ನ್ಯೂಜ್ ಡೆಸ್ಕ್: ತಿರುಮಲವಾಸ ಶ್ರೀ ವೆಂಕಟೇಶ್ವರ ಗರುಡ ವಾಹನ ಸೇವೆಯನ್ನು ಶ್ರೀನಿವಾಸನ ಭಕ್ತರು ಕಣ್ಣುಗಳಿಗೆ ಹಬ್ಬವೆಂದು ಆನಂದಿಸುತ್ತಾರೆ ಕಳೆದ ಎರಡು ವರ್ಷಗಳ ನಂತರ ತಿರುಮಲ ಬೆಟ್ಟದ ಮೇಲೆ ಭಕ್ತಾದಿಗಳ ನಡುವೆ ನಡೆಸಲಾದ ಶ್ರೀ ವೆಂಕಟೇಶ್ವರನ ವೈಭವೊಪೇತವಾಗಿ ನಡೆದ ಗರುಡ ವಾಹನ ಸೇವೆಯನ್ನು ಎರಡು ಲಕ್ಷ ಜನ ಕಣ್ತುಂಬಿಕೊಂಡರು.
ಬೆಳೆಗ್ಗೆ ವೆಂಕಟೇಶ್ವರನಿಗೆ ಮೋಹಿನಿ ಅಲಂಕಾರ ಮಾಡಲಾದ ಮಲಯಪ್ಪನನ್ನು ರಥ ಬೀದಿಗಳಲ್ಲಿ ಭಕ್ತಕೋಟಿ ವೀಕ್ಷಿಸಿದರು. ಮಧ್ಯಾಹ್ನದ ನಂತರ ರಂಗನಾಯಕರ ಮಂಟಪದಲ್ಲಿ ಶ್ರೀ ವೆಂಕಟೇಶ್ವರನಿಗೆ ಬೃಹತ್ ಆಭರಣಗಳಾದ ರೇಷ್ಮೆ ವಸ್ತ್ರಗಳಿಂದ,ವಜ್ರ,ಚಿನ್ನದ ಆಭರಣಗಳಿಂದ ಅಲಂಕರಿಸಿ ವಜ್ರ ಖಚಿತವಾದ ಶಂಕು ಚಕ್ರಗಳಿಂದ ಅಲಂಕಾರ ಮಾಡಿದ ದೇವ ದೇವ ಶ್ರೀನಿವಾಸನನ್ನು ಅರ್ಚಕರು ವಾಹನ ಮಂಟಪಕ್ಕೆ ತಂದು ಗರುಡ ವಾಹನದ ಮೇಲೆ ಪ್ರತಿಷ್ಠಾಪಿಸಿ .ಶನಿವಾರ ಸಂಜೆ 7 ಗಂಟೆಗೆ ಗರುಡ ವಾಹನ ಸೇವೆ ಆರಂಭವಾಗಿ ರಾತ್ರಿ 11 ಗಂಟೆಯವರಿಗೂ ನಡೆಯಿತು.
ಗರುಡ ಸೇವೆ ಹಾದು ಹೋಗುವ ರಥ ಬೀದಿಗಳಲ್ಲಿ ಪೂರ್ವ ಯೋಜನೆಯಂತೆ ನಿಗದಿ ಮಾಡಲಾದ ಗ್ಯಾಲರಿಗಳಲ್ಲಿಂದಲೇ ಭಕ್ತರು ಗರುಡವಾಹನದ ಮೇಲೆ ಬಂದಂತ ಶ್ರೀನಿವಾಸನನ್ನು ನೋಡಿ ಆನಂದಿಸಿದರು.ಗರುಡವಾಹನ ಸಾಗುವ ದಾರಿಯಲ್ಲಿ ಅನ್ನಮಾಚಾರ್ಯರು ರಚಿಸಿದ ಗೀತೆಗಳನ್ನು ಹಾಡುತ್ತ ಜಾನಪದ ಕಲಾವಿದರು ವಿಶಿಷ್ಠ ವೇಶ ಭೂಷಣಗಳ ಜಾನಪದ ಕಲಾವಿದರು ಸಾಗುತ್ತಿದ್ದರು , ಕೋಲಾಟದ ಕಲಾವಿದರು, ಜೊತೆಗೆ ಮಂಗಳ ವಾದ್ಯಗಳು ವಿವಿಧ ವಾದ್ಯಗಳ ವಿದ್ವಾಂಸರು ಸಾಗುತ್ತಿದ್ದರು.