ಶ್ರೀನಿವಾಸಪುರ:ಸ್ವಾತಂತ್ರ ಹೋರಾಟಗಾರರನ್ನು ನಿರ್ಲಕ್ಷಿಸಿ ಸ್ಥಳೀಯ ಸಂಪ್ರದಾಯ ಮುರಿದು ಇಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಮಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ದೇಶಾದ್ಯಂತ ಸಂಭ್ರಮ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಯೋಜಿಸುವುದು ಅದರಲ್ಲಿ ಸ್ವಾತಂತ್ರ ಹೋರಾಟಗಾರರ ಕುಟುಂಬಗಳ ಸದಸ್ಯರನ್ನು ಪಾಲ್ಗೋಳ್ಳಲು ಅವಕಾಶ ನೀಡುವುದು ದೇಶದ ಸಂಪ್ರದಾಯ ಹಾಗೆ ಇದು ಶ್ರೀನಿವಾಸಪುರದಲ್ಲಿ ಮೊದಲಿನಿಂದಲೂ ಇರುವಂತ ಪದ್ದತಿಯಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಹಿಂದೊಮ್ಮೆ ರಾಜ್ಯಪಾಲರ ಭವನಕ್ಕೂ ಶ್ರೀನಿವಾಸಪುರದ ಸ್ವಾತಂತ್ರ ಹೋರಾಟಗಾರರನ್ನು ಅಹ್ವಾನಿಸಿದ್ದು ಇತಿಹಾಸ ಈ ಬಾರಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಆಯೋಜನೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರು ಹೋರಾಟಗಾರರ ಕುಟುಂಬಸ್ಥರನ್ನು ನಿರ್ಲಕ್ಷಿಸಿ ಕಾರ್ಯಕ್ರಮ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿಮರ್ಶಗೆ ಒಳಗಾಗಿದೆ.
ಇದುವರಿಗೂ ನಡೆದಂತ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಿಂದೆ ಸ್ವತಃ ಸ್ವಾತಂತ್ರ್ಯ ಹೋರಾಟಗಾರರನ್ನು ಕರೆಸಿ ಸ್ವಾತಂತ್ರ್ಯ ಹೋರಾಟದ ಅನುಭವಗಳನ್ನು ಸಾರ್ವಜನಿಕರಿಗೆ ಭಾಷಣದ ಮೂಲಕ ತಿಳಿಸಲು ಅವಕಾಶ ಕಲ್ಪಿಸಿ ಗೌವರವಿಸುತ್ತಿದ್ದರು ಹೋರಾಟಗಾರರು ಕಾಲವಾದ ನಂತರದಲ್ಲಿ ಸ್ಥಳೀಯವಾಗಿ ಇದ್ದಂತ ಸ್ವಾತಂತ್ರ್ಯ ಹೋರಾಟಗಾರ ವಿಧವಾ ಪತ್ನಿಯರನ್ನು ಅಥಾವ ಕುಟುಂಬಸ್ಥರನ್ನು ಕರೆಸುವುದು ಹೋರಾಟಗಾರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನುಭವಿಸಿದ ಸಂಕಷ್ಟಗಳು ಹೋರಾಟಗಳ ಬಗ್ಗೆ ಮುಖ್ಯ ಭಾಷಣದಲ್ಲಿ ತಿಳಿಸುವುದು ವಾಡಿಕೆಯಾಗಿತ್ತು ಇದು ಹೀಗೆ ಮುಂದುವರೆದಿತ್ತು ಆದರೆ ಈ ಬಾರಿಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ತಾಲೂಕು ಆಡಳಿತ ಆಹ್ವಾನ ನೀಡದೆ ನಿರ್ಲಕ್ಷಿಸಿದೆ ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಕರೆಯಲು ನಮ್ಮ ಹಿರಿಯ ಅಧಿಕಾರಿಗಳು ನಮಗೆ ತಿಳಿಸಿಲ್ಲ ಎಂಬುದಾಗಿ ಸ್ವಾತಂತ್ರ್ಯ ಹೋರಾಟಗಾರ ಯರ್ರಂವಾರಿಪಲ್ಲಿಯ ದಿವಂಗತ ವೈ.ಬಿ.ನಾರಾಯಣರೆಡ್ಡಿ ಪುತ್ರ ಕೃಷ್ಣಾರೆಡ್ಡಿ ಹೇಳುತ್ತಾರೆ ತಾಲೂಕಿನಾದ್ಯಂತ ಐದಾರು ಮಂದಿ ಹೋರಾಟಗಾರರ ವಿಧಾವಪತ್ನಿಯರಿದ್ದಾರೆ ಅದರಲ್ಲಿ ನಾರಾಯಣರೆಡ್ಡಿ ಅವರ ಪತ್ನಿ ಕೃಷ್ಣಮ್ಮ ಜೀವಂತವಾಗಿದ್ದು ಅವರು ಈಗ ಪಟ್ಟಣದಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ ಪ್ರತಿ ವರ್ಷ ಕೃಷ್ಣಮ್ಮ,ಮತ್ತೊಬ್ಬ ಹೋರಾಟಗಾರ ಚಂದ್ರಯ್ಯ ಅವರ ಪತ್ನಿ ವನಜಾಕ್ಷಮ್ಮ ಸೇರಿ ಉಳಿದಂತ ಹೋರಾಟಗಾರರ ವಿಧಾವ ಪತ್ನಿಯರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕರೆಯಿಸಿ ಧ್ವಜಾರೋಹಣ ಸಂಭ್ರಮದ ಕ್ಷಣಕ್ಕೆ ಸಾಕ್ಷಿಕರಿಸುತ್ತಿದ್ದರು ನಂತರದಲ್ಲಿ ಅವರನ್ನು ಗೌರವಿಸಲಾಗುತ್ತಿತ್ತು.
ಕ್ಷಮೆ ಕೋರಿದ ಶಾಸಕ
ಸ್ವಾತಂತ್ರ ಹೋರಾಟಗಾರ ಕುಟುಂಬಿಕರನ್ನು ನಿರ್ಲಕ್ಷಿಸಿ ಸ್ವಾತಂತ್ರೋತ್ಸವ ಆಚರಿಸುತ್ತಿದ್ದ ಬಗ್ಗೆ ಸಾರ್ವಜನಿಕರು ವೇದಿಕೆ ಮೇಲೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಾಗ ವೇದಿಕೆಯಲ್ಲಿದ್ದ ಶಾಸಕ ವೆಂಕಟಶಿವಾರೆಡ್ಡಿ ಕ್ಷಮೆ ಕೋರಿ ಮುಂದೆ ಹೀಗಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶಾಸಕ ವೆಂಕಟಶಿವಾರೆಡ್ಡಿ ಸ್ವತಃ ಸ್ವಾತಂತ್ರ ಹೋರಾಟಗಾರ ಗುಡಿಸಿವಾರಿಪಲ್ಲಿಕೃಷ್ಣಾರೆಡ್ಡಿ ಅವರ ಹಿರಿಯ ಪುತ್ರ ಎಂದು ಸಾರ್ವಜನಿಕರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರು ಆಗಿರುವ ತಹಶೀಲ್ದಾರ್ ಸುಧೀಂದ್ರ ಅವರಿಗೆ ಮನವರಿಕೆ ಮಾಡಿಕೊಟ್ಟರು.
ದೇಶ ಸ್ವಾತಂತ್ರ್ಯವಾಗಿ ಎಪ್ಪತೈದು ವರ್ಷಗಳು ಕಳೆದ ಹಿನ್ನಲೆಯಲ್ಲಿ ಆಜಾದಿಕ ಅಮೃತ ಮಹೋತ್ಸವ ಎಂದು ಸರ್ಕಾರದ ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರ ಕುಟುಂಬಸ್ಥರನ್ನು ಹುಡುಕಿಕೊಂಡು ಹೋಗಿ ಮನೆಬಾಗಿಲಲ್ಲೆ ಸನ್ಮಾನ ಮಾಡಿದ್ದರು