ಶ್ರೀನಿವಾಸಪುರ: ತಾಲೂಕಿನ ನೆಲವಂಕಿ ಹೊಬಳಿಯ ಪಚರಾಮಕಲಹಳ್ಳಿ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಬದ್ರಕೋಟೆ ಇದು ಇಂದು ನೆನ್ನೆಯದಲ್ಲ ನೆಗಿಲುಹೊತ್ತ ರೈತನ ಚಿನ್ಹೆಯ ಜನತಾಪಕ್ಷದ ಕಾಲದಿಂದಲೂ ಇಲ್ಲಿನ ಜನತೆ ವೆಂಕಟಶಿವಾರೆಡ್ದಿಗೆ ಬೆಂಬಲ ನೀಡುತ್ತಿರುವುದು ಜಗಜಾಹಿರ.70 ರ ದಶಕದಲ್ಲಿ ವೆಂಕಟಶಿವಾರೆಡ್ಡಿ ಜನತಾಪಕ್ಷದ ಯುವನಾಯಕರಾಗಿ ದೇವೇಗೌಡರನ್ನು ಕರೆಸಿ ಶ್ರೀನಿವಾಸಪುರದಲ್ಲಿ ಸಭೆ ಮಾಡಿದಾಗ ಪಚರಾಮಕಲಹಳ್ಳಿ ವೆಂಕಟಸ್ವಾಮಿರೆಡ್ಡಿ ಜನತಾಪಕ್ಷದ ತಾಲೂಕು ಅಧ್ಯಕ್ಷರಾಗಿದ್ದರು.
ಇಂತಹ ಗ್ರಾಮದಲ್ಲಿ 2023 ರ ಸಾರ್ವತ್ರಿಕ ಚುನಾವಣೆಯ ಪ್ರಭಲ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಸಜ್ಜಾಗಿರುವ ಗುಂಜೂರುಶ್ರೀನಿವಾಸರೆಡ್ಡಿ ಸಭೆ ನಡೆಸಿದ್ದಾರೆ ಸುಮಾರು 70 ಹೆಚ್ಚು ಕಾರ್ಯಕರ್ತರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿರುವ ಅವರು ಕ್ಷೇತ್ರದ ಜನತೆ ಯಾವುದೇ ಉಹಾಪೋಹಗಳನ್ನು ನಂಬಬೇಡಿ ಮುಂದಿನ ಚುನಾವಣೆಯಲ್ಲಿ ಇಲ್ಲಿಂದಲೇ ಸ್ಪರ್ದಿಸುತ್ತೇನೆ ಯುವ ಜನರಿಗೆ ಉದ್ಯೋಗ ಬದ್ರತೆ ಒದಗಿಸಲು ಇಲ್ಲಿಗೆ ಬಂದಿರುವೆ,ಎಲ್ಲೋ ದೂರದ ಮಹಾನಗರದಲ್ಲಿ ಕೊಡುವ ಹತ್ತಾರು ಸಾವಿರ ಅವರ ಜೀವನಕ್ಕೆ ಸಾಲದಾಗಿದ್ದು ಅವರಿಗೆ ಸ್ಥಳೀಯವಾಗಿ ಉದ್ಯೋಗವಾಕಾಶಗಳ ಸೃಷ್ಠಿಸುವ ದೃಡ ಸಂಕಲ್ಪದ ಮಾಡಿರುವುದಾಗಿ ಹೇಳಿದರು.
ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ಮಾತನಾಡಿ ತಾಲೂಕಿನ ಹಳೇಯ ರಾಜಕೀಯ ಸಂಪ್ರದಾಯ ರಾಜಕಾರಣಿಗಳಿಗೆ ವಿದಾಯ ನೀಡಿ ತಾಲೂಕಿನ ಅಭಿವೃದ್ದಿಗೆ ತಮ್ಮದೆ ಆದ ಅಜೆಂಡಾದೊಂದಿಗೆ ಬಂದಿರುವ ಹೊಸ ಅಲೆಯ ರಾಜಕಾರಣಿ ಗುಂಜೂರುಶ್ರೀನಿವಾಸರೆಡ್ಡಿ ಅವರನ್ನು ಬೆಂಬಲಿಸಿ ಕೈ ಬಲಪಡಿಸುವಂತೆ ಹೇಳಿದರು.
ಇದೆ ಸಂದರ್ಬದಲ್ಲಿ ರಾಯಲ್ಪಾಡು ಹೊಬಳಿಯ ಯಂಡ್ರಲಾಯಿಲಕುಂಟ ಗ್ರಾಮದಲ್ಲೂ ಸಭೆ ನಡೆಸಿದ
ಗುಂಜೂರುಶ್ರೀನಿವಾಸರೆಡ್ಡಿ ಗ್ರಾಮದ ಯುವಕರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡರು.

ಪುರಸಭೆ ಮಾಜಿ ಸದಸ್ಯ ಮೊಹಹ್ಮದ್ ಆಲಿ ಮಾತನಾಡಿ ತಾಲೂಕನ್ನು ಅಭಿವೃದ್ದಿ ಮಾಡುತ್ತೇನೆ ಎಂದು ನಾಲ್ಕು ದಶಗಳಿಂದ ಹೇಳುತ್ತಿರುವುದನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ ಹೇಳಿದಂತವರನ್ನು ಸಾಕು ಮಾಡಿ ಗುಂಜೂರುಶ್ರೀನಿವಾಸರೆಡ್ಡಿ ಅವರನ್ನು ಬೆಂಬಲಿಸುವಂತೆ ಕೋರಿದರು.
ಈ ಸಂದರ್ಬದಲ್ಲಿ ತಾಲೂಕುಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ,ದಾಸರತಿಮ್ಮನಹಳ್ಳಿ ವೆಂಕಟಶಿವಾರೆಡ್ದಿ,ಬಂಗವಾದಿನಾಗರಾಜಗೌಡ ಮುಂತಾದವರು ಇದ್ದರು.