ಶ್ರೀನಿವಾಸಪುರ: ತಾಲೂಕಿನ ರೋಣೂರು ಹೋಬಳಿ ಆರಿಕುಂಟೆ ಗ್ರಾಮ ಒಂದು ಕಾಲದ ಜೆ.ಡಿ.ಎಸ್. ಬದ್ರಕೋಟೆಯಾಗಿತ್ತು ಅಂತಹ ಗ್ರಾಮದಲ್ಲಿ ಸಮಾಜಸೇವಕ ಮುಂದಿನ ಶಾಸಕ ಸ್ಥಾನದ ಆಕಾಂಕ್ಷಿಯಾಗಿರುವ ಗುಂಜೂರುಶ್ರೀನಿವಾಸರೆಡ್ದಿಗೆ ಅಲ್ಲಿನ ಕೆಲ ಮುಖಂಡರು ಸ್ವತಃ ಶ್ರೀನಿವಾಸರೆಡ್ದಿ ಅವರನ್ನು ಗ್ರಾಮಕ್ಕೆ ಕರೆಯಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ವೆಂಕಟಶಿವಾರೆಡ್ದಿ ಪರ ಒನ್ ವೇ ಆಗಿದ್ದ ಆರಿಕುಂಟೆ!
ಆರಿಕುಂಟೆ ಗ್ರಾಮ ಕಳೆದ ಮೂರು ನಾಲ್ಕು ದಶಕಗಳಿಂದಲೂ ವೆಂಕಟಶಿವಾರೆಡ್ದಿ ಬೆಂಬಲಕ್ಕೆ ನಿಂತಿದ್ದ ಗ್ರಾಮ ಅಲ್ಲಿ ಪ್ರತಿಪಕ್ಷವೇ ಇರಲಿಲ್ಲ ನಂತರದಲ್ಲಿ ಬಹುಶಃ ಎರಡು ದಶಕಗಳ ಹಿಂದೆ ಹಾಲಿ ಶಾಸಕ ರಮೇಶ್ ಕುಮಾರ್ ಪರ ಬ್ಯಾಟಿಂಗ್ ಬೀಸಲು ಹಿರಿಯ ಮುಖಂಡ ಲಕ್ಷ್ಮಣರೆಡ್ದಿ ನೇತೃತ್ವದಲ್ಲಿ ಪರ್ಯಾಯ ನಾಯಕತ್ವ ಸೃಷ್ಟಿ ಆಗಿ ಗ್ರಾಮದ ಸುಮಾರು 40% ಮತಗಳು ರಮೇಶ್ ಕುಮಾರ್ ನಾಯಕತ್ವಕ್ಕೆ ಸಿಕ್ಕಿದ್ದಲ್ಲದೆ ಎರಡು ಅವಧಿಗೆ ಆರಿಕುಂಟೆ ಗ್ರಾಮಪಂಚಾಯಿತಿಯಲ್ಲಿ ಶಾಸಕ ರಮೇಶ್ ಕುಮಾರ್ ಹಿಂಬಾಲಕರು ಅಧಿಕಾರದ ಚುಕಾಣಿ ಹಿಡದಿದ್ದರು. ಇಂತಹ ಆರಿಕುಂಟೆ ಗ್ರಾಮದಲ್ಲಿ ಪರ್ಯಾಯ ಎಂಬಂತೆ ಮೂರನೆಯ ನಾಯಕತ್ವ ಸೃಷ್ಠಿಯಾಗಿದೆ ಗ್ರಾಮದ ಕಾಂಗ್ರೆಸ್ ಮುಖಂಡ ನರಸಿಂಹಾರೆಡ್ಡಿ ರವರ ನೇತೃತ್ವದಲ್ಲಿ ಗುಂಜೂರುಶ್ರೀನಿವಾಸರೆಡ್ದಿ ಬಣ ನಿರ್ಮಾಣ ಆಗಿದ್ದು ಇಂದು ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಎನ್ನಲಾದ ನಾಗೇಂದ್ರ, ನಾರಾಯಣಸ್ವಾಮಿ, ಶಿವಾರೆಡ್ಡಿ, ಶ್ರೀರಾಮರೆಡ್ಡಿ, ಮಂಜುನಾಥರೆಡ್ಡಿ, ದೇವರಾಜಪ್ಪ ಮುಂತಾದವರು ಗುಂಜೂರುಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಆಧ್ಯಕ್ಷ ಬಿ.ಎಲ್.ಪ್ರಕಾಶ್,ತಾ.ಪಂ ಮಾಜಿ ಸದಸ್ಯ ಅತ್ತಿಕುಂಟೆರಾಜಶೇಖರೆಡ್ದಿ, ಹಿಂದೂಳಿದ ವರ್ಗಗಳ ಯುವ ಮುಖಂಡ ಶ್ರೀರಾಮಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.