ನನ್ನ ದೇಶ ನನ್ನ ಹೆಮ್ಮೆ
ಉಕ್ರೇನ್ ತೊರೆಯುವ ದಾವಂತದಲ್ಲಿ ಇರುವಂತ ಸಂಕಷ್ಟ ಪರಿಸ್ಥಿತಿಯಲ್ಲಿ ಉಕ್ರೇನ್ ನಲ್ಲಿರುವ ಭಾರತದ ಧೂತವಾಸದ ಕಛೆರಿ ಸಿಬ್ಬಂದಿಯ ಜವಾಬ್ದಾರಿಯಾಗಿ ನಡೆದುಕೊಂಡ ಬಗ್ಗೆ ನಮಗೆ ಹೆಮ್ಮೆಯಿದೆ,ನಾವು ವಿದ್ಯಾರ್ಥಿಗಳು ಎಷ್ಟು ಸಂಕಷ್ಟದಲ್ಲಿ ಇದ್ದವೊ ಭಾರತದ ಧೂತವಾಸದ ಕಛೆರಿ ಸಿಬ್ಬಂದಿ ಸಹ ನಮ್ಮಷ್ಟೆ ಇಕ್ಕಟ್ಟಿನಲ್ಲಿ ಇದ್ದರು ಅವರ ಮೇಲೆ ಅರೋಪ ಮಾಡುವುದು ತರವಲ್ಲ ನಮ್ಮಂತೆ ಇತರರು ಉಕ್ರೇನ್ ತೊರೆಯುವ ದಾವಂತದಲ್ಲಿರುವ ಸಂದರ್ಭದಲ್ಲಿ ವೈಯುಕ್ತಿಕ ಹಿತಾಸಕ್ತಿ ಗಣನೆಗೆ ತಗೆದುಕೊಳ್ಳಬಾರದು.
ಉಕ್ರೇನ್ ವೈದ್ಯಕೀಯ ವಿದ್ಯಾರ್ಥಿ ಗೋವರ್ಧನ್
ಶ್ರೀನಿವಾಸಪುರ: ರಷ್ಯಾ ದಾಳಿಯಿಂದ ಉಕ್ರೇನ್ ಸರ್ವನಾಶವಾಗುತ್ತಿದೆ ಇಂತಹ ಯುದ್ದಭೂಮಿಯಿಂದ ಶ್ರೀನಿವಾಸಪುರದ ವೈದ್ಯಕೀಯ ವಿದ್ಯಾರ್ಥಿ ಗೋವರ್ಧನ್ ನೆಮ್ಮದಿಯಿಂದ ಉಕ್ರೇನ್ ತೊರೆದು ಹಂಗೇರಿ ದೇಶದ ಮೂಲಕ ಭಾರತಕ್ಕೆ ವಾಪಸ್ಸು ಬಂದಿರುತ್ತಾನೆ.
ಶ್ರೀನಿವಾಸಪುರದ ಪಡತಿಮ್ಮನಹಳ್ಳಿ ಗ್ರಾಮದ ಶಿವಾರೆಡ್ಡಿ-ಗೀತಮ್ಮನ ಹಿರಿಯ ಪುತ್ರ ಗೋವರ್ದನ್ ಊರಿಗೆ ಬಂದಿರುತ್ತಾನೆ ವೈದ್ಯಕೀಯ ವಿದ್ಯಾಬ್ಯಾಸಕ್ಕಾಗಿ ಉಕ್ರೇನ್ ದೇಶದ ವಿನ್ನಿಟ್ಸಿಯಾ ನಗರದ ನ್ಯಾಷನಲ್ ಪಿರೋಗೋವ್ ಸ್ಮಾರಕ ವೈದ್ಯಕೀಯ ವಿಶ್ವವಿದ್ಯಾಲಯ, VNMU ಸೇರಿದ್ದು ನಾಲ್ಕನೇಯ ವರ್ಷದ ವೈದ್ಯಕೀಯ ಕೋರ್ಸ್ ಮುಗಿಯುವ ಹಂತಕ್ಕೆ ಬಂದಿದ್ದು ಯುದ್ದದ ಕಾರ್ಮೊಡ ಕವಚಿಕೊಂಡ ಹಿನ್ನಲೆಯಲ್ಲಿ ಉಕ್ರೇನ್ ತೊರೆದು ಬಂದಿದ್ದು ಅವನು ದೇಶಕ್ಕೆ ಬಂದಿರುವ ಬಗ್ಗೆ ಅವನ ಪ್ರತಿ ಮಾತಲ್ಲೂ ಹೆಮ್ಮೆಯಿಂದ ಹೇಳುತ್ತಾನೆ.
ನನ್ನೊಟ್ಟಿಗೆ ಇದ್ದಂತ ಕೆಲ ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ ಅವರು ಟಿ.ವಿ ಚಾಲನಗಳಲ್ಲಿ ದೇಶ ಕುರಿತಾಗಿ ಆಡಳಿತ ವ್ಯವಸ್ಥೆ ಕುರಿತಾಗಿ ಕೇವಲವಾಗಿ ಮಾತನಾಡಿರುವುದು ಅವರಿಗೆ ತಕ್ಕದಲ್ಲ, ಉಕ್ರೇನ್ ಅಕ್ಷರಶಃ ಯುದ್ದಭೂಮಿಯಾಗಿದೆ ಅಲ್ಲಿನ ಜನ ನಮ್ಮಂತ ವಿದ್ಯಾರ್ಥಿಗಳು ಇತರರು ಉಕ್ರೇನ್ ತೊರೆಯುವ ದಾವಂತದಲ್ಲಿ ಇರುವಂತ ಪರಿಸ್ಥಿತಿಯಲ್ಲಿ ಉಕ್ರೇನ್ ನಲ್ಲಿರುವ ಭಾರತದ ಧೂತವಾಸದ ಕಛೆರಿ ಸಿಬ್ಬಂದಿಯ ಜವಾಬ್ದಾರಿಯಾಗಿ ನಡೆದುಕೊಂಡ ನಡವಳಿಕೆ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಹೇಳುವ ಗೋವರ್ದನ್ ಸಾವಿರಾರು ಜನ ಊರು ತೋರೆಯುವ ಸಂಕಷ್ಟದಲ್ಲಿ ಇದ್ದಾರೆ ಇಂತ ಸಂದರ್ಭದಲ್ಲಿ ವೈಯುಕ್ತಿಕ ಹಿತಾಸಕ್ತಿ ಗಣನೆಗೆ ಬಾರದು ನಾವು ವಿದ್ಯಾರ್ಥಿಗಳು ಎಷ್ಟು ಸಂಕಷ್ಟದಲ್ಲಿ ಇದ್ದವೊ ಭಾರತದ ಧೂತವಾಸದ ಕಛೆರಿ ಸಿಬ್ಬಂದಿ ಸಹ ನಮ್ಮಷ್ಟೆ ಇಕ್ಕಟ್ಟಿನಲ್ಲಿ ಇದ್ದರು ಅವರ ಮೇಲೆ ಅರೋಪ ಮಾಡುವುದು ತರವಲ್ಲ ಎನ್ನುತ್ತಾನೆ.ಉಕ್ರೇನ್ ತೊರೆಯುವ ಬಗ್ಗೆ ಭಾರತದ ಧೂತವಾಸದ ಕಛೆರಿ ಸಿಬ್ಬಂದಿ ಯುದ್ದಕ್ಕೆ ಮೊದಲೆ ತಿಳಿಸಿದ್ದಾರದರೂ ನಾವು ವಿದ್ಯಾರ್ಥಿಗಳು ಶಿಕ್ಷಣ ಬಿಟ್ಟು ವಾಪಸ್ಸು ಭಾರತಕ್ಕೆ ಬರುವ ಬಗ್ಗೆ ನಾವೇ ಸ್ಪಷ್ಟ ನಿರ್ಧಾರ ತಗೆದುಕೊಳ್ಳದೆ ಗೊಂದಲದಲ್ಲಿ ಇದ್ದ ಕಾರಣ ಇಷ್ಟೆಲ್ಲ ಆಗಿದೆ,
ತಾನು ವಾಸವಿದ್ದ ಉಕ್ರೇನ್ ದೇಶದ ವಿನ್ನಿಟ್ಸಿಯಾ ನಗರದಿಂದ ಸುಮಾರು ಒಂದು ಸಾವಿರ ಕೀ.ಮಿ ದೂರದ ಹಂಗೇರಿ ದೇಶಕ್ಕೆ ಅಂದಾಜು 12-15 ಗಂಟೆ ಪ್ರಯಾಣ ಹಂಗೇರಿ ಗಡಿಯವರಿಗೂ ರೈಲಿನಲ್ಲಿ ಪ್ರಯಾಣ ಮಾಡಿ ನಂತರ ಹಂಗೇರಿ ಗಡಿಗೆ ಹೋಗಲು ನಡೆದುಕೊಂಡು ಹೋದೆ ಅಲ್ಲಿ ನಾವು ಭಾರತೀಯರು ಎಂದು ಹಂಗೇರಿಯ ಜನತೆ ಅಲ್ಲಿನ ಸರ್ಕಾರ ಜೊತೆಗೆ ಉತ್ತಮವಾಗಿ ನಡೆಸಿಕೊಂಡರು ಅಲ್ಲಿಂದ ಹಂಗೇರಿ ರಾಜಧಾನಿ ಬುಡಾಪೆಸ್ಟ್ ನಗರಕ್ಕೆ ನಮ್ಮನ್ನು ಭಾರತದ ಧೂತವಾಸದ ಕಛೆರಿ ಸಿಬ್ಬಂದಿ ಕರೆದುಕೊಂಡು ಹೋಗಿ ನಮಗೆ ರಾಜಮರ್ಯಾದೆ ನೀಡಿದರು, ಅಲ್ಲಿಂದ ಭಾರತ ಸರ್ಕಾರ ಕಲ್ಪಿಸಿದ ಏರೋಪ್ಲೇನ್ ಸೌಕರ್ಯದ ಮೂಲಕ ಭಾರತಕ್ಕೆ ಬಂದಾಗ ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಕರ್ನಾಟಕ ಸರ್ಕಾರ ವಸತಿ ನೀಡಿದ್ದರು ಮತ್ತು ಅಲ್ಲಿ ಸಹ ನಮ್ಮನ್ನು ಉತ್ತಮವಾಗಿ ನಡೆಸಿಕೊಂಡಿತು ಎಂದು ವಿವರಿಸುತ್ತಾನೆ.
