ನ್ಯೂಜ್ ಡೆಸ್ಕ್: ಬಯಸಿದ ಊಟ-ತಿಂಡಿ ಸಿಕ್ಕಾಗ ಖುಷಿಯಿಂದ ಸೇವಿಸುವುದು ಮನುಷ್ಯನ ಸಾಮಾನ್ಯ ಗುಣ ಊಟದ ನಂತರ ಅಗುವ ಪರಿಣಾಮ ಹೊಟ್ಟೆ ಹುಬ್ಬರ ಸಮಸ್ಯೆ ಉಂಟುಮಾಡುತ್ತದೆ ಪದೇ ಪದೇ ಗಾಸ್ ಬಿಡುಗಡೆಯಾಗುತ್ತದೆ ಇದು ಸಾಕಷ್ಟು ಇರುಸು-ಮುರಿಸು ಉಂಟುಮಾಡುತ್ತದೆ. ಇಂದಿನ ಊಟದ ಶೈಲಿಯೇ ಹಾಗಾಗಿದೆ, ಜೋತೆಗೆ ಇವತ್ತಿನ ಜೀವನ ಶೈಲಿಯಲ್ಲಿ ಊದಿದ ಹೊಟ್ಟೆ ಯನ್ನು ಹೊತ್ತು ತಿರುಗಲು ಅಸಹ್ಯ ಎನ್ನುವಷ್ಟು ಸಮಸ್ಯೆ ಕಾಡುತ್ತದೆ.
ಹೆಚ್ಚಾಗಿ ಊಟ ಮಾಡಿದ ನಂತರ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಹೊಟ್ಟೆ ಉಬ್ಬರ. ಊಟದ ನಂತರ ಹೊಟ್ಟೆಯಲ್ಲಿ ಅತೀವವಾದ ಅನಿಲ(ಗ್ಯಾಸ್) ಉತ್ಪಾದನೆ ಅಥವಾ ಜೀರ್ಣಾಂಗದ ಮಾಂಸ – ಖಂಡಗಳ ಅನಿಯಮಿತವಾದ ಚಲನೆ ಸಹಜವಾಗಿಯೇ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆ ಬಂತೆಂದರೆ ಹೊಟ್ಟೆ ತೊಳಸಿದಂತಾಗಿ ವಾಕರಿಕೆ ಬರುವಂತಾಗುತ್ತದೆ. ಹೊಟ್ಟೆ ನೋವಿನ ಲಕ್ಷಣ ಕಾಣುತ್ತದೆ ಇದು ದೇಹದ ಅಸ್ವಸ್ಥತೆ ಹೆಚ್ಚಾಗಿ, ನಮ್ಮ ಪ್ರತಿ ದಿನದ ಕೆಲಸ ಕಾರ್ಯಗಳಿಗೆ ಗಿಡ್ಡಿನೆಸ್ ಆಗಿ ಕಾಡುತ್ತದೆ.
ಇದಕ್ಕೆಲ್ಲಾ ಕಾರಣವೇನು
ಊಟದ ನಂತರ ನಿಮ್ಮ ಹೊಟ್ಟೆಯ ಜೀರ್ಣಾಂಗದಲ್ಲಿ ಹೆಚ್ಚಾದ ಘನಾಹಾರ, ದ್ರವಾಹಾರ ಮತ್ತು ಅನಿಲಗಳು ಹೊಟ್ಟೆಯನ್ನು ಊದಿಕೊಳ್ಳುವಂತೆ ಮಾಡುತ್ತದೆ ಇದಕ್ಕೆ ಸರಳ ಮನೆಮದ್ದುಗಳು ಯಾವುದು ಎಂಬುದನ್ನು ನೋಡಿಕೊಳ್ಳೋಣ.
