ಶ್ರೀನಿವಾಸಪುರ:ಭಾರತ ದೇಶ ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾಗಿ ಸ್ವಾತಂತ್ರ್ಯೋತ್ಸಗೊಂಡು 75ನೇ ವರ್ಷದ ಅಮೃತಮಹೋತ್ಸವ ಆಚರಿಸುತ್ತಿರುವುದರ ಹಿನ್ನಲೆಯಲ್ಲಿ ತ್ಯಾಗ ಬಲಿದಾನದ ಸ್ವಾತಂತ್ರ್ಯ ಸಂಗ್ರಾಮದ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರನ್ನು ನೆನಪಿಸುಕೊಳ್ಳುವ ದೃಷ್ಠಿಯಿಂದ ತಾಲೂಕು ಆಡಳಿತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕುಟುಂಬಸ್ಥರನ್ನು ಅವರಿರುವ ಸ್ಥಳಕ್ಕೆ ತೆರಳಿ ಗೌರವಿಸಿರುತ್ತಾರೆ.
ತಹಶೀಲ್ದಾರ್ ಶೀರಿನಾತಾಜ್ ತಮ್ಮ ಅಧಿಕಾರಿಗಳೊಂದಿಗೆ ಶ್ರೀನಿವಾಸಪುರ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ವೆಂಕಟಪ್ಪಶೆಟ್ರ ಸೊಸೆ ಹಾಗು ಸ್ವಾತಂತ್ರ್ಯ ಹೋರಾಟಗಾರ ಹಾಗು ಪ್ರಜಾಚಳವಳಿಯ ಹೋರಾಟಗಾರ ದಿವಂಗತ ಚಂದ್ರಯ್ಯಶೆಟ್ಟಿಯವ ಧರ್ಮಪತ್ನಿ ವನಜಾಕ್ಷಮ್ಮ ಅವರನ್ನು ಅವರ ಸ್ವಗೃಹದಲ್ಲಿ ಭೇಟಿಯಾಗಿ ರಾಷ್ಟ್ರ ಧ್ವಜ ನೀಡಿ ಸನ್ಮಾನಿಸಿರುತ್ತಾರೆ. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಶೀರಿನಾತಾಜ್ ರಾಯಲ್ಪಾಡು ಹೋಬಳಿಯಲ್ಲಿ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಇದ್ದು ಅವರೆಲ್ಲ ನಿಧನ ಹೊಂದಿರುವ ಹಿನ್ನಲೆಯಲ್ಲಿ ಅವರ ಪತ್ನಿಯರನ್ನು ಗೌರವಿಸಲಾಗಿದ್ದು 75ನೇ ವರ್ಷಗಳು ಕಳೆದ ಸ್ವಾತಂತ್ರ್ಯೋವಕ್ಕೆ ಈಗ ಅಮೃತಮಹೋತ್ಸ ಆಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಎಲ್ಲರ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಕಸಬಾ ರೆವಿನ್ಯೂ ಇನ್ಸೆಪೆಕ್ಟರ್ ಮುನಿರೆಡ್ಡಿ ನಾಗರಾಜ್,ವಿವೇಕ್ ಎಸ್ ಶೆಟ್ಟಿ ಮುಂತಾದವರು ಇದ್ದರು.
ಪುರಸಭೆಯಿಂದಲೂ ಗೌರವ
ಶ್ರೀನಿವಾಸಪುರದ ಕಟ್ಟೆಮನೆ ಕುಟುಂಬದ ಸ್ವಾತಂತ್ರ್ಯ ಹೋರಾಟಗಾರರಾದ ವೆಂಕಟಪ್ಪಶೆಟ್ಟಿಯವರ ಸೊಸೆ ಹಾಗು ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಜಾಚಳವಳಿಯ ಹೋರಾಟಗಾರ ದಿವಂಗತ ಚಂದ್ರಯ್ಯಶೆಟ್ಟಿಯವ ಧರ್ಮಪತ್ನಿ ವನಜಾಕ್ಷಮ್ಮ ಅವರನ್ನು ಅವರ ಸ್ವಗೃಹದಲ್ಲಿ ಭೇಟಿಯಾದ ಪುರಸಭೆ ಮುಖ್ಯಾಧಿಕಾರಿ ಜಯರಾಮ್ ರಾಷ್ಟ್ರ ಧ್ವಜ ನೀಡಿ ಫಲತಾಂಬೂಲ ಶಾಲು ಹೊದಿಸಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಸ್ವಾತಂತ್ರ್ಯದ ಮಹತ್ವ ಮುಂದಿನ ಪೀಳಿಗೆಗೂ ತಲುಪ ಬೇಕಿದೆ ಎಂದ ಅವರು 75 ನೇ ವರ್ಷದ ಸ್ವಾತಂತ್ರ್ಯದ ಅಮೃತಮಹೋತ್ಸ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪಾಲ್ಗೋಳ್ಳುವಂತೆ ಕೋರಿದರು ಈ ಸಂಬರ್ಭದಲ್ಲಿ ಪುರಸಭೆ ಕಂದಾಯ ಅಧಿಕಾರಿ ನಾಗರಾಜ್,ಶಂಕರ್,ಸುರೇಶ್ ಕುಮಾರ್,ಶಿವಪ್ರಸಾದ್ ಮುಂದಾದವರು ಇದ್ದರು.