ಉಕ್ರೇನ್ ಗೆ ಅದಾಯ ತಂದುಕೊಡುವ ಅಲ್ಲಿನ ರಾಜಧಾನಿ ಕಿವ್-ಕಾರ್ಕಿವ್ ಸೇರಿದಂತೆ ಬಹುತೇಕ ನಗರಗಳು ರಷ್ಯಾ ದಾಳಿಯಿಂದ ಪತನವಾಗಿದೆ ಭಯದ ವಾತವರಣ ಅಲ್ಲಿದೆ ಜನವಸತಿ ಪ್ರದೇಶಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ ನಮ್ಮ ವೈದ್ಯಕೀಯ ಶಿಕ್ಷಣದ ಬಗ್ಗೆ ಕಾದು ನೋಡೋಣ ನಮ್ಮ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂದು ಎನೂ ಈಗಲೆ ಹೇಳಲಾರೆ ಎಂದು ಹೇಳುತ್ತಾರೆ.
ರಷ್ಯ-ಉಕ್ರೇನ್ ಯುದ್ದ ಪ್ರಾರಂಭವಾದ ನಂತರ ನಮ್ಮ ಮಗ ಅಲ್ಲಿನ ಪರಿಸ್ಥಿತಿ ಕುರಿತಾಗಿ ಎಲ್ಲಾ ಬೆಳವಣಿಗೆಗಳನ್ನು ಅಗಿಂದಾಗೆ ನಮಗೆ ವಿಡಿಯೋ ಕಾಲ್ ಮೂಲಕ ತಿಳಿಸುತ್ತಿದ್ದ ಎನ್ನುತ್ತಾರೆ ಶಿವಾರೆಡ್ದಿ-ಗೀತಮ್ಮ
ಉಕ್ರೇನ್ ಯುದ್ದಭೂಮಿಯಲ್ಲಿರುವ ಇನ್ನು ನಮ್ಮ ದೇಶದ ವಿದ್ಯಾರ್ಥಿಗಳು ನೆಮ್ಮದಿಯಾಗಿ ವಾಪಸ್ಸು ಕರೆಸಲು ಭಗವಂತ ಅನುಗ್ರಹಿಸಲಿ ಎಂದು ಗೋವರ್ದನ್ ತಾಯಿ ಗೀತಮ್ಮ ದೇವರಿಗೆ ಮೋರೆ ಇಡುತ್ತಾರೆ
ಸಂಬ್ರಮಿಸಿದ ಅಜ್ಜಿ-ತಾತ
ಪೋಷಕರಿಗೂ ಮೊದಲೆ ಅಜ್ಜಿತಾತ ಸಂಬ್ರಮಿಸಿದ್ದು ಗೋವರ್ದನ್ ಉಕ್ರೇನ್ ದಾಟಿ ಬಂದಿರುವ ಸುದ್ದಿ ಹೊರಬರುತ್ತಿದ್ದಂತೆ ಗೋವರ್ದನ್ ತಂದೆ-ತಾಯಿಗಿಂತಲೂ ಹೆಚ್ಚು ಸಂಭ್ರಮ ಪಟ್ಟಿದ್ದು ಅವರ ಅಜ್ಜಿತಾತ ಚಿಂತಾಮಣಿಯಲ್ಲಿ ಖ್ಯಾತ ಆಸ್ಪತ್ರೆ ಪೂರ್ಣಾ ಕಣ್ಣಿನ ಆಸ್ಪತ್ರೆ ಮಾಲಿಕ, ನಿವೃತ್ತ ಮೀನುಗಾರಿಕೆ ಇಲಾಖೆ ಅಧಿಕಾರಿ ಸೋಣಪ್ಪರೆಡ್ದಿ ದಂಪತಿ ಹೆಚ್ಚು ಸಂಭ್ರಮಿಸಿದ್ದಾರೆ ತಾವೆ ಮುಂದೆ ನಿಂತು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ಗೋವರ್ಧನ್ ನನ್ನು ಚಿಂತಾಮಣಿಗೆ ಕರೆ ತಂದು ಮನೆಯಲ್ಲಿ ಸಿಹಿ ಊಟ ಮಾಡಿಸಿ ನಂತರ ಸ್ವಗ್ರಾಮವಾದ ಪಡತಿಮ್ಮನಹಳ್ಳಿಗೆ ಕರೆತಂದಿರುತ್ತಾರೆ