ಶ್ರೀನಿವಾಸಪುರ: ಪಕ್ಷದ ಮುಖಂಡರ ನಡುವೆ ನನಗೂ ಮನಸ್ಥಾಪ ಇರಬಹುದು ಆದರೇ ಪಕ್ಷಕ್ಕೆ ದ್ರೋಹ ಬಗೆಯುವಂತ ಕೆಲಸ ಮಾಡಲಾರೆ ಎಂದು ಮಾವು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗು ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ದಳಸನೂರುಗೋಪಾಲಕೃಷ್ಣ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಜೊತೆಗೂಡಿ ಮಾತನಾಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಎಂ.ಎಲ್. ಅನಿಲ್ ಕುಮಾರ್ ಅವರ ಗೆಲುವಿಗೆ ನನ್ನ ಬೆಂಬಲವಿದೆ ಎಂದರು.
ಅನೇಕ ವರ್ಷಗಳಿಂದ ನಮ್ಮ ಕುಟುಂಬದ ಹಿರಿಯರಾದಿಯಾಗಿ ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಪೂರ್ವಿಕರು ಹಾಕಿರುವ ಅಡಿಪಾಯದಲ್ಲಿ ಕೆಲಸ ಮಾಡಿರುವೆ ವಿದ್ಯಾರ್ಥಿ ದಿಸೆಯಿಂದ ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಪಕ್ಷವು ಸಹ ನನ್ನನ್ನು ಗುರ್ತಿಸಿ ಕೆಲವು ಅಧಿಕಾರಗಳನ್ನು ನೀಡಿದೆ. ಇದನ್ನು ಎಂದಿಗೂ ಮರೆಯುವುದಿಲ್ಲ. ಇತ್ತೀಚೆಗೆ ಹಲವು ಸಭೆ ಸಮಾರಂಭಗಳಲ್ಲಿ ನಾನು ಭಾಗವಹಿಸದೆ ಇರಬಹುದು, ಅದಕ್ಕೆ ಹಲವು ಕಾರಣಗಳಿವೆ. ಪ್ರತಿಯೊಂದಕ್ಕೂ ಕಾಲವೇ ಉತ್ತರ ಹೇಳುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ಕಾಂಗ್ರೆಸ್ಅಧ್ಯಕ್ಷಅಕ್ಬರ್ ಶರೀಫ್, ಕಸಬಾ ಮಹಿಳಾ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷೆರೂಪಶ್ರೀನಿವಾಸ್, ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿಅಧ್ಯಕ್ಷ ರವಿಕುಮಾರ್, ದಳಸನೂರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಮ್ಮ, ಉಪಾಧ್ಯಕ್ಷ ಜಗದೀಶ್, ಮುಖಂಡರಾದ ದ್ವಾರಸಂದ್ರ ಮುನಿವೆಂಕಟಪ್ಪ, ಕೆ.ಎಂ.ಎಫ್. ನಿರ್ದೇಶಕ ಹನುಮೇಶ್, ಕೆ.ಕೆ. ಮಂಜುನಾಥ್, ಪುರಸಭಾ ಸದಸ್ಯಅನೀಸ್, ಮಾಜಿ ಸದಸ್ಯ ಮುಕ್ತಿಯಾರ್, ಮೀಸಗಾನಹಳ್ಳಿ ಪಟೇಲ್ ನಾರಾಯಣಸ್ವಾಮಿ, ವೀರಭದ್ರೇಗೌಡ, ವಿರಬದ್ರಸ್ವಾಮಿ, ಅಂಚಿಗಾನಹಳ್ಳಿ ಚಲಪತಿ, ಯುವಕಾಂಗ್ರೆಸ್ ಎಸ್.ಸಿ.ಎಸ್.ಟಿ. ವಿಭಾಗದ ನರಸಿಂಹಮೂರ್ತಿ, ಮತ್ತಿತರರು ಹಾಜರಿದ್ದರು.
ಬ್ಯಾಟಪ್ಪ ರಾಜಕೀಯ ಪೌರೋಹಿತ್ಯ! ಲೊಕಸಭೆ ಚುನಾವಣೆ ನಂತರದಲ್ಲಿ ಬಹುತೇಕ ಶಾಸಕ ರಮೇಶ್ ಕುಮಾರ್ ಅವರಿಂದ ಅಂತರ ಕಾಯ್ದುಕೊಂಡಿದ್ದ ದಳಸನೂರುಗೋಪಾಲಕೃಷ್ಣ ಕಾಂಗ್ರೆಸ್ ಸಭೆ ಸಮಾರಂಭಗಳಲ್ಲಿ ಕಾಣಿಸದೆ ದೂರವೆ ಉಳದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಬೆಂಬಲ ವ್ಯಕ್ತಪಡಿಸುವುದನ್ನು ತಿಳಿಸುವ ಅಂಗವಾಗಿ ಗೋಪಾಲಕೃಷ್ಣ,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಜೊತೆಕೂತು ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿದ ಹಿಂದೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬ್ಯಾಟಪ್ಪ ಅವರ ರಾಜಕೀಯ ಪೌರೋಹಿತ್ಯ ಎದ್ದುಕಾಣುತಿತ್ತು!