ಚಿಂತಾಮಣಿ:ಗಣರಾಜ್ಯೋತ್ಸವ ಪ್ರಯುಕ್ತ ತೋಟಗಾರಿಕಾ ಇಲಾಖೆ ವತಿಯಿಂದ ಸಸ್ಯ ಕಾಶಿ ಎಂದೇ ಹೆಸರಾಗಿರುವ ಲಾಲ್ಬಾಗ್ ನಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ 217ನೇ ಫಲ ಪುಷ್ಪ ಪ್ರದರ್ಶನದಲ್ಲಿ ರಾಮಾಯಣ ಮಹಾಕಾವ್ಯ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನದಲ್ಲಿ ಚಿಂತಾಮಣಿಯ ಖ್ಯಾತ ವ್ಯಾಪರಸ್ಥ ಕಾರುಪಾಕುಲ ಕುಟುಂಬದ ನಾಗಹರ್ಷ ಅವರ ಪತ್ನಿ ಹಾಗು ಮಧುಬನಿ ಚಿತ್ರ ಕಲಾವಿದೆ ರಶ್ಮಿಹರ್ಷ ಅವರು ತೆಂಗಿನಗರಿಗಳಿಂದ ಪ್ರಾಕೃತಿಕವಾಗಿ ನಿರ್ಮಿಸಿದ್ದ ರಾಮಂದಿರದ ಕಲಾಕೃತಿಗೆ ತೀರ್ಪುಗಾರರು ಉತ್ತಮ ಫಲಿತಾಂಶ ನೀಡಿದ್ದಾರೆ.
ಜನವರಿ 16 ರಿಂದ ಜನವರಿ 26ರ ವರೆಗೆ ನಡೆದಂತ ಫಲ ಪುಷ್ಪ ಪ್ರದರ್ಶನದಲ್ಲಿ ಹಲವಾರು ಕಲಾವಿದರು ತಮ್ಮದೆ ಆದ ಪರಿಕಲ್ಪನೆಯಲ್ಲಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಘಟನಾವಳಿಗಳನ್ನು ಪ್ರಾಕೃತಿಕವಾಗಿ ಆಕರ್ಷಕ ಪುಷ್ಪಗಳಲ್ಲಿ ಅರಳಿಸಿದ್ದರು ಇದರಲ್ಲಿ ಚಿಂತಾಮಣಿ ಕಲಾವಿದೆ ರಶ್ಮಿಹರ್ಷ ಅವರು ತಮ್ಮ ಕೈಚಳಕದಿಂದ ತೆಂಗಿನಗರಿಗಳಿಂದ ಅಯೋಧ್ಯೆ ರಾಮಮಂದಿರವನ್ನು ಹಸಿರು ಬಣ್ಣದಲ್ಲಿ ವೈವಿದ್ಯಮಯವಾಗಿ ನಿರ್ಮಿಸಿ ಕಲಾತ್ಮಕ ಸ್ಪರ್ಶ ನೀಡಿದ್ದರು ಅದು ನೋಡುಗರನ್ನು ಆಕರ್ಷಿಸಿ ತೀರ್ಪುಗಾರರ ಮೆಚ್ಚುಗೆ ಗಳಿಸಿ ಪ್ರಥಮ ಬಹುಮಾನ ಪಡೆದಿದೆ.ಖ್ಯಾತ ಚಲನಚಿತ್ರ ನಟಿ ಪ್ರೇಮಾ ಅವರು ಸಹ ರಶ್ಮಿಹರ್ಷ ಪ್ರಾಕೃತಿಕ ಕಲಾಕೃತಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಶಸ್ತಿ ವಿಜೇತ ರಶ್ಮಿಹರ್ಷ ಅವರು ಕರ್ನಾಟಕ ಸರ್ಕಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಬೆಂಗಳೂರು ಡಿಐಜಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರಿಂದ ಪ್ರಶಸ್ತಿ ಫಲಕ ಪಡೆದುಕೊಂಡಿದ್ದಾರೆ.