ಶ್ರೀನಿವಾಸಪುರ:ರಸ್ತೆ ನೀರು ವಿದ್ಯತ್ ನಂತಹ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಅನುಷ್ಟಾನ ಆದಾಗ ಮಾತ್ರ ಅಭಿವೃದ್ದಿ ಅನ್ನುವುದು ಪೂರ್ಣ ಪ್ರಮಾಣದಲ್ಲಿ ಸಾದ್ಯವಾಗುತ್ತದೆ ಎಂದು ಗುಂಜೂರುಶ್ರೀನಿವಾಸರೆಡ್ದಿ ಹೇಳಿದರು.
ಅವರ ಅಭಿಮಾನಿಗಳು ಲಕ್ಷ್ಮೀಪುರದಲ್ಲಿ ಆಯೋಜಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ತಮ್ಮ ಬಣಕ್ಕೆ ಸೇರ್ಪಡೆಯಾದವರನ್ನು ಸ್ವಾಗತಿಸಿ ಮಾತನಾಡಿದರು. ತಾಲೂಕಿನ ಲಕ್ಷ್ಮೀಪುರ ಭಾಗದ ಪ್ರಮುಖ ಕಾಂಗ್ರೆಸ್ ಮುಖಂಡ ಅಬ್ಬಣ್ಣ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಸೇರ್ಪಡೆಯಾದರು.
ಗುಂಜೂರುಶ್ರೀನಿವಾಸರೆಡ್ದಿ ಮಾತನಾಡಿ ತಾಲೂಕಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಜನರ ಭಾವನೆಗಳನ್ನು ಧಿಕ್ಕರಿಸಿ ಯಾಮರಿಸಿ ರಾಜಕೀಯ ಮಾಡಿಕೊಂಡು ಬಂದಿರುವಂತವರ ರಾಜಕೀಯ ಜೀವನಕ್ಕೆ ಅಂತ್ಯದ ದಿನಗಳು ಹತ್ತಿರ ಬಂದಿದೆ ಎಂದರು.
ನಾನು ಇಲ್ಲಿಗೆ ಓಟಿನ ರಾಜಕೀಯ ಮಾಡಲು ಬಂದಿಲ್ಲ ಯಾವುದೇ ಕುಟುಂಬ,ಜಾತಿ ಜನಾಂಗವನ್ನು ವಿಭಾಗಿಸಲು ಅಥಾವ ಒಡೆಯಲು ಬಂದಿಲ್ಲ ಜನ ಸೇವೆಯನ್ನೆ ಗುರಿಯಾಗಿಸಿಕೊಂಡು ಬಂದಿರುವ ನನಗೆ ಯಾವುದೆ ತಂತ್ರ ಕುತಂತ್ರಗಳನ್ನು ಮಾಡಲು ಬರುವುದಿಲ್ಲ,ಇಲ್ಲಿನ ಜನರ ಭಾವನೆಗಳನ್ನು ಗೌರವಿಸಿ ಯುವಕರ ಜೀವನಧಾರಕ್ಕೆ ಅನಕೂಲವಾಗುವಂತೆ ಸಾಮಾಜಿಕ ಹಾಗು ಆರ್ಥಿಕ ಬದ್ರತೆ ಒದಗಿಸಲು ಕೈಗಾರಿಕೆಗಳನ್ನು ತರುವಂತ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತೇನೆ ಅದು ಸರ್ಕಾರದಿಂದ ಆಗಬಹುದು ಅಥಾವ ನನ್ನ ವೈಯುಕ್ತಿಕವಾಗಿಯಾದರೂ ಸರಿ ಮಾಡಿ ತಿರುತ್ತೇನೆ ಎಂದರು.
ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ದಿ ಧರದಲ್ಲಿ ಸಾಲ ನೀಡಲಾಗಿದೆ ಎಂದು ಕಳೆದ ವರ್ಷ ನೀಡಿದ ಡಿಸಿಸಿ ಬ್ಯಾಂಕ್ ಸಾಲದ ವಿಚಾರದಲ್ಲಿ ಅಸಲಿಗೆ ಬಡ್ಡಿ ಸೇರಿಸಿ ಒಟ್ಟು ಮೊತ್ತ ನೀಡುವಂತೆ ಬ್ಯಾಂಕ್ ನೋಟಿಸುಗಳು ಕೊಡುತ್ತಿದೆ ಇದರಿಂದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಸಂಕಷ್ಟದಲ್ಲಿದ್ದಾರೆ ಎಂದ ಅವರು ಕ್ಷೇತ್ರದಲ್ಲಿ ಅರಾಜಕತೆ ತಾಂಡವಾಡುತ್ತಿದೆ ಇದಕ್ಕೆಲ್ಲ ಅಂತ್ಯ ಹಾಡಬೇಕು ಎಂಬ ಉದ್ದೇಶದಿಂದ ಇಲ್ಲೆ ಇರುತ್ತೇನೆ ನನ್ನನ್ನು ತಾಲೂಕಿನ ಜನತೆಯಿಂದ ದೂರಮಾಡಲು ಯಾರಿಂದಲೂ ಸಾದ್ಯವಿಲ್ಲ ಎಂದು ಶ್ರೀನಿವಾಸಪುರ ತಾಲೂಕಿನ ಸಾಂಪ್ರದಾಯಿಕ ರಾಜಕಾರಣಿಗಳಿಗೆ ಸವಾಲ್ ಎಸೆದರು.
ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಮಚಂದ್ರಾರೆಡ್ಡಿ,ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಪ್ರಕಾಶ್,ಮಾಜಿ ಸದಸ್ಯ ಮೊಹ್ಮದ್ ಆಲಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅತ್ತಿಕುಂಟೆ ರಾಜಶೇಖರರೆಡ್ಡಿ,ಹಿಂದುಳಿದ ಸಮಾಜದ ಯುವ ಮುಖಂಡ ಶ್ರೀರಾಮ್,ಬಂಗವಾದಿ ನಾಗರಾಜ್, ಕೋಟಬಲ್ಲಪಲ್ಲಿ ಸತ್ಯನಾರಯಣಶೆಟ್ಟಿ,ದಳಸನೂರು ಮಂಜು,ಹರೀಶ್ ನಾಯಕ್,ಯಲ್ದೂರು ಶಿವಣ್ಣ ಮುಂತಾದವರು ಇದ್ದರು.
ಸ್ತ್ರೀ ಶಕ್ತಿ ಸಂಘಗಳಿಗೆ ಸಾಲವಾಗಿ ನೀಡಿರುವ ಹಣ ಯಾರ ಮನೆಯಿಂದಲೂ ಕೊಟ್ಟಿರುವುದಲ್ಲ!
ಗುಂಜೂರುಶ್ರೀನಿವಾಸರೆಡ್ದಿ ಭಾಷಣ ಮಾಡುತ್ತಿರುವಾಗ ಸಭೆಯಲ್ಲಿ ವ್ಯಕ್ತಿಯೊಬ್ಬ ಭಾಷಣದ ನಡುವೆ ಮಾತನಾಡಿ ಸ್ವಾಮಿ ನಮಗೆಲ್ಲ ಸಾಲ ಕೊಡಿಸಿದ್ದಾರೆ ಎಂದಾಗ ಅದಕ್ಕೆ ಪ್ರತಿಕ್ರಿಯಿಸಿದ ಗುಂಜೂರುಶ್ರೀನಿವಾಸರೆಡ್ದಿ ಯಾವ ಸ್ವಾಮಿ ನಿಮಗೆ ಕೊಡಿಸಿಲ್ಲ ಸರ್ಕಾರದ ಹಣ ಕೊಟ್ಟಿರುವುದು ಇಂತಹ ಮಾತುಗಳನ್ನೆ ನಂಬಿ ಇದುವರಿಗೂ ನೀವು ಯಾಮಾರಿದ್ದಿರಿ ಎಂದರು.