ವಿಧಾನಸಭೆ ವಿರೋಧ ಪಕ್ಷದ ನಾಯಕನ
ಮುಂದೆ ಗುಂಪುಗಾರಿಕೆ ಬಹಿರಂಗ
ಬಂಗಾರಪೇಟೆ ಮಾಜಿ ಶಾಸಕರಿಂದ
ವಿರೋಧ ಪಕ್ಷದ ನಾಯಕ ಅಶೋಕ್ ಮಾತಿಗೆ ವಿರೋಧ
ನ್ಯೂಜ್ ಡೆಸ್ಕ್:ಕೋಲಾರ ಕಾಂಗ್ರೆಸ್ ಬಣ ಕಿತ್ತಾಟ ಜಗ್ಗಜಾಹಿರ ಈಗ ಕೋಲಾರ ಬಿಜೆಪಿಯಲ್ಲೂ ಗುಂಪುಗಾರಿಕೆ ಮುಖಂಡರ ನಡುವಿನ ಮನಸ್ತಾಪ ದಿನೆ ದಿನೆ ಬಹಿರಂಗವಾಗುತ್ತಿದೆ, ಗುರುವಾರ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಸ್ವಕ್ಷೇತ್ರವಾದ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಅಂಚಾಳ ಗ್ರಾಮದಲ್ಲಿ ಚುನಾವಣಾ ಸಂಬಂಧ ನಡೆದ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶದಲ್ಲಿ ಕೋಲಾರ ಬಿಜೆಪಿ ಗುಂಪುಗಾರಿಕೆ ಬಣ ರಾಜಕೀಯ ಕಾರ್ಯಕರ್ತರ ಮುಂದೆ ಬಹಿರಂಗವಾಗಿದೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಲಿ ಸಂಸದ ಮುನಿಸ್ವಾಮಿ ಅವರನ್ನು ಹೋಗಳುತ್ತ ನೀವು ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಬರುವಂತೆ ಹೇಳುತ್ತಿದ್ದಂತೆ ಸಮಾವೇಶದ ವೇದಿಕೆಯಲ್ಲಿದ್ದ ಬಂಗಾರಪೇಟೆ ಮಾಜಿ ಶಾಸಕ ವೆಂಕಟಮುನಿಯಪ್ಪ ಹಾಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಅವರುಗಳು ಆಶೋಕ್ ಅವರ ಭಾಷಣವನ್ನು ತೀವ್ರವಾಗಿ ವಿರೋಧಿಸಿದ್ದಾರೆ ಕೂಡಲೆ ಅವರ ಅಭಿಮಾನಿಗಳು ಎರು ಧ್ವನಿಯಲ್ಲಿ ಕೂಗಾಡಿದ್ದಾರೆ.
ನಾವ್ಯಾರು ಬಿಜೆಪಿಗೆ ಬೇಕಿಲ್ಲವೆ?
ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ವೈ. ಸಂಪಂಗಿ, ಬಿ.ವಿ. ಮಹೇಶ್ ಸೇರಿದಂತೆ ಅನೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರ ಗಮನಕ್ಕೆ ತಾರದೆಯೇ ಸಂಸದರ ಬಣ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶವನ್ನು ನಡೆಸಿದ್ದು, ನಾವ್ಯಾರೂ ದಲಿತರಲ್ಲವೇ.ನಾವು ಬಿಜೆಪಿಗೆ ದುಡಿದಿಲ್ಲವೆ ನಮ್ಮ ಅವಶ್ಯಕತೆ ಪಕ್ಷಕ್ಕೆ ಇಲ್ಲವೆ ಎಂದು ಪ್ರಶ್ನೆ ಮಾಡುವ ಮೂಲಕ ಮುಖಂಡರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ದಲಿತ ಸಮಾವೇಶದಿಂದ ದೂರ ಉಳಿದ ಸಂಪಂಗಿ
ಕೆಜಿಎಫ್ ಬಿಜೆಪಿಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಬಣ, ಬಂಡಾಯ ಅಭ್ಯರ್ಥಿ ಮೋಹನಕೃಷ್ಣ ಬಣ ಹಾಗು ಸಂಸದ ಮುನಿಸ್ವಾಮಿ ಬಣ ಎಂಬ ಮೂರು ಗುಂಪುಗಳು ಇದ್ದು ಈ ಕ್ಷೇತ್ರದಲ್ಲಿ ಬಹುತೇಕ ಬಿಜೆಪಿ ಮುಖಂಡರು ಸಾರ್ವಜನಿಕವಾಗಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಮೀನಮೇಷ ಎಣಿಸುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿದ್ದ ಮೋಹನಕೃಷ್ಣ ಇತ್ತಿಚೆಗೆ ತಮ್ಮ ಬೆಂಬಲಿಗರ ಸಭೆ ಕರೆದು, ಯಾರಿಗೆ ಬೆಂಬಲ ಸೂಚಿಸಬೇಕು ಎಂದು ಎರಡು ದಿನಗಳಲ್ಲಿ ನಿರ್ಧರಿಸುವುದಾಗಿ ಹೇಳಿದ್ದಾರೆ ಆದರೂ ಅವರು ಇದುವರೆವಿಗೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಕಾಂಗ್ರೆಸ್ ಪಕ್ಷ ಅವರ ಬೆಂಬಲವನ್ನು ಕೋರಿದೆ ಎನ್ನಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಆಸಕ್ತಿ ವಹಿಸಿ ಮಾತನಾಡಿದ್ದಾರಂತೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ಬಾಬು ಕೂಡ ಮೋಹನಕೃಷ್ಣ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆದರೂ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶದಲ್ಲಿ ಕೆಜಿಫ್ ಮೀಸಲು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಪಂಗಿ ಹಾಗು ಬಂಡಾಯ ಬಿಜೆಪಿ ಅಭ್ಯರ್ಥಿ ಮೋಹನ್ ಅಹ್ವಾನ ಇಲ್ಲ ಎಂದು ಪಾಲ್ಗೋಳ್ಳದೆ ದೂರ ಉಳಿದಿರುವುದು ಬಿಜೆಪಿ ಬಣ ರಾಜಕೀಯಕ್ಕೆ ಸಾಕ್ಷಿಯಾಗಿದೆ.
ಶ್ರೀನಿವಾಸಪುರದಲ್ಲೂ ಬಿಜೆಪಿ ಯುವ ಮುಖಂಡರು ಪ್ರಚಾರದಿಂದ ದೂರ
ಶ್ರೀನಿವಾಸಪುರ ತಾಲೂಕಿನಲ್ಲಿ ಶುಕ್ರವಾರ ಶಾಸಕ ವೆಂಕಟಶಿವಾರೆಡ್ದಿ ಸಂಸದ ಮುನಿಸ್ವಾಮಿ ಡಾ.ವೇಣುಗೋಪಾಲ್ ಪಾಲ್ಗೋಂಡು ನಡೆಸಿದಂತ ಮೈತ್ರಿ ಚುನಾವಣೆ ಸಭೆಯಲ್ಲಿ ನಮ್ಮನ್ಯಾರು ಗುರುತಿಸಿ ಅಹ್ವಾನ ನೀಡಿಲ್ಲ ಎಂದು ಬಹುತೇಕ ಬಿಜೆಪಿ ಯುವ ಮುಖಂಡರು ಚುನಾವಣೆ ಪ್ರಚಾರ ಸಭೆಗಳಿಂದ ದೂರ ಉಳಿಯುವ ಮೂಲಕ ಜಿಲ್ಲಾ ಹಾಗು ತಾಲೂಕು ಬಿಜೆಪಿ ಮುಖಂಡರ ವರ್ತನೆ ವಿರುದ್ದ ಅಸಹನೆ ಹೊರಹಾಕಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮುಖಂಡರನ್ನು ಕಡೆಗಣಿಸಿ ಪ್ರಚಾರಸಭೆ, ಸಮಾವೇಶಗಳನ್ನು ಮಾಡುತ್ತಿರುವುದು ಕಾರ್ಯಕರ್ತರ ಹಾಗು ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಸಾಮನ್ಯ ವಿಚಾರವನ್ನು ಬಿಜೆಪಿ ಮುಖಂಡರು ಪರಿಗಣನೆಗೆ ತಗೆದುಕೊಳ್ಳದೆ ಸಂಸದ ಮುನಿಸ್ವಾಮಿ ತಮ್ಮದೆ ಬಣ ಕಟ್ಟಿಕೊಂಡು ಅವರ ಮೂಗಿನ ನೇರಕ್ಕೆ ರಾಜಕೀಯ ನಡೆಸುತ್ತಿದ್ದಾರೆ ಇದು ಸರಿಯಾದ ಕ್ರಮ ಅಲ್ಲ ಎನ್ನುತ್ತಾರೆ ಬಿಜೆಪಿಯ ಕೆಲ ದಲಿತ ನಾಯಕರು.