- ಮೈಸೂರು-ಬೆಂಗಳೂರು-ಚನೈ ನಡುವೆ
- ಪ್ರಯಾಣದ ಅವಧಿ ಕಡಿಮೆ ಮಾಡುವ
- ಉದ್ದೇಶದಿಂದ ಹೈಸ್ಪಿಡ್ ಬುಲೆಟ್ ಟ್ರೈನ್
ನ್ಯೂಜ್ ಡೆಸ್ಕ್: ಭಾರತದ ರೈಲು ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಾಣಸಿಗುತ್ತಿದೆ ಸಾಂಪ್ರದಾಯಿಕ ರೈಲು ಮಾರ್ಗಗಳಲ್ಲಿ ವಂದೇಭಾರತ ಸೆಮಿ ಸ್ಪೀಡ್ ರೈಲು ಸಾಗುತ್ತಿದೆ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತ ವಿದೇಶಿ ಸಹಯೋಗದಲ್ಲಿ ಹೈಸ್ಪೀಡ್ ರೈಲುಗಳ ಸಂಚರಾಕ್ಕೆ ಅನವು ಮಾಡಿಕೊಡಲು ನ್ಯಾಶನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮುಂದಾಗಿದೆ ಇದರಂತೆ ಮೊದಲ ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳ ರಾಜಧಾನಿಗಳು ಹಾಗು ಪ್ರಧಾನ ವ್ಯಾಪಾರಿ ಕೇಂದ್ರಗಳಾಗಿರುವ ಬೆಂಗಳೂರು ಹಾಗೂ ಚೆನ್ನೈ ನಡುವೆ ಈಗಾಗಲೇ ಸೆಮಿ ಹೈಸ್ಪೀಡ್ ರೈಲು ಎಂದು ಖ್ಯಾತಿಪಡೆದಿರುವ ವಂದೇ ಭಾರತ್ ರೈಲು ಸಂಚಾರ ಆರಂಬವಾಗಿರುವ ಬೆನ್ನಲ್ಲೇ ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು ಯೋಜನೆ ಕುರಿತಂತೆ ಯೋಜನೆಯ ಕಾಮಗಾರಿಗೆ ದಿನಗಣನೆ ಆರಂಭವಾಗಿದೆ ಈ ಸಂಬಂಧ ಭೂಮಾಪನ ಕಾರ್ಯ ನಡೆಯುತ್ತಿದ್ದು,ದಕ್ಷಿಣ ಭಾರತದಲ್ಲಿಯೇ ಪ್ರಥಮ ಎನ್ನುವಂತೆ ಮೈಸೂರು-ಬೆಂಗಳೂರು ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಎಂದು ಕರೆಯಲ್ಪಡುವ ಹೈಸ್ಪೀಡ್ ರೈಲು ಯೋಜನೆ ಇದಾಗಿದ್ದು ನ್ಯಾಶನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಶತಾಬ್ದಿ, ಬೃಂದಾವನ, ಲಾಲ್ಬಾಗ್ ಸೇರಿದಂತೆ ಕೆಲ ಸೂಪರ್ ಫಾಸ್ಟ್ ರೈಲುಗಳು ಸಂಚರಿಸುತ್ತಿದ್ದು, ಚೆನ್ನೈಗೆ ತಲುಪಲು ಕನಿಷ್ಠ 7-8 ಗಂಟೆ ಬೇಕಾಗುತ್ತಿದೆ. ಬೆಂಗಳೂರು ಮತ್ತು ಮೈಸೂರು ನಡುವಿನ ಅತಿ ವೇಗದ ರೈಲು (ವಂದೇ ಭಾರತ್) ಪ್ರಸ್ತುತ 4.25 ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ.ಬುಲೆಟ್ ಟ್ರೈನ್ನಿಂದಾಗಿ ಕೇವಲ 2.30 ಗಂಟೆಯಲ್ಲಿತಲುಪಬಹುದು,
ಬುಲೆಟ್ ಟ್ರೈನ್ ಪ್ರಯಾಣ ಎನು ವಿಶೇಷ?
