ಶ್ರೀನಿವಾಸಪುರ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಹೋಳೂರು ಹೊಬಳಿಯ ವ್ಯಾಪ್ತಿಯಲ್ಲಿ ನೀರು ನುಗ್ಗಿ ಅನಾಹುತವಾಗಿದೆ ಹೋಳೂರು ಗ್ರಾಮದ ರಾಜಕಾಲುವೆ ಒತ್ತುವರಿಯಿಂದಾಗಿ ಮಳೆ ನೀರು ಗ್ರಾಮಕ್ಕೆ ನುಗ್ಗಿ ಅನಾಹುತವಾಗಿದ್ದರೆ, ಮುದುವಾಡಿ ಕೆರೆಯ ಕೊಡಿಹರಿದು ಬೆಳ್ಳಂಬರಿ ಗ್ರಾಮದ ಸಂಪರ್ಕ ಸೇತುವೆ ಮಟ್ಟ ಮೀರು ನೀರು ಹರಿದಿದ್ದು ಇದರಿಂದಾಗಿ ಬೆಳೆ ಹಾನಿಯಾಗಿದೆ ರೈತ ಸಂಕಷ್ಟಕ್ಕೆ ಈಡಾದರೆ ಗಟ್ಟಹಳ್ಳಿ ಗ್ರಾಮದ ಊರ ಮದ್ಯದ ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ವ್ಯತ್ಯಾಸವಾಗಿದ್ದು ಇದರಿಂದಾಗಿ ಕಾಲುವೆಯಲ್ಲಿ ಹರಿಯಬೇಕಾಗಿದ್ದ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ.
ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಭೇಟಿ ಪರಶೀಲನೆ
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಇಂದು ಮಳೆ ಅನಾಹುತ ಗ್ರಾಮಗಳಿಗೆ ತೆರಳಿ ಅಗಿರುವ ಸಮಸ್ಯೆಗಳ ಕುರಿತಾಗಿ ಪರಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಹೋಳೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಯಣಸ್ವಾಮಿ ಹಾಗು ಜೆ.ಇ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಆಗಿರುವ ಅನಾಹುತಗಳಿಗೆ ಪಂಚಾಯಿತಿ ವತಿಯಿಂದ ತಾತ್ಕಾಲಿಕ ಪರಿಹಾರ ಕೈಗೊಳ್ಳುವಂತೆ ಸೂಚಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಗೌಡ,ಜನ್ನಪಲ್ಲಿ ಅನಂದ್, ಹೋಳೂರು ಸಂತೋಷ್,ಹೋಳೂರು ಪಂಚಾಯಿತಿ ಅಧ್ಯಕ್ಷೆ ಮಾಲಿನಿಬಾಬು,ಉಪಾಧ್ಯಕ್ಷ ಶ್ರೀನಿವಾಸ್,ಮಾಜಿ ಅಧ್ಯಕ್ಷೆ ಪ್ರಿಯಾಂಕ ಸೇರಿದಂತೆ ಗ್ರಾಮಸ್ಥರು ಹಲವು ಮುಖಂಡರು ಇದ್ದರು.