ಶ್ರೀನಿವಾಸಪುರ:ಗ್ರಾಮೀಣ ಜನರ ಆರೋಗ್ಯ ಜಾಗೃತಿಗಾಗಿ ಉಚಿತ ಆರೋಗ್ಯ ಶಿಬಿರಗಳು ಅಗತ್ಯವಾಗಿ ಸಹಕಾರಿಯಾಗುತ್ತವೆ ಎಂದು ಬೆಂಗಳೂರಿನ ಖ್ಯಾತ ವೈದೇಹಿ ಆಸ್ಪತ್ರೆ ನಿರ್ದೇಶಕ ಚೈತನ್ಯ ಅದಿಕೇಶವುಲು ಹೇಳಿದರು.
ಅವರು ಸೋಮವಾರ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕೈವಾರ ಯೋಗಿನರಾಯಣ ಐಕೈತಾ ಟ್ರಸ್ಟ್ ಸಹಯೋಗದಲ್ಲಿ ವೈದೇಹಿ ಆಸ್ಪತ್ರೆ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ದಿನಮಾನಗಳಲ್ಲಿ ಸಣ್ಣ ಮಟ್ಟದ ವಾಂತಿ-ಬೇದಿಯಂತ ರೋಗಗಳು ಬಂದರೆ ಮನುಷ್ಯ ಭಯ ಕಾಡುತಿತ್ತು , ಬದಲಾದ ಕಾಲಘಟ್ಟದಲ್ಲಿ ಮನುಷ್ಯನ ಜೀವನ ಪದ್ದತಿ ಬದಲಾಗಿ ಒತ್ತಡದ ಜೀವನ ನಡೆಸುತ್ತ ರಕ್ತದೊತ್ತಡ,ಸಕ್ಕರೆ ಕಾಯಿಲೆಗಳು ಆವರಿಸಿಕೊಳ್ಳುತ್ತಿದೆ ಹೃದ್ರೋಗ ಹಾಗು ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗುತ್ತಿದೆ ಹಿಂದೆ ಇವೆಲ್ಲ ಶ್ರೀಮಂತರ ಕಾಯಿಲೆಗಳು ಎನ್ನುವ ಕಾಲ ಇತ್ತು ಈಗಿನ ಜೀವನ ಶೈಲಿಯಿಂದ ಬಡವ ಶ್ರೀಮಂತ ಎನ್ನುವ ಬೇದಭಾವ ಇಲ್ಲದೆ ಜನರನ್ನು ಕಾಯಿಲೆಗಳು ಆವರಿಸಿಕೊಳ್ಳುತ್ತಿದೆ ಆರ್ಥಿಕವಾಗಿ ಅನಕೂಲವಂತರು ತಕ್ಕಮಟ್ಟಿಗೆ ಕರ್ಚು ಮಾಡಿ ಕಾಯಿಲೆ ವಾಸಿ ಮಾಡಿಕೊಳ್ಳುತ್ತಾರೆ ಆರ್ಥಿಕವಾಗಿ ಅನಕೂಲ ಇಲ್ಲದವರು ಗ್ರಾಮೀಣ ಭಾಗದ ಸಾಮಾನ್ಯ ಜನತೆ ಉಚಿತ ಶಿಬಿರಗಳ ಪ್ರಯೋಜನ ಪಡೆದುಕೊಂಡು ಆ ಮೂಲಕ ಸಿಗುವ ಚಿಕಿತ್ಸೆಗೆ ಒಳಗಾಗಿ ಸಂಕಷ್ಟದಿಂದ ಪಾರಾಗಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕೈವಾರ ಯೋಗಿನರಾಯಣ ಐಕೈತಾ ಟ್ರಸ್ಟ್ ಅಧ್ಯಕ್ಷ ಮುರಳಿ,ಪುರಸಭೆ ಮಾಜಿ ಅಧ್ಯಕ್ಷೆ ಚಂದ್ರಕಲಾ,ವೈದೇಹಿ ಆಸ್ಪತ್ರೆ ವೈದ್ಯ ಡಾ|| ಲೋಕೇಶ್,ಆಟೋ ಯೂನಿಯನ್ ರಾಜ್ಯ ಮುಖಂಡ ಕೋಲಾರ ಸುರೇಶ್ಕುಮಾರ್, ಚಲ್ದಿಗಾನಹಳ್ಳಿ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್,ವೈದ್ಯಗೋವಿಂದಪ್ಪ, ಬಲಿಜ ಸಮುದಾಯದ ಯುವ ಮುಖಂಡರಾದ ಕೆ.ವಿ.ಸುರೇಂದ್ರ,ಹೂಮಂಡಿಪ್ರಸಾದ್, ಮಂಜುನಾಥ್, ಅನಿಲ್, ಹರಿ, ಬಾಲಾಜಿ,ಮದನಪಲ್ಲಿ ಜನಸೇನಾ ಪಕ್ಷದ ಅಧ್ಯಕ್ಷ ಶ್ರೀರಾಮ,ಚಿತ್ತೂರು ಅಧ್ಯಕ್ಷ ಬಾಲು,ಕೊರಿಗೇಪಲ್ಲಿದೇವರಾಜ್, ಪಿ.ಎಸ್.ಚಂದ್ರಶೇಖರ್,ಭರಣಿ ಮುಂತಾದವರು ಇದ್ದರು.