ಶ್ರೀನಿವಾಸಪುರ:-ಕೊರೋನಾ ಲಸಿಕೆ ಪಡೆಯಲು ಗ್ರಾಮಸ್ಥರು ತಯಾರಾಗಿದ್ದರು ಲಸಿಕೆ ನೀಡಲು ಆರೋಗ್ಯ ಇಲಾಖೆ ನಿರಾಸಕ್ತಿ ತೊರಿಸುತ್ತಿದೆ ಆವಲಕುಪ್ಪ ಗ್ರಾಮ ಪoಚಾಯಿತಿ ಸದಸ್ಯೆ ಹಾಗು ಹೋದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಆರೋಪಿಸಿದ್ದಾರೆ. ಆವಲಕುಪ್ಪ ಗ್ರಾಮದಲ್ಲಿ ಇತ್ತೀಚೆಗೆ ಸುಮಾರು ಕೆಲವು ಕುಟುಂಬಗಳಿಗೆ ಸೋಂಕು ತಗಲಿದ್ದು ಕೆಲವರು ಗುಣಮುಖರಾಗಿದ್ದಾರೆ ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆವಲಕುಪ್ಪ ಗ್ರಾಮ ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯಾಪ್ತಿಗೆ ಸೇರಿದ್ದಾಗಿದ್ದು ಅಲ್ಲಿನ ವೈದ್ಯೆ ಸೌಮ್ಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಇವರ ಸಲಹೆಯಂತೆ ಕರೋನ ಲಸಿಕೆ ಪಡೆದುಕೊಳ್ಳಲು ಆಸಕ್ತಿ ಹೊಂದಿ ಸ್ಥಳೀಯ ಆಶಾ ಕಾರ್ಯಕರ್ತರಿಗೆ ಲಸಿಕೆ ಪಡೆಯುವಂತವರು 50 ಮಂದಿ ತಮ್ಮ ವಿವರವನ್ನು ನೊಂದಣಿ ಮಾಡಿಕೊಂಡಿರುತ್ತಾರೆ. ವೈದ್ಯರು ಹೇಳಿದಂತೆ ಸಮುದಾಯ ಭವನದಲ್ಲಿ ಲಸಿಕೆ ಪಡೆಯಲು 2 ದಿನಗಳಿಂದ ಕಾಯುತ್ತಿದ್ದರು ಲಸಿಕೆ ನೀಡಲು ವೈದ್ಯರು ಹಾಗು ಸಿಬ್ಬಂದಿ ಗ್ರಾಮಕ್ಕೆ ಆಗಮಿಸಲಿಲ್ಲ ಈ ವಿಚಾರವಾಗಿ ವೈದ್ಯೆ ಸೌಮ್ಯ ಅವರಿಗೆ ಕರೆ ಮಾಡಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಎರಡು ದಿನಗಳಿಂದ ಕಾಯುತ್ತಿರುವುದಾಗಿ ತಿಳಿಸಿದರೆ ಇದಕ್ಕೆ ವೈದ್ಯೆ ಪ್ರತಿಕ್ರಿಯಿಸದೆ ಆಸ್ಪತ್ರೆ ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಮಾತನಾಡಿ ತಾಲ್ಲೂಕು ವೈಧ್ಯಾಧಿಕಾರಿಗಳ ಕಡೆಯಿಂದ ಲಸಿಕೆ ಸರಬರಾಜು ಆಗುತ್ತಿಲ್ಲ, ಲಸಿಕೆ ಬಂದಾಗ ನೋಡೋಣ ಎಂಬ ನಿರ್ಲಕ್ಷ್ಯ ಉತ್ತರ ನೀಡಿರುತ್ತಾರೆ. ಎಂದು ದೂರಿದರು.
