- ಎರಡು ಸಲ ಜೆಡಿಎಸ್ ನಿಂದ ಶಾಸಕ ಕೆ.ಶ್ರೀನಿವಾಸಗೌಡ.
- ಮಗನ ರಾಜಕೀಯ ಭವಿಷ್ಯತ್ತಿಗಾಗಿ ಕಾಂಗ್ರೆಸ್
- ವರ್ತೂರು ಪ್ರಕಾಶ್ ವಿರುದ್ದ ಗೆದಿದ್ದ ಶ್ರೀನಿವಾಸಗೌಡ.
- 2018 ಚುನಾವಣೆಯಲ್ಲಿ ಜೆಡಿಎಸ್ ಸ್ಥಳೀಯ ಮುಖಂಡರ ಒತ್ತಡಕ್ಕೆ ಟಿಕೆಟ್
ಕೋಲಾರ:ಕೋಲಾರದ ಜೆಡಿಎಸ್ ಶಾಸಕ ಕುಡುವನಹಳ್ಳಿಶ್ರೀನಿವಾಸಗೌಡ ಪಕ್ಷ ತೊರೆಯುವ ಸ್ಪಷ್ಟ ಸೂಚನೆ ನೀಡಿದರು ಇಂದು ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು ನನ್ನನ್ನು ಜೆಡಿಎಸ್ ನಿಂದ ಉಚ್ಛಾಟಿಸಿದ್ದಾರೆ ಎಂದು ಹೇಳಿಕೊಂಡರು.
ಜೆಡಿಎಸ್ ಕುಟುಂಬಕ್ಕೆ ಸೀಮಿತವಾದ ಪಕ್ಷವಾಗಿದೆ ಎಂದು ಜೆಡಿಎಸ್ ವರಿಷ್ಟ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ದ ತೀವ್ರವಾಗ್ದಾಳಿ ನಡೆಸಿದ ಅವರು ಅಧಿಕಾರದಲ್ಲಿದ್ದಾಗ ಎಲ್ಲ ಅಧಿಕಾರ ಹಾಗು ಒಳ್ಳೋಳ್ಳೆ ಮಂತ್ರಿ ಪದವಿಗಳು ಅವರ ಕುಟುಂಬಕ್ಕೆ ಬೇಕು ಎಂದು ವ್ಯಂಗ್ಯವಾಡಿದರು..ಕೆಸಿ ವ್ಯಾಲಿ ನೀರಾವರಿ ಯೋಜನೆ ವಿಚಾರದಲ್ಲಿ ಕುಮಾರಸ್ವಾಮಿಗೆ ಅಸೂಯೆ ಪಡ್ತಾರೆ ಈ ಯೋಜನೆ ಜಾರಿಗೆ ಬರಲು ಶ್ರಮಿಸಿದ ರಮೇಶ್ ಕುಮಾರ್, ಕೃಷ್ಣಬೈರೇಗೌಡರ ಹೊಗಳಿದರೆ ಕುಮಾರಸ್ವಾಮಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ ನನ್ನ ವಿರುದ್ದ ಉದ್ದೇಶಪೂರ್ವಕವಾಗಿ ಹಗೆ ಸಾಧಿಸುತ್ತಿದ್ದಾರೆ ಎಂದರು.ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಲು ಡಿಕೆ.ಶಿವಕುಮಾರ್ ಜೊತೆ ಮಾತುಕತೆ ನಡೆದಿರುವುದಾಗಿ ಬಹಿರಂಗ ಪಡಿಸಿದರು.
ನನ್ನ ಮಗನ ರಾಜಕೀಯ ಭವಿಷ್ಯತ್ತಿಗಾಗಿ ನಾನು ಕಾಂಗ್ರೆಸ್ ಸೇರ ಬಯಸುತ್ತಿರುವುದಾಗಿ ಹೇಳಿದರು. ಕಾಂಗ್ರೆಸ್ ಬೀಡಲು ಅಂದು ಒರ್ವ ಮಹಾನುಭಾವ ತೊಂದರೆ ಮಾಡಿದ್ದ ಅದನ್ನು ನಿವಾರಿಸಿ ಈಗ ನನ್ನ ಮಗನಿಗೆ ಹೋಳೂರು ಜಿಲ್ಲಾಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ದಿಸಲು ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ ಹಾಗೆ ಕೋಲಾರದಿಂದ ನನಗೆ ಎಂ.ಎಲ್.ಎ ಟಿಕೆಟ್ ನೀಡುವ ಬಗ್ಗೆ ಶಿವಕುಮಾರ್ ಅವರಿಂದ ಅಶ್ವಾಸನೆ ಸಿಕ್ಕಿದೆ ಎಂದಿರುತ್ತಾರೆ.