ಶ್ರೀನಿವಾಸಪುರ:– ಸೌರ್ಹಾದತೆಯ ಸಮಾಜ ನಿರ್ಮಾಣಕ್ಕೆ ನನ್ನೊಂದಿಗೆ ಕೈ ಜೊಡಿಸಿ ನಿಮ್ಮನ್ನು ಗೌರವದಿಂದ ನಡಸಿಕೊಳ್ಳುತ್ತೇನೆ ಎಂದು ಸಮಾಜಸೇವಕ ಗುಂಜೂರುಶ್ರೀನಿವಾಸರೆಡ್ಡಿ ಹೇಳಿದರು ಅವರು ಇಂದು ಶ್ರೀನಿವಾಸಪುರ ಪಟ್ಟಣದ ಇಂದಿರಾನಗರದಲ್ಲಿ ಮುಸ್ಲಿಂ ಯುವಕರೊಂದಿಗೆ ಸಂವಾದ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ಇಲ್ಲಿನ ಜನ ವಿಫಲರಾಗಿದ್ದಾರೆ ಇಲ್ಲಿ ವಾಸಿಸುವಂತ ಜನತೆ ಕೂಲಿ ಕಾರ್ಮಿಕರಾಗಿದ್ದು ಅವರಿಗೆ ಸಿಗಬೇಕಾದ ಅವಶ್ಯ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲದಿರುವುದು ವಿಷಾದನೀಯ ಎಂದ ಅವರು ಜನರಿಗೆ ಸಿಗಬೇಕಾದ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿದಾಗ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ ಎಂದರು.
ಇಲ್ಲಿನ ಮುಸ್ಲಿಂ ಯುವರು ಸ್ವಯಂ ಪ್ರೇರಿತರಾಗಿ ಬಂದು ಆಹ್ವಾನ ನೀಡಿದ ಹಿನ್ನಲೆಯಲ್ಲಿ ಅವರೊಂದಿಗೆ ಇಲ್ಲಿ ಸಂವಾದ ನಡೆಸಿದ್ದಾಗಿ ಹೇಳಿದರು. ಅವರ ಅಭಿಷ್ಟೆಯಂತೆ ಇಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಅವರು ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ದಿಯಾಗಲು ಸಹಕಾರ ನೀಡುವುದಾಗಿ ಶ್ರೀನಿವಾಸರೆಡ್ಡಿ ತಿಳಿಸಿದರು.
ಮುಖಂಡ ರಾಜಶೇಖರರೆಡ್ಡಿ ಮಾತನಾಡಿ ಈ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ವ್ಯಕ್ತಿಗತ ರಾಜಕಾರಣ ನಡೆಯುತ್ತಿದೆ ಇದರ ಹೊರತು ಜನತೆಯ ನೀರಿಕ್ಷೆಗಳು ಹಾಗೆ ಉಳಿದಿದೆ ಇದರಿಂದ ಜನ ಬದಲಾವಣೆ ಬಯಸುತ್ತಿದ್ದು ಅದರ ಹಿನ್ನಲೆಯಲ್ಲಿ ಸಮಾಜಸೇವಕ ಗುಂಜೂರುಶ್ರೀನಿವಾಸರೆಡ್ಡಿ ಹೊಸ ಆಲೋಚನೆಗಳ ರಾಜಕಾರಣಿಯಾಗಿ ಕ್ಷೇತ್ರಕ್ಕೆ ಬಂದಿರುತ್ತಾರೆ ಎಲ್ಲರೂ ಅವರ ಕೈ ಬಲಪಡಿಸಿ ಹೊಸತನದ ನೀರಿಕ್ಷೇಗಳೊಂದಿಗೆ ಯುವಕರು ಮುಂದಾಗುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ಯುವ ಮುಖಂಡ ಶ್ರೀರಾಮ್, ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಉನಿಕಿಲಿ ಬೈರಪ್ಪ, ಸುನಿಲ್ ಕುಮಾರ್ ರೆಡ್ಡಿ, ಸುನ್ನಬಾಯ್, ವಕೀಲನರಸಿಂಹಯ್ಯ,ಅಮ್ಜಾದ್, ಟೀಪು ಸೇನೆ ಅಧ್ಯಕ್ಷ ಅಸಿಪ್,ಶಂಶೀರ್ ಮುಂತಾದವರು ಇದ್ದರು.