ಸಾಂಪ್ರದಾಯಿಕ ರೈಲಿನ ಪ್ರಯಾಣವು ಎರಡು ನಗರಗಳ ನಡುವೆ ಪ್ರಯಾಣಿಸಲು ಸುಮಾರು ಏಳೇಂಟು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಮೈಸೂರು ಬೆಂಗಳೂರು ಮತ್ತು ಚೆನ್ನೈ ನಡುವಿನ 435 ಕಿಮೀ ದೂರದ ಪ್ರಯಾಣವನ್ನು ಹೈಸ್ಪೀಡ್ ಸುಮಾರು 1.10 ನಿಮಿಷಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ.ಮಾರ್ಗದುದ್ದಕ್ಕೂ ನಿಲುಗಡೆಗಳ ಸಂಖ್ಯೆಗೆ ಸಂಬಂಧಿಸಿದಂತೆ ಕೆಲ ಭಿನ್ನಾಭಿಪ್ರಾಯಗಳಿದ್ದು, ಹೆಚ್ಚುವರಿ ನಿಲುಗಡೆಗಳನ್ನು ಬುಲೆಟ್ ಟ್ರೈನ್ ಮಾರ್ಗದಲ್ಲಿ ಅವಕಾಶ ಇರುವುದಿಲ್ಲ ಎಂದು ಹೇಳಲಾಗುತ್ತಿದ್ದು ಮೈಸೂರು-ಬೆಂಗಳೂರು-ಚನೈ ಬುಲೆಟ್ ಟ್ರೈನ್ ಮಾರ್ಗ 435 ಕಿ.ಮೀ. ನಡುವಿನ ಒಟ್ಟು ನಿಲ್ದಾಣಗಳು: 09 ಟ್ರೈನ್ ಗರಿಷ್ಠ ವೇಗ: 350 ಕಿ.ಮೀ, ಸರಾಸರಿ 250 ಕಿ.ಮೀ. ವೇಗದಲ್ಲಿ ಸಂಚರಿಸಲಿದ್ದು, ಮೈಸೂರಿನಿಂದ ಚೆನ್ನೈಗೆ ಕೇವಲ ಎರಡೂವರೆ ಗಂಟೆಯಲ್ಲಿ ತಲುಪಬಹುದು.ಮಂಡ್ಯ,ಚನ್ನಪಟ್ಟಣ, ಬೆಂಗಳೂರು, ಬಂಗಾರಪೇಟೆ, ಚಿತ್ತೂರು, ಅರಕ್ಕೋಣಂ ಮತ್ತು ಪೂನಮಲೆ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಬಹುದು ಎಂಬ ಅಂದಾಜು ಇದೆ.ಜೊತೆಗೆ ಬುಲೆಟ್ ಟ್ರೈನ್ ಸಂಚಾರದಿಂದ ಎರಡು ರಾಜ್ಯಗಳಲ್ಲಿ ವಾಣಿಜ್ಯ ಚಟುವಟಿಕೆಗಳ ವೇಗ ಹೆಚ್ಚುತ್ತದೆ ಜೊತೆಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ ಎನ್ನುವಮಾತಿದೆ.
ಭೂಮಾಪನ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಉಪಗ್ರಹ ಸರ್ವೆ, ಭೂಮಿ ಸರ್ವೆ, ನಕ್ಷೆ, ಅಂದಾಜು ಪಟ್ಟಿ ತಯಾರಿಕೆಯ ಹೊಣೆಯನ್ನು ಹೈದರಾಬಾದ್ ಮೂಲದ ಎಎಆರ್ವಿಇಇ ಅಸೋಸಿಯೆಟ್ಸ್ ನಡೆಸುತ್ತಿದ್ದು, ಚೆನ್ನೈ ಕಡೆಯಿಂದ ಕೋಲಾರದ ತನಕದ ಕೆಲಸ ಮುಗಿದಿದೆ. ಕೋಲಾರ ಸಮೀಪದ ಶೆಟ್ಟಿಗಾನಹಳ್ಳಿ ಕೋರಗಂಡನಹಳ್ಳಿ ಮಾರ್ಗದಲ್ಲಿ ಎಎಆರ್ವಿಇಇ ಸಂಸ್ಥೆಯ ಭೂಮಾಪಕರು, ಎಂಜಿನಿಯರ್ಗಳು ಹಾಗೂ ಸಿಬ್ಬಂದಿ ಮಾರ್ಗಕ್ಕೆ ಅಗತ್ಯವಾಗಿರುವ ನೂರು ಮೀಟರ್ ಅಗಲದ ಜಾಗಕ್ಕೆ ಎರಡೂ ಬದಿಯಲ್ಲಿ ಗುರುತು ಮಾಡಿ, ಕ್ರಮಸಂಖ್ಯೆ ಹಾಕಿ ವೈಮಾನಿಕ ಸಮೀಕ್ಷೆಗೆ ಅನುಕೂಲವಾಗುವಂತೆ ಪ್ರತ್ಯೇಕ ಸಂಖ್ಯೆಗಳನ್ನು ಒಳಗೊಂಡ ಕೋಡ್ ಹೊಂದಿರುವ ಸಿಮೆಂಟ್, ಜಲ್ಲಿಕಲ್ಲಿನ ಬ್ಲಾಕ್ ನಿರ್ಮಿಸಿದ್ದಾರೆ.
