ಶ್ರೀನಿವಾಸಪುರ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮ ಇತ್ತಿಚಿಗೆ ಅಧಿಕಾರಿಗಳ ಅಸಡ್ಡೆಗೆ ತುತ್ತಾಗಿದೆ ಕಾಟಾಚಾರಕ್ಕೆ ನಡೆಯುತ್ತಿದೆಯೋನೋ ಎಂಬಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ರೂಪಿತವಾಗುತ್ತಿದೆ.
ಶ್ರೀನಿವಾಸಪುರ ತಾಲ್ಲೂಕಿನ ಆಂಧ್ರದ ಗಡಿಯಂಚಿನ ಮಟ್ಟಕನ್ನಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೆರಳೆಣಿಕೆ ಸಾರ್ವಜನಿಕರು ಮಾತ್ರ ಹಾಜರಿದ್ದು ಬಹುತೇಕ ಶಾಲ ವಿದ್ಯಾರ್ಥಿಗಳು ದೊಡ್ಡಸಂಖ್ಯೆಯಲ್ಲಿ ಹಾಜರಾಗಿ ಶಾಮಿಯಾನದಲ್ಲಿ ಹಾಕಲಾಗಿದ್ದ ಚೇರುಗಳನ್ನು ಕಾಲಿ ಇಡದೆ ಕುಳತಿದ್ದರು.
ಸಾರ್ವಜನಿಕರ ಬಳಿಗೆ ಸರ್ಕಾರದ ಆಡಳಿತ ತಲುಪಲು ರಾಜ್ಯ ಸರ್ಕಾರ ಮಹತ್ವಕಾಂಕ್ಷಿಯಾಗಿ ರೂಪಿಸಿರುವ ಗ್ರಾಮವಾಸ್ತವ್ಯ ಕಾರ್ಯಕ್ರಮ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೆ ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತ ಸರ್ಕಾರವನ್ನು ಜನರತ್ತ ತಗೆದುಕೊಂಡು ಹೋದರೆ ಇತ್ತ ಶ್ರೀನಿವಾಸಪುರದಂತ ಹಿಂದುಳಿದ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೆ ಗೈರಾಗಿದ್ದರು ಇನ್ನು ತಾಲೂಕು ದಂಡಾಧಾರಿಗಳು ಬಾರದೆ ಸ್ಥಳಿಯ ಮಟ್ಟದ ಬೆರಳಣಿಕೆ ಅಧಿಕಾರಿಗಳು ಕಾಟಾಚಾರಕ್ಕೆ ಬಂದಿದ್ದರು.
ಗ್ರಾಮವಾಸ್ತವ್ಯದ ಕುರಿತಾಗಿ ಜನಸ್ನೇಹಿ ಕಾರ್ಯಕ್ರಮ ರೂಪಿಸಬೇಕಿದ್ದ ಕಂದಾಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ನೃತ್ಯ ನೋಡಿಕೊಂಡು ಸಮಯ ಕಳೆದಿದ್ದು ತಾಲೂಕು ಆಡಳಿತದ ಕಾರ್ಯಕ್ಷಮತೆಗೆ ಕನ್ನಡಿ ಹಿಡಿದಂತಿತ್ತು.
ಮತ್ತೊಂದು ದುರಂತ
ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಊಟೊಪಚಾರ ಬಡಿಸಲು ಶಾಲಾವಿಧ್ಯಾರ್ಥಿಗಳನ್ನು ಬಳಸಿಕೊಂಡಿದ್ದು ಸಾರ್ವಜನಿಕವಲಯದಲ್ಲಿ ತೀವ್ರಚರ್ಚೆಗೆ ಕಾರಣವಾಗಿದೆ.