ಶ್ರೀನಿವಾಸಪುರ:ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತೇನೆ ಎಂದು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಲ್ಲಿ ಪರಿಚಿತರಾಗಿದ್ದ ಗುಂಜೂರು ಶ್ರೀನಿವಾಸರೆಡ್ದಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಈ ಬೆಳವಣಿಗೆ ಶ್ರೀನಿವಾಸಪುರ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಪ್ರಭಾವಿ ಮಂತ್ರಿಗಳಾದ ಭೈರತಿಬಸವರಾಜ್,ಡಾ.ಅಶ್ವಥನಾರಯಣ್,ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಜಯಚಂದ್ರಾರೆಡ್ದಿ,ಹಿರಿಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾ,ಜನರಲ್ ಸೆಕೆಟ್ರಿ ಸಿದ್ದರಾಜ್, ಸಮ್ಮುಖದಲ್ಲಿ ಬೆಂಗಳೂರು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನಾಥ ಭವನದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ನೇತೃತ್ವದಲ್ಲಿ ಗುಂಜೂರು ಶ್ರೀನಿವಾಸರೆಡ್ದಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್,ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಸಂದ್ರಆಶೋಕ್ ರೆಡ್ದಿ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ಅತ್ತಿಕುಂಟೆರಾಜಶೇಖರರೆಡ್ದಿ,ಅಹಿಂದ ಮುಖಂಡ ಶ್ರೀರಾಮ್,ಬಂಗವಾದಿನಾಗರಾಜ್,ಗೌವನಪಲ್ಲಿಶೇಖರ್,ಕೊಟ್ರಗೂಳಿನಾರಯಣಸ್ವಾಮಿ,ಬಂಗವಾದಿಶಿವಶಂಕಗೌಡ,ಯಲ್ದೂರು ಶಿವಣ್ಣ,ಹಳೇಪೆಟೆ ಮುನಿರೆಡ್ಡಿ ಮುಂತಾದವರು ಇದ್ದರು.
ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಅಶ್ವಥನಾರಯಣ್ ಶ್ರೀನಿವಾಸರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಶ್ರೀನಿವಾಸಪುರ ಕ್ಷೇತ್ರದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಅವರಿಗೆ ಪಕ್ಷ ಉನ್ನತ ಸ್ಥಾನ ನೀಡುವುದರೊಂದಿಗೆ ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತದೆ ಎಂದರು. ಸಚಿವ ಭೈರತಿಬಸವರಾಜ್ ಮಾತನಾಡಿ ಗುಂಜೂರು ಶ್ರೀನಿವಾಸರೆಡ್ದಿ ಉತ್ತಮ ವ್ಯಕ್ತಿಯಾಗಿದ್ದು ಬೆಂಗಳುರು ಗ್ರಾಮಾಂತರದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ ಮತ್ತು ಶ್ರೀನಿವಾಸಪುರ ರಾಜಕೀಯದಲ್ಲಿ ಪರ್ಯಾಯ ಶಕ್ತಿಯಾಗಿ ಬಿಜೆಪಿಯನ್ನು ಬೆಳೆಸಿ ಪಕ್ಷದ ಬಾವುಟ ಹಾರಿಸುತ್ತಾರೆ ಎಂದರು.
ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಮಾತನಾಡಿ ಗುಂಜೂರು ಶ್ರೀನಿವಾಸರೆಡ್ದಿ ಬಿಜೆಪಿ ಸೇರ್ಪಡೆಯಾಗಿರುವುದು ಒಳ್ಳೆಯ ನಿರ್ಧಾರವಾಗಿದ್ದು ಶ್ರೀನಿವಾಸಪುರದಲ್ಲಿ ಪಕ್ಷದ ಬಲವರ್ದನೆಗೆ ಉತ್ತಮ ದಿಕ್ಸೂಚಿಯಾಗಿದೆ ಅವರು ಮುಂದಿರುವ ಚುನಾವಣೆಯಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ರಾಜಕೀಯ ಚಟುವಟಿಕೆ ನಡೆಸುವಂತೆ ಸಲಹೆ ಇತ್ತರು.