ಜೀರಿಗೆ
ಎರಡು ಕಪ್ ನೀರಿಗೆ ಒಂದು ಟೀ ಚಮಚ ಜೀರಿಗೆ ಸೇರಿಸಿ, 10-15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಕಾಲ ತಣ್ಣಗಾಗಲು ಬಿಡಿ ನಂತರ ಇದನ್ನು ಊಟ ವಾದ ಮೇಲೆ ಜೀರಿಗೆ ನೀರನ್ನು ಸೇವಿಸುತ್ತಾ ಬಂದರೆ, ಹೊಟ್ಟೆಯ ಉಬ್ಬರ ಅಥವಾ ಹೊಟ್ಟೆಯಲ್ಲಿ ಕಾಣಿಸುವ ಗ್ಯಾಸ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.ಒಂದು ವೇಳೆ ನೀವು ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಜೀರಿಗೆ ಚಹಾವನ್ನು ದಿನಕ್ಕೆ ಮೂರು ಬಾರಿಯಂತೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಜೀರಿಗೆ ಚಹಾ ಮಾಡುವುದು ಹೇಗೆ?
1 ಕಪ್ ನೀರಿಗೆ 1 ಟೇಬಲ್ ಚಮಚ ಜೀರಿಗೆ ಕಾಳುಗಳನ್ನು ಹಾಕಿ. ಚೆನ್ನಾಗಿ ಕುದಿಸಿ. ನಂತರ ಸೋಸಿ ಒಂದು ದಿನಕ್ಕೆ ಮೂರು ಬಾರಿ ಈ ನೀರನ್ನು ಕುಡಿಯಿರಿ.ದಿನಕ್ಕೆ ಎರಡು ಲೋಟ ಜೀರಿಗೆ ನೀರು ಕುಡಿದರೆ-ತೂಕ ಇಳಿಯುತ್ತೆ!
ಇಂಗು
ಇಂಗು ನಿಮ್ಮ ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲವನ್ನು ಉತ್ಪಾದಿಸುವ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.
ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಯಿಂದ ಬಳಲುವವರು ಅರ್ಧ ಟೀ ಚಮಚ ಇಂಗ್ ಅನ್ನು ಒಂದು ಲೋಟ ಮಜ್ಜಿಗೆಗೆ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬಹುದು. ಈ ವಿಧಾನದಿಂದ ಬಹುಬೇಗ ಗ್ಯಾಸ್ ದೇಹದಿಂದ ಹೊರಗೆ ಹೋಗಿ ಸಮಸ್ಯೆ ನಿವಾರಣೆಯಾಗುತ್ತದೆ.
ತಾಜಾ ಶುಂಠಿ
ಶುಂಠಿಗೆ ಆಯುರ್ವೇದದಲ್ಲಿ ಪ್ರತ್ಯಕ ಸ್ಥಾನ ಇದೆ ಇದನ್ನು ಅತ್ಯುತ್ತಮ ಔಷಧಿ ಮೂಲ ಎಂದು ಗುರುತಿಸಲಾಗಿದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವುದು. ಗ್ಯಾಸ್ ಸಮಸ್ಯೆ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಶುಂಠಿಯ ಪರಿಹಾರ ಕಂಡುಕೊಳ್ಳಬಹುದು. ತಾಜಾ ಶುಂಠಿಯ ತುರಿಯನ್ನು ನಿಂಬೆ ರಸದೊಂದಿಗೆ ಸೇರಿಸಿ, ಸೇವಿಸಬೇಕು. ಈ ಕ್ರಮವನ್ನು ಊಟದ ನಂತರ ಸೇವಿಸಿದರೆ ಉತ್ತಮ ಪರಿಹಾರ ನೀಡುವುದು. ಅಷ್ಟೇ ಅಲ್ಲದೇ ಅಜೀರ್ಣ ಸಮಸ್ಯೆ ಉಂಟಾಗಿದ್ದರೆ, ಪ್ರತಿ ದಿನ ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನದ ಸಮಯದಲ್ಲಿ ಶುಂಠಿ ಚಹಾವನ್ನು ಸೇವಿಸುವುದರಿಂದ ನೀವು ಈಗಾಗಲೇ ತಿಂದಿರುವ ಆಹಾರ ಮತ್ತು ತಿನ್ನಲು ಬಯಸುವ ಆಹಾರ ಎರಡನ್ನೂ ಸಹ ಚೆನ್ನಾಗಿ ಜೀರ್ಣ ಆಗುವಂತೆ ಮಾಡಿ ಹೊಟ್ಟೆಯ ಉಬ್ಬರ ಉಂಟಾಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ನೀವು ಸೇವಿಸಿದ ಆಹಾರದಲ್ಲಿ ಸೇರಿರುವ ವಿವಿಧ ಬಗೆಯ ಪೌಷ್ಟಿಕಾಂಶಗಳನ್ನು ದೇಹ ಹೀರಿಕೊಳ್ಳುವಂತೆ ಮಾಡುತ್ತದೆ
ಅಡುಗೆ ಸೋಡ
ಒಂದು ಟೀ ಚಮಚ ನಿಂಬೆ ರಸಕ್ಕೆ ಅರ್ಧ ಟೀ ಚಮಚ ಅಡುಗೆ ಸೋಡವನ್ನು ಸೇರಿಸಿ, ಒಂದು ಕಪ್ ನೀರಿನಲ್ಲಿ ಬೆರೆಸಿ. ನಂತರ ಸೇವಿಸಿ. ಇದರಿಂದ ಗ್ಯಾಸ್ ಸಮಸ್ಯೆ ಬಗೆಹರಿಯುವುದು. ಊಟದ ನಂತರ ಈ ಕ್ರಮ ಅನುಸರಿಸಿದರೆ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಕಾರ್ಬನ್ ಡೈ ಆಕ್ಸೈಡ್ ಅನ್ನು ದೇಹದ ಹೊರಗೆ ಹೋಗುವಂತೆ ಉತ್ತೇಜನ ನೀಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುವುದು.
ಅಡಿಗೆ ಸೋಡಾದಿಂದ ದೊರೆಯುವ ಪ್ರಯೋಜನಗಳೇನು ಗೊತ್ತೇ?
ತ್ರಿಫಲ ಪುಡಿ
ಕುದಿಯುವ ನೀರಿಗೆ ಅರ್ಧ ಟೀ ಚಮಚ ತ್ರಿಫಲ ಪುಡಿಯನ್ನು ಸೇರಿಸಿ, 10-15 ನಿಮಿಷ ಕುದಿಸಿ. ನಂತರ ಒಂದೆಡೆ ಇಡಿ. ಊಟದ ನಂತರ ತ್ರಿಫಲ ದ್ರಾವಣ ಅಥವಾ ನೀರನ್ನು ಕುಡಿಯಿರಿ. ಇದನ್ನು ಅತಿಯಾಗಿ ಕುಡಿದರೂ ಹೊಟ್ಟೆ ಉಬ್ಬರ ಉಂಟಾಗುವುದು. ಹಾಗಾಗಿ ಮಿತವಾದ ಸೇವನೆ ಮಾಡುವುದು ಉಚಿತ. ಅಲ್ಲದೆ ಸಮಸ್ಯೆಯೂ ನಿವಾರಣೆಯಾಗುವುದು.
ಊಟದ ನಂತರ ನಡೆದಾಡಿ
ಹೊಟ್ಟೆ ತುಂಬಾ ಊಟದ ನಂತರ, ಮನೆಯಿಂದ ಹೊರಗೆ ಹೋಗಿ ಒಡಾಡಿ ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಹೊಟ್ಟೆಯಲ್ಲಿರುವ ಗ್ಯಾಸ್ ಹೊರಹೋಗುತ್ತದೆ ಇದರಿಂದ ನೈಸರ್ಗಿಕವಾಗಿ ಹೊಟ್ಟೆ ಉಬ್ಬರ ನಿವಾರಾಣೆಯಾಗುತ್ತದೆ.
ಸಂಗ್ರಹ:ವಿನಿತಾಶ್ರೀನಿವಾಸನ್