ಶ್ರೀನಿವಾಸಪುರ:ದ್ವಿತೀಯ ಪಿಯು ಫಲಿತಾಂಶದಲ್ಲಿ ಶ್ರೀನಿವಾಸಪುರದ ಗಂಗೋತ್ರಿ ಪಿಯು ಕಾಲೇಜಿನ ವಿಙ್ಞಾನ ವಿಭಾಗದ ವಿದ್ಯಾರ್ಥಿ ಎಸ್.ಎಂ.ಕೌಶಿಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾನೆ.
ಶ್ರೀನಿವಾಸಪುರ ಪಟ್ಟಣದ ಗಂಗೋತ್ರಿ ಪಿ ಯು ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್ PCMB ನಾಲ್ಕು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆಡೆದಿದ್ದು ಹಿಂದಿ ಮತ್ತು ಇಂಗ್ಲೀಷ್ ಭಾಷೆ ವಿಷಯಗಳಲ್ಲಿ ತಲಾ 98 ಪಡೆದು ಒಟ್ಟು 596 ಅಂಕ ಗಳಿಸಿರುತ್ತಾನೆ.
ಗಂಗೋತ್ರಿ ಪಿಯು ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಸುಂಕುಮುರಳಿ ಮತ್ತು ಸುಜಾತ ಅವರ ಪುತ್ರನಾಗಿರುವ ಎಸ್.ಎಂ.ಕೌಶಿಕ್ ಸಾಧನೆಗೆ ಅವರ ತಂದೆ ಹಾಗು ದೊಡ್ಡಪ್ಪ ಸುಂಕುಅಮರನಾಥ್ ಕಾಲೇಜು ಆವರಣದಲ್ಲಿ ಸಂಭ್ರಮ ಆಚರಣೆ ಮಾಡಿದರು ಇದು ನನ್ನ ಮಗನ ಸಾಧನೆಯಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಯ ಸಾಧನೆ ಎಂದು ಬಣ್ಣಿಸಿದರು,ಕಾಲೇಜಿನ ಅಧ್ಯಕ್ಷರಾದ ಎಸ್.ಎಂ.ಕೌಶಿಕ್ ಅವರ ದೊಡ್ಡಪ್ಪ ಸುಂಕುಅಮರನಾಥ್ ಮಾತನಾಡಿ ನಮ್ಮ ಕಾಲೇಜಿನಲ್ಲಿ ಬಹುತೇಕ ಗ್ರಾಮೀಣ ಭಾಗದ ಮಕ್ಕಳೆ ಹೆಚ್ಚು ಒದುತ್ತಿದ್ದಾರೆ ಕಳೆದ ಆರು ವರ್ಷಗಳಿಂದ ನಮ್ಮಲ್ಲಿ ಒದುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಕಷ್ಟ ಅರಿತು ಉತ್ತಮ ವಿದ್ಯಾಭ್ಯಾಸ ಮಾಡಿ ತಮ್ಮ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ತಂದೆತಾಯಿಗಳಿಗೂ ಮತ್ತು ಕಾಲೇಜಿಗೂ ಉತ್ತಮ ಹೆಸರು ತಂದು ಕೋಡುತ್ತಿದ್ದಾರೆ ಎಂದರು.
ಈ ಸಂದರ್ಬದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.
ವಿಙ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಎಸ್.ಎಂ.ಕೌಶಿಕ್ ಅವರನ್ನು ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಗೌರವಿಸಿ ಅಭಿನಂಧಿಸಿ ಮೆಚ್ಚು ವ್ಯಕ್ತಪ್ಡಿಸುತ್ತಿದ್ದಾರೆ ಎಸ್.ಎಂ.ಕೌಶಿಕ್ ಸಾಧನೆಗೆ ಉಪನ್ಯಾಸಕರ ಹಾಗೂ ಪೋಷಕರ ಕಾಲೇಜು ಆಡಳಿತ ಮಂಡಳಿಯವ ಸಹಕಾರ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದಿಂದ ಗೌರವ
ಪಿಯು ಪರಿಕ್ಷೇಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಎಸ್.ಎಂ.ಕೌಶಿಕ್ ಅವರನ್ನು ಜಿಲ್ಲಾಡಿಳಿತ ಗೌರವಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಕರೆಯಿಸಿದ್ದಾರೆ.
ಕೌಶಿಕ್ ಮನದಾಳದ ಮಾತು
ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುವ ಕೌಶಿಕ್ ಮನದಾಳದಿಂದ ಮಾತನಾಡಿ ನಾನು ಯಾವತ್ತು ಒತ್ತಡದಿಂದ ಒದುತ್ತಿರಲಿಲ್ಲ ಆಸಕ್ತಿಯಿಂದ ಇಷ್ಟ ಪಟ್ಟು ಒದಿದ ಕಾರಣದಿಂದ ರ್ಯಾಂಕ್ ಬರಲು ಕಾರಣವಾಗಿದೆ ಮುಂದೆ ಕಂಪ್ಯೂಟರ್ ಸೈನ್ಸ್ ಇಂಜನಿಯರಿಂಗ್ ಒದುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು.