ನ್ಯೂಜ್ ಡೆಸ್ಕ್:ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಗೌರವಾರ್ಥ ರಾಜ್ಯ ಸರ್ಕಾರದಿಂದ ಸರ್ಕಾರಿ ರಜೆ ಘೋಷಿಸಲಾಗಿದೆ ಇದರಂತೆ ಕೆ ಎಸ್ ಆರ್ ಟಿ ನಿಗಮಗಳ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿಗಳಿಗೂ ಬುಧವಾರ ಸರ್ಕಾರಿ ರಜೆ ಘೋಷಿಸಿ ಆದೇಶಿಸಲಾಗಿದೆ.
ಈ ಕುರಿತಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದು, ಎಸ್ ಎಂ ಕೃಷ್ಣ ಅವರ ನಿಧನದ ಪ್ರಯುಕ್ತ ದಿವಂಗತರ ಗೌರವಾರ್ಥವಾಗಿ ರಾಜ್ಯಾಧ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ದಿನಾಂಕ 11-12-2024ರಂದು ಸಾರ್ವಜನಿಕ ರಜೆಯನ್ನು ಸರ್ಕಾರ ಘೋಷಿಸಲಾಗಿದ್ದು
ಕೆ ಎಸ್ ಆರ್ ಟಿ ಸಿ ನಿಗಮದ ಕೇಂದ್ರ ಕಚೇರಿ, ವಿಭಾಗೀಯ ಕಚೇರಿಗಳು, ತರಬೇತಿ ಕೇಂದ್ರಗಳಿಗೆ ಅನ್ವಯಿಸುವಂತೆ ದಿನಾಂಕ 11-12-2024ರಂದು KSRTC ರಜೆ ಘೋಷಿಸಲು ಸೂಕ್ತಾಧಿಕಾರಿಗಳು ಅನುಮೋದಿಸಿರುತ್ತಾರೆ. ಅದರಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಇನ್ನೂ ಕೆ ಎಸ್ ಆರ್ ಟಿ ಸಿ ಯ ನಂತರ ಇತರೆ ಸಾರಿಗೆ ನಿಗಮಗಳು ತಮ್ಮ ನಿಗಮದ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿಗಳಿಗೆ ನಾಳೆ ರಜೆಯನ್ನು ಘೋಷಿಸಿ ಆದೇಶಿಸಿವೆ.ಎಂದಿನಂತೆ ಸಾರಿಗೆ ಸಂಸ್ಥೆ ಬಸ್ಸುಗಳು ಒಡಾಡಲಿದೆ.
METRO ಅಧಿಕಾರಿ ಹಾಗು ಸಿಬ್ಬಂದಿಗೂ ರಜೆ
ಮಾಜಿ ಸಿಎಂ ಎಸ್.ಎಂ ಕೃಷ್ಣ ನಿಧನ ಹಿನ್ನಲೆಯಲ್ಲಿ ಬುಧವಾರ ಬೆಂಗಳೂರಿನ ನಮ್ಮ ಮೆಟ್ರೋ ಅಧಿಕಾರಿ ಹಾಗು ಕಚೇರಿ ಸಿಬ್ಬಂದಿಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದ್ದು ಅದರ ಹೊರತಾಗಿ ನಮ್ಮ ಮೆಟ್ರೋ ರೈಲು ಸಂಚಾರ ಸೇವೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂಬುದಾಗಿ ಬಿಎಂಆರ್ ಸಿಎಲ್ ಸ್ಪಷ್ಟ ಪಡಿಸಿದೆ.