ಶ್ರೀನಿವಾಸಪುರ:ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಮನಿತರ ಶೋಷಿತ ವರ್ಗಗಳಿಗೆ ಧ್ವನಿಯಾಗಿ ಸ್ವಾಭಿಮಾನ ಬದುಕಿಗೆ ದಾರಿ ತೋರಿಸಿದ ಧೀಮಂತ ನಾಯಕ ಎಂದು ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರಾದ ಗಾಯಿತ್ರಿಮುತ್ತಪ್ಪ ಹೇಳಿದರು ಅವರು ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿವಸದ ಅಂಗವಾಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದ ಡಾ.ಅಂಬೇಡ್ಕರ್ ಪುತ್ಥಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿರು,ಬಾಬಾ ಸಾಹೇಬರು ಪ್ರಪಂಚವೇ ಗೌರವಿಸಿ ಮೆಚ್ಚುವಂತಹ ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ. ಸರ್ವರಿಗೂ ಸಮಬಾಳು ನೀಡುವ ಕಲ್ಪನೆಯೊಂದಿಗೆ ಸಂವಿಧಾನ ರಚಿಸಿದ ಅಂಬೇಡ್ಕರ್ ಆಶಯ ಈಡೇರಿಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಪೂಲುಶಿವಾರೆಡ್ದಿ, ಗೋರವಿಮಾಕಲಹಳ್ಳಿ ಶ್ರೀನಿವಾಸ್ ಹೋಳೂರುಸಂತೋಷ್,ನಾರಯಣಪುರ ವೆಂಕಟೇಶ್,ಕನಿಗಾನಹಳ್ಳಿ ವೆಂಕಟೇಶ್ ಮುಂತಾದವರು ಇದ್ದರು.
