ಚಿಂತಾಮಣಿ:ಈ ಶೈಕ್ಷಣಿಕ ವರ್ಷದಿಂದಲೆ ಚಿಂತಾಮಣಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾರ್ಯರಂಭವಾಗಲಿದೆ. ದಶಕಗಳ ಕನಸಿಗೆ ಈಗ ಜೀವಬಂದಿದೆ ಎನ್ನಬಹುದು, ಪ್ರಸಕ್ತ ಸಾಲಿನಿಂದಲೆ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಇಂಜನಿಯರಿಂಗ್ ಕಾಲೆಜು ಆರಂಭಗೊಳ್ಳಲಿದ್ದು ಈ ಶೈಕ್ಷಣಿಕ ವರ್ಷದ ಸಿಇಟಿ ಕೌನ್ಸಲಿಂಗ್ ಸೀಟ್ ಮ್ಯಾಟ್ರಿಕ್ಸ್ ಗೆ ಸೇರಿಸಲಾಗಿದ್ದು ಮುಂದೆ ನಡೆಯುವಂತ ಸಿಇಟಿ ಕೌನ್ಸಲಿಂಗ್ ನಲ್ಲಿ ವಿದ್ಯಾರ್ಥಿಗಳು ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಆರಂಭಿಕ ನಾಲ್ಕು ಕೋರ್ಸುಗಳು
ಸರಕಾರಿ ಪಾಲಿಟೆಕ್ನಿಕ್ನಲ್ಲಿ ತಾತ್ಕಾಲಿಕವಾಗಿ ತರಗತಿಗಳು ಪ್ರಾರಂಭವಾಗಲಿದ್ದು ನೂತನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್, ಬಿ.ಇ. ಕಂಪ್ಯೂ ಟರ್ ಸೈನ್ಸ್ (AIML)Artificial Intelligence Markup Language, ಬಿ.ಇ. ಇನ್ ಎಲೆಕ್ಟಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಎಂಜನಿಯರಿಂಗ್ ಹಾಗೂ ಬಿ.ಇ. ಎಲೆಕ್ಟಿಲ್ ಹಾಗೂ ಎಲೆಕ್ಟ್ರಾನಿಕ್ಸ್ ಸೇರಿದಂತೆ ನಾಲ್ಕು ಕೋರ್ಸುಹಳನ್ನು ಆರಂಭಿಸಲಾಗುತ್ತದೆ ಬರುವಂತ ವರ್ಷಗಳಲ್ಲಿ ಇನ್ನಷ್ಟು ಹೊಸ ಕೋರ್ಸುಗಳ ಸೇರ್ಪಡೆ ಆಗಲಿದೆ. ಇಂಜಿನಿಯರಿಂಗ್ ಕಾಲೇಜಿಗೆ ಅವಶ್ಯಕವಾಗಿರುವ ಬೋಧಕ ಸಿಬ್ಬಂದಿಯನ್ನು ರಾಜ್ಯದ ವಿವಿಧ ಸರ್ಕಾರಿ ತಾಂತ್ರಿಕ ಮಹಾ ವಿದ್ಯಾಲಯಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಧ್ಯಾಪಕರನ್ನು ಚಿಂತಾಮಣಿ ನೂತನ ಕಾಲೇಜಿಗೆ ನಿಯೋಜಿಸಲು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಿದ್ಧತೆ ಮಾಡಿಕೊಂಡಿದೆ ಎಂದು ನೂತನ ಇಂಜನಿಯರಿಂಗ್ ಕಾಲೇಜು ಪ್ರಭಾರಿ ಪ್ರಾಂಶುಪಾಲ ಜಿ.ಶಿವಮೂರ್ತಿ ಹೇಳಿದ್ದಾರೆ.
ಸರ್ವತಾ ಹರ್ಷ ಉನ್ನತ ಶಿಕ್ಷಣ ಸಚಿವರಿಗೆ ಅಭಿನಂದನೆ
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಇದುವರಿಗೂ ಯಾರು ಈ ಮಟ್ಟದ ಪ್ರಯತ್ನ ಮಾಡಿರಲಿಲ್ಲ,ಕೋಲಾರದಲ್ಲಿ ಇದುವರಿಗೂ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ ಹಾಗೆ ಇಂಜನಿಯಂರಿಂಗ್ ಕಾಲೇಜು ಇಲ್ಲ ಹಾಗಾಗಿ ಆ ಕೊರತೆಯನ್ನು ಕಳೆದ ಸರ್ಕಾರದಲ್ಲಿ ಚಿಕ್ಕಬಳ್ಳಾಪುರದ ಶಾಸಕರಾಗಿದ್ದ ಅಂದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ತಂದರು ಜೊತೆಗೆ ಖಾಸಗಿ ವೈದ್ಯಕೀಯ ಕಾಲೇಜು ಬಂದಿತು ಕೋಲಾರ ಭಾಗದಲ್ಲಿ ಸರ್ಕಾರಿ ತಾಂತ್ರಿಕ ಹಾಗು ವೈದ್ಯಕೀಯ ವಿದ್ಯಾಸಂಸ್ಥೆಗಳ ಕೊರತೆ ಕಾಡುತಿತ್ತು ಅದನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನಿವಾರಿಸಿದ್ದು ತಾಲೂಕು ಮಟ್ಟದಲ್ಲಿ ಇಂಜನಿಯರಿಂಗ್ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರವಾಗಿದ್ದು ಸಾರ್ವಜನಿಕ ವಲಯದಲ್ಲಿ ಸರ್ವತಾ ಹರ್ಷ ವ್ಯಕ್ತವಾಗಿದೆ ಅಲ್ಲದೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಅಭಿನಂಧನೆ ಹೇಳುತ್ತಿದ್ದಾರೆ.
ಮಾಳಪಲ್ಲಿ ಕುಟುಂಬದ ಸಾಧನೆ
ಡಾ.ಎಂ.ಸಿ.ಸುಧಾಕರ್ 2008ರಲ್ಲಿ ಮೊದಲ ಬಾರಿಗೆ ಶಾಸಕರಾದಗಲೆ ಚಿಂತಾಮಣಿಯಲ್ಲಿ ಸರ್ಕಾರಿ ಇಂಜನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ತರುವ ಬಗ್ಗೆ ದೊಡ್ದ ಮಟ್ಟದ ಪ್ರಯತ್ನ ನಡೆಸಿದ್ದರು ಆಗ ಅದು ಫಲ ಕೊಡಲಿಲ್ಲ ನಂತರದಲ್ಲಿ ಎರಡು ಬಾರಿ ಸೋಲು ಅವರ ಕನಸಿಗೆ ನಿರೆರಿಚಿದಂತಾಯಿತು ಇದರ ಮದ್ಯೆ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರದ ಪಾಲಾಗಿದೆ, ಡಾ.ಎಂ.ಸಿ.ಸುಧಾಕರ್ ಈಗ ರಾಜ್ಯ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ ಪ್ರಭಾವಿ ಸಚಿವರು ಹೌದು ತಮ್ಮ ಕ್ಷೇತ್ರದ ಜನತೆಯ ಬಹುದಿನದ ಕನಸು ಸರ್ಕಾರಿ ಇಂಜನಿಯರಿಂಗ್ ಪ್ರಾರಂಭಿಸಬೇಕು ಎಂಬ ಕನಸನ್ನು ನನಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದು ತಾತ ಇಂದು ಮೊಮ್ಮಗ
ಚಿಂತಾಮಣಿ ನಗರದದಲ್ಲಿ 1951 ರಲ್ಲಿ ಪ್ರಾರಂಭವಾಗಿರುವ ಅವಿಭಜಿತ ಕೋಲಾರ ಜಿಲ್ಲೆಯ ಪ್ರತಿಷ್ಟಿತ ಸರ್ಕಾರಿ ಪಾಲಿಟೆಕನಿಕ್ ಕಾಲೇಜನ್ನು ತಂದವರು ಡಾ.ಎಂ.ಸಿ.ಸುಧಾಕರ್ ಅವರ ತಾತ ಅಂದಿನ ಚಿಂತಾಮಣಿ ಶಾಸಕ ಎಂ.ಸಿ.ಅಂಜನೇಯರೆಡ್ಡಿ ಐವತ್ತರ ದಶಕದಲ್ಲಿಯೇ ಸರ್ಕಾರದ ಮಟ್ಟದಲ್ಲಿ ಸಾವಿರಾರು ರೂಪಾಯಿ ಠೇವಣಿ ಮಾಡಿ ಸರ್ಕಾರಿ ಪಾಲಿಟೆಕನಿಕ್ ಕಾಲೇಜು ಮಂಜೂರು ಮಾಡಿಸಿದ್ದರು.ಈಗ ಮೊಮ್ಮಗ ಸರಕಾರಿ ಇಂಜನಿಯರಿಂಗ್ ಕಾಲೇಜು ತರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ.
ಇಂಜನಿಯರಿಂಗ್ ಕಾಲೇಜಿಗೆ ಜಾಗ ಮಂಜೂರು
ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಬೆಂಗಳೂರು ರಸ್ತೆಯ ಕನ್ನಂಪಲ್ಲಿ ಬಳಿ ಸುಮಾರು 12.5 ಎಕರೆಯಷ್ಟು ಜಮೀನು ಮಂಜೂರು ಮಾಡಲಾಗಿದ್ದು, ಈಗಾಗಲೇ ಕಾಲೇಜು ಕಟ್ಟಡದ ನಿರ್ಮಾಣದ ವಿನ್ಯಾಸ ಅಂತಿಮ ಗೊಂಡಿದೆ. ಹಂತ ಹಂತವಾಗಿ ಅಂದಾಜು 140 ಕೋಟಿ ರೂ ವೆಚ್ಚದಲ್ಲಿ ಕಾಲೇಜು ಕ್ಯಾಂಪಾಸ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು ಸರ್.ಎಂ.ವಿಶೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ವರ್ಷಕ್ಕೆ 10 ಕೋಟಿ ರೂಗಳಂತೆ ನಾಲ್ಕು ವರ್ಷಗಳಲ್ಲಿ 40 ಕೋಟಿ ರೂಗಳು ಮತ್ತು ಸರಕಾರದಿಂದ 100 ಕೋಟಿ ಅನುದಾನ ಸಿಗಲಿದೆ.ಎರಡು ಅಥಾವ ಮೂರು ತಿಂಗಳಲ್ಲಿ ಕಾಲೇಜು ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಡಾ.ಎಂ.ಸಿ.ಸುಧಾಕರ್ ಹೇಳುತ್ತಾರೆ.