ಬೆಂಗಳೂರು-ಚೆನ್ನೈ ಹೆದ್ದಾರಿಯ ಉದ್ದಕ್ಕೂ ಇರುವ ಟೋಲ್ ಪ್ಲಾಜಾಗಳಿಂದ ಕಳೆದ ಐದು ವರ್ಷಗಳಲ್ಲಿ ಸಂಗ್ರಹಿಸಲಾದ ಡೇಟಾ, ಏಕಕಾಲದಲ್ಲಿ ರೈಲು ಪ್ರಯಾಣದ ಸಮಯ ವಿಮಾನ ಪ್ರಯಾಣದ ಖರ್ಚು ಸರ್ಕಾರಿ ಮತ್ತು ಖಾಸಗಿ ಬಸ್ ನಡುವಿನ ಪ್ರಯಾಣದ ಸಮಯವನ್ನು ನಿರ್ವಾಹಕರಿಂದ ಪಡೆದು ಖಾಸಗಿ ವಾಹನಗಳು ಸಂಚರಿಸಿದರೆ ತಗಲುವ ಖರ್ಚು ಸಮಯ ಎಲ್ಲವನ್ನು ಕ್ರೂಡಿಕರಿಸಿ ಅಧ್ಯಯನ ನಡೆಸಿ (WTP) ಅನ್ವಯದಂತೆ ಬುಲೆಟ್ ರೈಲಿನ ದರದ ನಿರ್ಣಯ ಕೈಗೊಳ್ಳಲಾಗುತ್ತದೆ ಎನ್ನಲಾಗಿದ್ದು ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ಟ್ರೈನ್ ಯೋಜನಾ ವರದಿಯನ್ನು ಜರ್ಮನಿ ತಂಡವು ಅಂತಿಮ ಕಾರ್ಯಸಾಧ್ಯತಾ ವರದಿಯನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೊಹಾನಿ ಅವರಿಗೆ ಸಲ್ಲಿಸಿದೆ, ಈ ಮಾರ್ಗದಲ್ಲಿ ಹೈಸ್ಪೀಡ್ ರೈಲು ಕಾರ್ಯಸಾಧ್ಯ ಮಾತ್ರವಲ್ಲ, ನಿರ್ವಹಣೆಯೂ ಆಗಿದೆ ಎಂದು ದೃಢಪಡಿಸಿದ್ದು,ಬುಲೆಟ್ ರೈಲು ಗಂಟೆಗೆ ಗರಿಷ್ಠ 320 ಕಿಲೋಮೀಟರ್ ವೇಗವನ್ನು ಸಾಧಿಸುತ್ತದೆ ಎಂದು ವರದಿಯಲ್ಲಿ ಹೇಳಿದೆ
ರಾಜ್ಯದತ್ತ ಹೆಚ್ಚಿನ ಕೈಗಾರಿಕೆಗಳು ಬರಲಿವೆ ಸಂಸದ
ಬುಲೆಟ್ ಟ್ರೈನ್ ಸಂಚಾರದಿಂದ ರಾಜ್ಯದತ್ತ ಹೆಚ್ಚಿನ ಕೈಗಾರಿಕೆಗಳು ಬರಲಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶಗಳು ಸಿಗಲಿವೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಸಂತಸದಿಂದ ಹೇಳುತ್ತಾರೆ.
ಭಾರತದಲ್ಲಿ ಎಲ್ಲೇಲ್ಲಿ ಹೈಸ್ಪೀಡ್ ಟ್ರೈನ್ ಗಳು!
ಮುಂಬೈ-ಅಹಮದಾಬಾದ್ 508 ಕೀ.ಮಿ ಕಾಮಗಾರಿ ನಡೆಯುತ್ತಿದ್ದು 2028 ರಲ್ಲಿ ಪೂರ್ಣವಾಗಲಿದೆ.ಚೆನ್ನೈ-ಮೈಸೂರು 435 ಕೀ.ಮಿ DPR ಅಡಿಯಲ್ಲಿ ಸರ್ವೆ ಕಾರ್ಯ ಆಗುತ್ತಿದ್ದು 2031 ಪೂರ್ಣಗೊಳ್ಳಲಿದೆ,ದೆಹಲಿ-ವಾರಣಾಸಿ 865 ಕೀ.ಮಿDPR ತಯಾರಿಸಲಾಗುತ್ತಿದೆ, ದೆಹಲಿ-ಅಮೃತಸರ 480 ಕೀ.ಮಿ DPRಗೆ ಅನುಮೋದನೆ ದೊರತಿದೆ 2051 ರಲ್ಲಿ ಪೂರ್ಣಗೊಳ್ಳಲಿದೆ. ದೆಹಲಿ-ಅಹಮದಾಬಾದ್ 886 ಕೀ.ಮಿ DPRಗೆ ಅನುಮೋದನೆ ದೊರೆತಿದೆ 2031 ರಲ್ಲಿ ಪೂರ್ಣಗೊಳ್ಳಲಿದೆ, ಅಮೃತಸರ-ಜಮ್ಮು 190 ಕೀ.ಮಿ DPRಗೆ ಪ್ರಸ್ತಾಪನೆ ನೀಡಲಾಗಿದೆ 2051 ಕ್ಕೆ ಪೂರ್ಣಗೊಳ್ಳಲಿದೆ.
ವಾರಣಾಸಿ-ಹೌರಾ 711 ಕೀ.ಮಿ DPR ತಯಾರಿಸಲಾಗುತ್ತಿದೆ 2031 ಹೊತ್ತಿದೆ ಪೂರ್ಣಗೊಳ್ಳಲಿದೆ. ಪಾಟ್ನಾ–ಗುವಹಾಟಿ 850 ಕೀ.ಮಿ ಪ್ರಸ್ತಾಪವನೆಗೆ ಇಡಲಾಗಿದೆ 2051 ರಲ್ಲಿ ಪೂರ್ಣಗೊಳ್ಳಲಿದೆ, ಮುಂಬೈ-ನಾಗ್ಪುರ 736 ಕೀ.ಮಿ DPR ತಯಾರಿಸಲಾಗುತ್ತಿದೆ 2051 ಪೂರ್ಣವಾಗಲಿದೆ,
ಮುಂಬೈ-ಹೈದರಾಬಾದ್ 711 ಕೀ.ಮಿ DPR ತಯಾರಿಸಲಾಗುತ್ತಿದೆ 2051 ಪೂರ್ಣವಾಗಲಿದೆ, ಪುಣೆ-ನಾಸಿಕ್ 235 ಕೀ.ಮಿ 2027 DPR ಅನುಮೋದಿಸಲಾಗಿದೆ, ಅಹಮದಾಬಾದ್-ರಾಜ್ಕೋಟ್ 225ಕೀ.ಮಿ DPR ಸಿದ್ಧಪಡಿಸಲಾಗುತ್ತಿದೆ, ನಾಗ್ಪುರ-ವಾರಣಾಸಿ 855 km DPR ಅನುಮೋದಿ ಸಿಕ್ಕಿದ್ದು 2041 ಆಗಲಿದೆ. ಹೈದರಾಬಾದ್-ಬೆಂಗಳೂರು 618 ಕೀ.ಮಿ DPR ತಯಾರಿಗೆ ಒಪ್ಪಿಗೆ ದೊರೆತಿದೆ.2041 ಪೂರ್ಣಗೊಳ್ಳಲಿದೆ.
ತಿರುವನಂತಪುರಂ–ಕಾಸರಗೋಡು 529 ಕೀ.ಮಿ ಘೋಷಿಸಲಾಗಿದೆ(TBD). ಇದರೊಂದಿಗೆ ದೆಹಲಿ-ಮೀರಟ್ ನಡುವೆ ಗಂಟೆಗೆ 300 km ವೇಗದಲ್ಲಿ ಹೋಗುವ RapidX RRTS train ಪ್ರಾರಂಭವಾಗಿದ್ದು ದೆಹಲಿ ಹೊರವಲಯದ ವರಿಗೂ ಸಂಚರಿಸುತ್ತಿದೆ ಮುಂದಿನ ಕಾಮಗಾರಿ ಪ್ರಗತಿ ಹಂತದಲ್ಲಿದೆ,ಇದು ಜಪಾನ್ ಸಹಯೋಗದಲ್ಲಿ ಬರುತ್ತಿರುವ ರೈಲಾಗಿದ್ದು ಮೆಟ್ರೋ ರೈಲು ಕಲ್ಪನೆಯಲ್ಲಿದೆ.