ಈಗಾಗಲೆ ಗ್ರಾಮದಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಕಡಿಮೆ ತೀವ್ರತೆ ಇರುವಂತವರು ಗ್ರಾಮದಲ್ಲಿ ಹೋಂ ಹೋಐಸೊಲೇಷನ್ ಪಡೆಯುತ್ತಿದ್ದಾರೆ ಅವರಿಗೂ ಯಾವುದೆ ರಿತಿಯ ಚಿಕಿತ್ಸೆ ಸಿಗುತ್ತಿಲ್ಲ, 2 ನೇ ಅಲೆಯಿಂದ ಪಾರಾಗಲು ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕೆಂಬ ಮಾತಿಗೆ ಗ್ರಾಮೀಣ ಜನತೆ ಮುಂದಾದರೂ ಆರೋಗ್ಯ ಇಲಾಖೆಯವರು ಆಸಕ್ತಿ ತೊರುತ್ತಿಲ್ಲ ಈ ಕುರಿತಾಗಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ನಮ್ಮ ಗ್ರಾಮದ ಜನತೆಗೆ ಲಸಿಕೆಯನ್ನು ನೀಡಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಎರಡನೆ ಡೋಸ್ ಲಸಿಕೆ ನೀಡಿಕೆ
ಅವಲಕುಪ್ಪ ಗ್ರಾಮದ ಕೆಲವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೋಗಿ ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಂತವರಿಗೆ ಮಾತ್ರ ಎರಡನೆ ಡೋಸ್ ಲಸಿಕೆ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸದಸ್ಯ ಗೋವಿಂದರೆಡ್ಡಿ ಮಾಜಿ ಸದಸ್ಯ ಮುನಿರತ್ನಂ, ರೈತ ಮುಖಂಡ ಚಂದ್ರಶೇಖರ ರೆಡ್ಡಿ, ಶ್ರೀನಿವಾಸ್, ಮುಖಂಡರಾದ ಶ್ರೀನಿವಾಸರೆಡ್ಡಿ, ರಾಮಚಂದ್ರ, ಎ.ವಿ.ಎಸ್. ಶ್ರೀನಿವಾಸರೆಡ್ಡಿ, ಗಂಗಾಧರ್, ಮುಂತಾದವರು ಇದ್ದರು.
ಲಸಿಕೆ ಪಡೆಯಲು ಹೋದ ನಿವೃತ್ತ ಅಧಿಕಾರಿಗೆ ಗದರಿದ ವೈದ್ಯೆ!
ತಾಲೂಕಿನ ಅಡ್ಡಗಲ್ ಪ್ರಾಥಾಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಹೋದ ನಿವೃತ್ತ ತಾಲೂಕು ಪಂಚಾಯಿತಿ ನಿವೃತ್ತ ಅಧಿಕಾರಿ ಸುಬ್ಬಾರೆಡ್ಡಿಯವರನ್ನು ಅಲ್ಲಿನ ವೈದ್ಯೆ ಸುಖಾಸುಮ್ಮನೆ ಗದರಿಸಿ ವಾಪಸ್ಸು ಕಳಸಿರುವ ಪ್ರಕರಣ ನಡೆದಿದೆ ಎಂದು ಅಧಿಕಾರಿ ಆರೋಪಿಸಿದ್ದಾರೆ.ಲಸಿಕೆ ಪಡೆಯಲು ಸರ್ಕಾರಿ ಆಪ್ ನಲ್ಲಿ ನೊಂದಣಿ ಮಾಡಿಸಲು ಮುಂದಾದಾಗ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಕಾಶ ಇರುವಂತೆ ತೊರಿಸಿದ್ದರಿಂದ ಸ್ವಂತ ಗ್ರಾಮ ವೇಂಪಲ್ಲಿ ಸಹ ಅಲ್ಲೆ ಇರುವ ಹಿನ್ನಲೆಯಲ್ಲಿ ಅಡ್ಡಗಲ್ ಪ್ರಾಥಮಿಕ ಆರೋಗ್ಯಕ್ಕೆ ಒಕೆ ಮಾಡಿರುತ್ತಾರಂತೆ ಅದರಂತೆ ಒಟಿಪಿ ಮೆಸೆಜ್ ನಂತೆ ಅಲ್ಲಿ ಲಸಿಕೆ ಪಡೆಯಲು ಹೋದರೆ ಲಸಿಕೆ ಇಲ್ಲ ಏನೂ ಇಲ್ಲ ಎಂದು ಕನಿಷ್ಠ ಗೌರವ ಸಹ ನೀಡದೆ ಗದರಿಸಿ ಕಳಿಸಿರುತ್ತಾರೆ ಎಂದು ನಿವೃತ್ತ ಅಧಿಕಾರಿ ಸುಬ್ಬಾರೆಡ್ಡಿ ವೈದ್ಯರ ನಡವಳಿಕೆ ವಿರುದ್ದ ಅಸಮಧಾನ ವ್ಯಕ್ತಪಡಿಸಿರುತ್ತಾರೆ.