ಬಸ್ ವ್ಯವಸ್ಥೆ ಇರುವುದಾಗಿ ತಿಳಿಸಿದರು.
ಈ ಸಂದರ್ಬದಲ್ಲಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿ ರಾಜೇಂದ್ರಪ್ರಸಾದ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅತ್ತಿಕುಂಟೆರಾಜಶೇಖರೆಡ್ದಿ ಶ್ರೀರಾಮ್,ಯಲ್ದೂರು ಶಿವಣ್ಣ,ಬಂಗವಾದಿನಾಗರಾಜಗೌಡ,ಶಂಕರೇಗೌಡ ಮುಂತಾದವರು ಇದ್ದರು.
