ವರ್ಕ್ ಫ್ರಮ್ ಹೋಂ ನಿಂದ ಕುಳಿತಲ್ಲೆ ಕುಳಿತು ಕಾರ್ಯನಿರ್ವಹಿಸುವ ಯುವಕರಿಗೆ
ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಹೆಚ್ಚಿನ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ, ಇಂತಹ ಸಮಯದಲ್ಲಿ ದೇಹ ಚಟುವಟಿಕೆಯಿಂದಿರದ ಕಾರಣ ತೂಕ ಹೆಚ್ಚುವ ಸಾಧ್ಯತೆಯಿರುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ
ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ ಇದರಿಂದ ದೇಹ ಹೆಚ್ಚು ಚಟುವಟಿಕೆಯಿಂದ ಇರಲು ಸಾದ್ಯವಾಗದೆ ಕುಳಿತಲ್ಲೆ ಕುಳತಿದ್ದರೆ ತೂಕ ಹೆಚ್ಚುವ ಸಾಧ್ಯತೆಯಿತೆ ಇದೆ ಎನ್ನಲಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕ ಎಂದಿರುತ್ತಾರೆ.
ಇಂತಹ ಸಂದರ್ಭದಲ್ಲಿ ಕುಳಿತಲ್ಲೇ ಕೆಲಸ ಮಾಡುವ ಜನ ಊಟದ ಬಗ್ಗೆ ಅಸಡ್ಡೆ ತೋರುತ್ತಾರೆ ಹೆಚ್ಚು ಕುರುಕಲು ತಿಂಡಿ ಜಿಂಘ್ ಫುಡ್ ಗೆ ಮೊರೆ ಹೋಗುವುದರಿಂದ ಪೌಷ್ಠಿಕ ಆಹಾರದ ಕೊರತೆಯಿಂದ ಅನಾರೋಗ್ಯಕ್ಕೆ ಈಡಾಗುತ್ತಾರೆ ಮಾಂಸಖಂಡಗಳಲ್ಲಿ ಸೆಳೆತ ಮತ್ತು ಮೂಳೆಗಳ ತೂಕ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ.
ಊಟದ ನೀಯಮ ಯಾರು ಉಲ್ಲಂಘಿಸಬಾರದು ಸಮಯಕ್ಕೆ ಬೆಳಗಿನ ಉಪಹಾರ ಮಧ್ಯಾನ್ಹದ ಊಟ ರಾತ್ರಿಯ ಉಪಹಾರ ಅಥಾವ ಊಟ ನೀಗದಿತವಾಗಿ ಸೇವಿಸುವುದರ ಜೊತೆಗೆ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು.ಅಧಿಕ ಪ್ರಮಾಣದಲ್ಲಿ ನೀರಿನ ಸೇವನೆ ಮತ್ತು ಫೈಬರ್ ಅಂಶವಿರುವ ಆಹಾರ ಸೇವನೆ,
ಜೋತೆಗೆ ಹೆಚ್ಚು ಚಟುವಟಿಕೆಯಿಂದ ಕೂಡಿರುವುದ ಪರಿಣಾಮ ಉತ್ತಮ ಆರೋಗ್ಯಕ್ಕೆ ಸಹಾಯವಾಗುತ್ತದೆ,
ಕ್ಯಾಲರಿಯನ್ನು ಗಮನದಲ್ಲಿರಿಸಿಕೊಂಡರೇ ಇನ್ನೂ ಉತ್ತಮ, ನಿಮಗೆ ಅವುಗಳು ಬೇಕಾಗುತ್ತವೆ ಆದ್ದರಿಂದ ಅಸಮಾನವಾಗಿ ಕಡಿತಗೊಳಿಸಬೇಡಿ, ಬದಲಿಗೆ ಸಂಸ್ಕರಿಸಿದ ಕಾರ್ಬನ್ನ್ಸ್ ಅವಾಯ್ಡ್ ಮಾಡಿ.
ವರ್ಕ್ ಫ್ರಮ್ ಹೋಮ್ ಜನತೆ ವಾಕಿಂಗ್ ಮಾಡುವುದು ಅಭ್ಯಾಸ ಮಾಡಿಕೊಂಡರೆ ಸಹಕಾರಿಯಾಗುತ್ತದೆ, ಜಾಗಿಂಗ್ ಮತ್ತು ರನ್ನಿಂಗ್ ಕೂಡ ಮತ್ತಷ್ಟು ಉತ್ತಮ, ಇದರಿಂದ ತೂಕ ಇಳಿಸಲು ಹಾಗು ದಿನಪೂರ್ತಿ ಲವಲವಿಕೆಯಿಂದ ಇರಲು ಸಹಕಾರಿಯಾಗುತ್ತದೆ, ಪ್ರತಿದಿನ 20 ನಿಮಿಷ ಸೈಕ್ಲಿಂಗ್ ಮಾಡುವುದು ಉತ್ತಮ.
ಪುಶ್ ಅಪ್ಸ್ ಮತ್ತು ಸಿಟ್ ಅಪ್ಸ್ ಮಾಡುವುದರಿಂದ ತೂಕ ಕಳೆದುಕೊಳ್ಳಲು ಸಹಾಯವಾಗುತ್ತದೆ, ಜೀರ್ಣ ಪ್ರಕ್ರಿಯೆಗೆ ಸ್ವಿಮ್ಮಿಂಗ್ ಮಾಡುವುದು ಉತ್ತಮ, ಇಡೀ ದೇಹವನ್ನು ಫಿಟ್ ಆಗಿಡಲು ಸೂರ್ಯ ನಮಸ್ಕಾರಕ್ಕಿಂತ ಉತ್ತಮ ವ್ಯಾಯಾಮ ಮತ್ತೊಂದಿಲ್ಲ.