ನ್ಯೂಜ್ ಡೆಸ್ಕ್: ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಾಯುಭಾರ ಕುಸಿತವಾಗಿ ಏರ್ಪಡುವ ವಾತವರಣದ ಹಿನ್ನಲೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ನವೆಂಬರ್ 14ರ ವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ ಕೆಲವೊಂದು ಕಡೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದೆ.
ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ ಚಿಕ್ಕಬಳ್ಳಾಪುರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಆಂಧ್ರದ ಅನ್ನಮಯ್ಯ,ಚಿತ್ತೂರು ಮತ್ತು ತಿರುಪತಿ,ಸೀಮಾ,ನೆಲ್ಲೂರು ಹಾಗು ಕಾಕಿನಾಡ ಜಿಲ್ಲೆಗಳಲ್ಲಿ ನಾಳೆಯಿಂದಲೆ ಮಳೆಯಾಗಲಿದೆ ಎಂದು ತಿಳಿಸಿದೆ. ಮಳೆಯ ಹಿನ್ನೆಲೆಯಲ್ಲಿ ಜನರು ಜಾಗೃತರಾಗಿರಲು ಅಲ್ಲಿನ ಸರ್ಕಾರ ಸೂಚಿಸಿದೆ.
ಕರ್ನಾಟಕದಲ್ಲಿ ತಾಪಮಾನ ಕಡಿಮೆಯಾದಂತೆ ಬೆಳಗ್ಗೆ ಮತ್ತು ಸಂಜೆ ಚಳಿ ಹೆಚ್ಚಾಗಿದ್ದು ನವೆಂಬರ್ 21 ರ ನಂತರ ದಟ್ಟವಾದ ಮಂಜಿನಿಂದಾಗಿ ತಾಪಮಾನವು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
Breaking News
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
- ಪ್ರೇಮಕ್ಕೆ ಅಡ್ದಿ ಪ್ರಿಯತಮೆ ತಂದೆ ಮೇಲೆ ಗುಂಡು ಹಾರಿಸಿದ ಪಾಗಲ್ ಪ್ರೇಮಿ!
- ಅತ್ಯಂತ ದುಬಾರಿ ಕಂಪನಿಯ CEO ವಾಚ್ ಧರಿಸುವುದಿಲ್ಲವಂತೆ!
- ಕೋಲಾರ ಜಿಲ್ಲೆ ಸೇರಿದಂತೆ ವಿವಿಧಡೆ ಮುಂದಿನ ಮುರ್ನಾಲ್ಕು ದಿನ ಮಳೆ!
- ಚಿಂತಾಮಣಿ ತಿಮ್ಮಸಂದ್ರದ ಮೊರಿಯಲ್ಲಿ ಅಪರಿಚಿತ ಶವ ಪತ್ತೆ!
- ಕನ್ನಡ ಜೀವನದ ಭಾಷೆಯಾಗಬೇಕು ಚಿಂತಾಮಣಿ ಕಸಾಪ ಅಧ್ಯಕ್ಷ ಶ್ರೀನಿವಾಸ್
- ಕ್ಷಮಿಸಿ ಅಪ್ಪ,ಅಮ್ಮನನ್ನು ಕೊಂದು ಬಿಟ್ಟೆ ದುರುಳ ಮಗನ ಮಾತು!
- ಅಂಗನವಾಡಿ ಸಿಬ್ಬಂದಿಯನ್ನು ಖಾಯಂ ನೌಕರರಂತೆ ಪರಿಗಣಿಸಿ ಹೈಕೋರ್ಟ್ ನಿರ್ದೇಶನ.
- ಶ್ರೀನಿವಾಸಪುರದ VIP ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ
- ಕಾಂಗ್ರೆಸ್ ಮುಖ್ಯಮಂತ್ರಿಗೆ BIRTHDAY ಶುಭ ಕೋರಿರುವ ಪ್ರಧಾನಿ ಮೋದಿ
Thursday, November 14