ನ್ಯೂಜ್ ಡೆಸ್ಕ್:-ಕೊರೊನಾ ಲಸಿಕೆ ಕುರಿತಾಗಿ ತಪ್ಪು ಮಾಹಿತಿ ನೀಡಿದ್ದ ತಮಿಳು ಹಾಗು ತೆಲಗು ಸಿನಿಮಾಗಳ ಖಳ ಹಾಗು ಪೊಷಕ ನಟ ಮನ್ಸೂರ್ ಅಲಿ ಖಾನ್ ಗೆ ಮದ್ರಾಸ್ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ.ವ್ಯಾಕ್ಸಿನ್ ಪಡೆದ ತಮಿಳು ನಟ ವಿವೇಕ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಮನ್ಸೂರ್ ಅಲಿ ಖಾನ್ ಸಾಮಾಜಿಕ ಜಾಲ ತಾಣದಲ್ಲಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಮನ್ಸೂರ್ ಅಲಿ ಖಾನ್ ವಿರುದ್ಧ ಆರೋಗ್ಯಾಧಿಕಾರಿ ದೂರು ದಾಖಲಿಸಿದ ಪರಿಣಾಮ,ಮನ್ಸೂರ್ ಅಲಿ ಖಾನ್ ವಿರುದ್ಧ ಚನೈ ವಡಪಳನಿ ಪೋಲೀಸ್ ಸ್ಟೇಷನ್ ನಲ್ಲಿ ಎಫ್.ಐ.ಆರ್ ದಾಖಲಾಗಿತ್ತು.
ಕಳೆದ ತಿಂಗಳು ತಮಿಳು ಸಿನಿಮಾಗಳ ಹಾಸ್ಯ ನಟ ವಿವೇಕ್ ನಿಧನ ಹೊಂದಿದ್ದರು. ಕೊರೊನಾ ಲಸಿಕೆ ಪಡೆದ ಮಾರನೇ ದಿನ ಹೃದಯಾಘಾತದಿಂದ ವಿವೇಕ್ ಕೊನೆಯುಸಿರೆಳೆದಿದ್ದರು. ಕೊರೊನಾ ಲಸಿಕೆ ಪಡೆದುಕೊಂಡಿದ್ದಕ್ಕೂ, ವಿವೇಕ್ಗೆ ಹೃದಯಾಘಾತ ಸಂಭವಿಸಿದ್ದಕ್ಕೂ ಸಂಬಂಧ ಇಲ್ಲದಿದ್ದರು ಈ ವಿಚಾರದ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ಎರಡಕ್ಕೂ ಲಿಂಕ್ ಮಾಡಿ ಮಾತನಾಡಿದ್ದರು. ಕೊರೊನಾ ಲಸಿಕೆ ಬಗ್ಗೆ ತಪ್ಪು ಸಂದೇಶ ರವಾನಿಸಿದ್ದರು.
ದಂಡ ವಿಧಿಸಿ ಜಾಮೀನು ನೀಡಿದ ಕೋರ್ಟ್
ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮನ್ಸೂರ್ ಅಲಿ ಖಾನ್ಗೆ ದಂಡ ವಿಧಿಸಿದೆ. ಲಸಿಕೆ ಖರೀದಿಸಲು ತಮಿಳುನಾಡು ಆರೋಗ್ಯ ಇಲಾಖೆಗೆ 2 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ಮನ್ಸೂರ್ ಅಲಿ ಖಾನ್ ಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಜೊತೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತಮಿಳು ನಟ ಮನ್ಸೂರ್ ಅಲಿ ಖಾನ್ ತೆಲಗಿನ ಮುಠಾಮೇಸ್ತ್ರಿ ಕನ್ನಡದ ದಿಗ್ಗಜರು ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