- ಪ್ರೀತ್ಸೇ ಪ್ರೀತ್ಸೇ ಎಂದು ಕಾಟಕೊಡುತ್ತಿದ್ದ
- ಯುವಕನ ಹುಚ್ಚಾಟಕ್ಕೆ ಬೆಸತ್ತ ವಿದ್ಯಾರ್ಥಿನಿ
- ಕಾಲೇಜು ಮಹಡಿಯಿಂದು ಜಿಗಿದು ಅತ್ಮಹತ್ಯೆ
ಚಿತ್ರದುರ್ಗ:ಪ್ರೀತ್ಸೇ ಪ್ರೀತಿಸು ಎಂದು ಕಾಡುತ್ತಿದ್ದ ಯುವಕನ ಕಾಟ ತಾಳಲಾರದೆ ಮನನೊಂದ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯನ್ನು ಚಳ್ಳಕೆರೆ ಮೆದೆಹಳ್ಳಿ ನಿವಾಸಿಆಗಿದ್ದ ಪ್ರೇಮಾ(18) ಎಂದು ಗುರುತಿಸಲಾಗಿದ್ದು ಚಿತ್ರದುರ್ಗ ನಗರದ ಡಾನ್ ಬೋಸ್ಕೋ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ಪದವಿ ವ್ಯಾಸಾಂಗ ಮಾಡುತ್ತಿದ್ದು ಇಂದು ಕಟ್ಟಡದ ಮೇಲಿನಿಂದ ಬಿದ್ದು ಪ್ರೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಳಗ್ಗೆ ಮಗಳು ಕಾಲೇಜಿಗೆ ಹೋಗಿ ಫೋನ್ ಮಾಡಿ ಕಾಲೇಜು ತಲುಪಿದೆ ಎಂದು ಕರೆ ಮಾಡಿ ಹೇಳಿದ್ದಾಳೆ ಇದಾದ ಕೆಲ ಕ್ಷಣಗಳಲ್ಲೇ ನಿಮ್ಮ ಮಗಳು ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಅಂತಾ ಕಾಲೇಜು ಕಡೆಯಿಂದ ಫೋನ್ ಬಂದಿದೆ ಹುಡುಗ ನೋರ್ವ ನಿತ್ಯ ಮಗಳಿಗೆ ಪ್ರೀತಿ ಮಾಡುವಂತೆ ಪೀಡುಸುತ್ತಿದ್ದನಂತೆ. ಅಲ್ಲದೇ ವಾಟ್ಸಾಪ್ ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ನೀಡುತ್ತಿದ್ದನಂತೆ ಇತ್ತಿಚಿಗೆ ಇವನ ಕಾಟ ಹೆಚ್ಚಾದ ಹಿನ್ನಲೆಯಲ್ಲಿ ಈ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪಿಸಿದ್ದಾಳೆ ಇದಕ್ಕೆ ಆಕೆಯ ತಂದೆ ಮಗಳಿಗೆ ಧೈರ್ಯ ಹೇಳಿ ನೀನು ಕಾಲೇಜಿಗೆ ಹೋಗು ನಾನೇ ಬಂದು ಕಾಲೇಜಿನಲ್ಲಿ ಮಾತನಾಡುತ್ತೇನೆ ಎಂದಿರುತ್ತಾರೆ. ಆದರೆ ತಂದೆ ಕಾಲೇಜಿಗೆ ಆಗಮಿಸುವ ಮುನ್ನವೇ ಪ್ರೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಇಂದು ಬೆಳೆಗ್ಗೆ ಮಗಳ ಫೋನ್ಗೆ ಮೆಸೇಜ್ ಮಾಡಿದ್ದು ಅದರಲ್ಲಿ ಚಾಕು ಫೋಟೋ ಕಳುಹಿಸಿ ಬೆದರಿಸಿದ್ದಾನೆ ಏನು ಅರಿಯದ ಮುಗ್ಧಳಾದ ನನ್ನ ಮಗಳು ಶುಕ್ರವಾರ ಬೆಳಗ್ಗೆ ಕಾಲೇಜಿಗೆ ಬಂದು ಮೂರನೇ ಮಹಡಿಯಿಂದ ಜಿಗಿದು ಪ್ರಾಣ ಬೀಟ್ಟಿದ್ದಾಳೆ ಅವಳ ಮೇಲೆ ನಾನು ಜೀವ ಇಟ್ಟುಕೊಂಡಿದ್ದೆ ಎಂದು ಪ್ರೇಮಾ ತಂದೆ ಕಣ್ಣೀರುಡುತ್ತಾರೆ.
ಯುವಕನನ್ನು ವಶಕ್ಕೆ ಪಡೆದ ಪೋಲಿಸರು
ವಿದ್ಯಾರ್ಥಿನಿ ಪ್ರೇಮಾಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾದ ಯುವಕನನ್ನು ತರುಣ್ ಎಂದು ಹೇಳಲಾಗಿದ್ದು ಇವನನ್ನು ವಶಕ್ಕೆ ಪಡೆದುಕೊಂಡಿರುವ ಚಿತ್ರದುರ್ಗ ಬಡಾವಣೆ ಪೊಲೀಸರು ತೀವ್ರ ವಿಚಾರಣೆ ಒಳಪಡಿಸಿದ್ದಾರೆ.