ಶ್ರೀನಿವಾಸಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ(ನರೇಗಾ) 2024 ನೇ ಸಾಲಿನ ಕ್ರಿಯಾ ಯೋಜನೆಯ ರೂಪಿಸುವ ಸಂಭಂದ ಕರೆಯಲಾಗಿದ್ದ ಗ್ರಾಮ ಸಭೆ ರಾಜಕೀಯ ಪ್ರತಿಷ್ಠೆಗೆ ಬಲಿಯಾಗಿದೆ.ಸಭೆಯಲ್ಲಿ ಚುನಾಯಿತ ಸದಸ್ಯರು ತೋಳೇರಿಸಿ ವಾಗ್ವಾದ ನಡೆಸಿ ತಳ್ಳಾಟ ಕೂಗಾಟ ನಡೆಸಿದ ಪರಿಣಾಮ ಗ್ರಾಮ ಸಭೆ ಮಹತ್ವ ಕಳೆದುಹೊಯಿತು.
ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಂದ ಆಗಮಿಸಿದ್ದಂತಹ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ನಡುವಿನ ಕಿತ್ತಾಟ ಏರು ಮಾತುಗಳು ಅಕ್ಷರಶಃ ತರಕಾರಿ ಮಾರುಕಟ್ಟೆಯಂತಾಯಿತು,ಪರಸ್ಪರ ಆರೋಪ ಪ್ರತ್ಯಾರೋಗಳಿಗೆ ಸೀಮಿತವಾದ ಅಲ್ಲಿದ್ದವರು ಪರಸ್ಪರ ತೋಳೇರಿಸಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು ಅಭಿವೃದ್ಧಿ ಮರೆತ ಜನಪ್ರತಿನಿಧಿಗಳು ವೈಯುಕ್ತಿಕ ಜಿದ್ಧಿಗೆ ಬಿದ್ದವರಂತೆ ಮಾತಿನ ಚಕಮಕಿ ನಡೆಸುತ್ತ ಹೈ ಒಲ್ಟೇಜ್ ಮಾತುಗಳನ್ನಾಡುತ್ತ, ಸಿನಿಮಾ ಶೈಲಿಯಲ್ಲಿ ಕೈ ಸನ್ನೆಗಳ ಮೂಲಕ ಎಚ್ಚರಿಕೆ ನೀಡುತ್ತ ಹಿಂದೆ ಅಧಿಕಾರವಧಿಯಲ್ಲಿ ನದೆದಿದೆ ಎನ್ನಲಾದ ಅಕ್ರಮಗಳ ಪಟ್ಟಿಮಾಡುತ್ತ ಜೆಡಿಎಸ್ ಸದಸ್ಯರಾದ ಗಿರಿಯಪ್ಪ ಮತ್ತು ವೆಂಕಟ್ರಾಮರೆಡ್ಡಿ ಅಧ್ಯಕ್ಷ ಶ್ರೀನಿವಾಸ ವಿರುದ್ದ ಮಾತಿನ ಚಕಮಕಿ ನಡೆಸಿದರು ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶ್ರೀನಿವಾಸ್ ಗ್ರಾಮಸಭೆ ಮಹತ್ವ ಕಳೆಯುತ್ತ ಜನರ ಸಮಯ ಹಾಳು ಮಾಡುವುದು ಬೇಡ ರಾಜಕೀಯ ಪಕ್ಕಕ್ಕಿಟ್ಟು ಆಡಳಿತ ನಡೆಸಲು ಸಹಕಾರ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳ ಆಯ್ಕೆಗೆ ಮಹತ್ವ ಕೊಡೋಣ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಸಹಕರಿಸಿ ಎಂದರು ಇದಕ್ಕೆ ಕೆಲ ಜೆಡಿಎಸ್ ಸದಸ್ಯರು ಒಪ್ಪಲಿಲ್ಲ ಈ ಸಂದರ್ಭದಲ್ಲಿ ಸಾರ್ವಜನಿಕರು ಮಾತನಾಡಿ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮೊದಲಿನಿಂದಲೂ ಇದೆ ಪರಿಸ್ಥಿತಿ ಇದೆ ಇಲ್ಲಿ ಯಾವಾಗಲೂ ರಾಜಕೀಯಕ್ಕೆ ಆದ್ಯತೆ ನೀಡುತ್ತ ಕಾಂಗ್ರೆಸ್ ಹಾಗು ಜೆಡಿಎಸ್ ನಡುವಿನ ಕಿತ್ತಾಟವೆ ಅಗಿಹೋಗಿದೆ ಇಲ್ಲಿ ಅಭಿವೃದ್ಧಿ ಶೂನ್ಯ ಎಂದು ದೂರಿದರು.ಮಾತು ಪ್ರತಿ ಮಾತುಗಳಿಂದ ಸಭೆಯಲ್ಲಿ ಗದ್ದಲದ ವಾತವರಣ ನಿರ್ಮಾಣವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್ ಪೋಲಿಸರ ಮೋರೆ ಹೋದ ಹಿನ್ನಲೆಯಲ್ಲಿ ಪೋಲಿಸರು ಆಗಮಿಸಿ ವಾತವರಣ ತಿಳಿಗೊಳಿಸಿದಾಗ ಗ್ರಾಮ ಸಭೆ ಅಂತ್ಯವಾಯಿತು.
ಗ್ರಾಮ ಸಭೆ ಮಹತ್ವ ಅರಿಯದ ಜನಪ್ರತಿನಿಧಿಗಳು
ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ನಾಗರಿಕರಿಕೆ ಒಂದು ಸಾಮಾನ್ಯ ಸಭೆಯಾಗಿರುವ ಗ್ರಾಮಸಭೆ ಗ್ರಾಮ ಪಂಚಾಯಿತಿಯ ವಾರ್ಷಿಕ ಬಜೆಟಿಂಗ್ ಮತ್ತು ಆಡಿಟಿಂಗ್ ಮಾಡಲು ಹಾಗು ಸ್ಥಳೀಯ ಆಡಳಿತ ಮತ್ತು ಅಭಿವೃದ್ಧಿಗೆ ಉತ್ತು ನೀಡಲು ಮತ್ತು ಗ್ರಾಮಗಳ ಅಭಿವೃದ್ಧಿಗೆ ಅಗತ್ಯ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ ಅಲ್ಲದೆ ಪಾರದರ್ಶಕತೆ ಮತ್ತು ಉತ್ತಮ ಆಡಳಿತ ಕಾರ್ಯನಿರ್ವಹಣೆಗೆ ಗ್ರಾಮ ಸಭೆ ಬಹಳ ಮುಖ್ಯವಾಗುತ್ತದೆ. ಇಂತಹ ಮಹತ್ವದ ಗ್ರಾಮಸಭೆಯಲ್ಲಿ ಗದ್ದಲ ಗಲಾಟೆ ಮಾಡಿದ್ದೆ ಆದರೆ ಗ್ರಾಮೀಣ ಭಾಗದ ಜನರ ಗ್ರಾಮಸಭೆ ಮಹತ್ವ ಕಳೆದುಹೋಗುತ್ತದೆ.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Saturday, April 5