ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಹಣ್ಣು-ಹಂಪಲುಗಳು, ಗಿಡಮೂಲಿಕೆಗಳು ಆರೋಗ್ಯ ವೃದ್ಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.ಇದನ್ನು ಪೂರ್ವಿಕರು ಸಾಬಿತು ಪಡಿಸಿದ್ದಾರೆ ಇಂದಿಗೂ ಮಾರಣಾಂತಿಕ ಕಾಯಿಲೆಗಳು ಗಿಡಮೂಲಿಕೆಗಳಿಂದ ತಯಾರಿಸಿದ ಔಷದಿಗಳಿಂದ ಗುಣವಾದ ಹಲವಾರು ಉದಾಹರಣೆಗಳು ಇವೆ.
- ಕಾರ್ಬೋಹೈಡ್ರೇಟ್ಗಳು: 18.70 ಗ್ರಾಂ,
- ಪ್ರೋಟೀನ್: 1.67 ಗ್ರಾಂ,ಕೊಬ್ಬು: 1.2 ಗ್ರಾಂ
- ಸಕ್ಕರೆ: 14 ಗ್ರಾಂ,ಫೈಬರ್: 7 ಗ್ರಾಂ ಇರಲಿದೆ.
ಹೆಲ್ತ್ ಡೆಸ್ಕ್: ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದ್ದು ಇದರ ರಸ/ಜ್ಯೂಸ್ ಆರೋಗ್ಯಕರ ಎನ್ನುತ್ತಾರೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಟ್ಯೂಮರ್ ಗುಣಲಕ್ಷಣಗಳು ಇದ್ದು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದಿಯಂತೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅದರ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು ಇದರಿಂದಾಗಿ ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರುವ ಮೂಲಕ ಹೃದಯ ಆರೋಗ್ಯ ಸಮಸ್ಯೆ ತಡೆಯುವ,ಉರಿಯೂತ ನಿವಾರಕ ಗುಣಗಳು,ಮೂತ್ರದ ಆರೋಗ್ಯಕ್ಕೂ,ಉತ್ತಮ ಜ್ಞಾಪಕ ಶಕ್ತಿ ಹೆಚ್ಚಿಸುವ ಹಾಗೆ ಕ್ಯಾನ್ಸರ್ ತಡೆಯುವ ಶಕ್ತಿ ಇದೆ ಎನ್ನುತ್ತಾರೆ.
ಹಗಲಿನಲ್ಲಿ ದಾಳಿಂಬೆ ರಸವನ್ನು ಕುಡಿಯುವುದರಿಂದ ವಿಟಮಿನ್ ನಿಂದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ತಾಜಾತನವನ್ನು ನೀಡುತ್ತದೆ.
ರಾತ್ರಿಯಲ್ಲಿ ದೇಹ ವಿಶ್ರಾಂತಿಯಲ್ಲಿರುತ್ತದೆ.
ರಾತ್ರಿ ದಾಳಿಂಬೆ ಜ್ಯೂಸ್ ಕುಡಿದರೆ ನಿದ್ದೆಯನ್ನು ಕೆಡಿಸಬಹುದು.ನೈಸರ್ಗಿಕ ಸಿಹಿ ಅಂಶ ಇರುವುದರಿಂದ ಹಗಲು ಸುಲಭವಾಗಿ ಜೀರ್ಣವಾಗುತ್ತದೆ. ರಾತ್ರಿ ಸಮಯದಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದರಿಂದ ಹೊಟ್ಟೆ ಭಾರವಾಗಬಹುದು. ಜೊತೆಗೆ ರಾತ್ರಿ ವೇಳೆ ತಂಪು ಪಾನೀಯಗಳ ಸೇವನೆಯಿಂದ ಶೀತ ಮತ್ತು ಕೆಮ್ಮು ಬರಲಿದೆ.
ದಾಳಿಂಬೆ ರಸದಂತಹ ಉತ್ಪನ್ನಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದು ಹೃದಯದ ಆರೋಗ್ಯವನ್ನು ರಕ್ಷಿಸಲು ಸಹಕಾರಿಯಗಲಿದಿಯಂತೆ.
ದಾಳಿಂಬೆ ಸೇವನೆಯಿಂದ ಅಧಿಕ ರಕ್ತದೊತ್ತಡ ಮತ್ತು ಅಧಿಕ ರಕ್ತದ ಲಿಪಿಡ್ ಮಟ್ಟಗಳಂತಹ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳಿಂದ ಹೇಳಲಾಗಿದಿಯಂತೆ.
ಸಿಪ್ಪೆಯಿಂದ ಅಜೀರ್ಣ ಸಮಸ್ಯೆಗೆ ಪರಿಹಾರ
ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಸಾಮಾನ್ಯವಾಗಿ ಕಂಡುಬರುವ ಅಜೀರ್ಣದ ಸಮಸ್ಯೆಗೆ ದಾಳಿಂಬೆ ಸಿಪ್ಪೆ ಉತ್ತಮ ಔಷಧವಾಗಿದ್ದು, ಅತಿಸಾರ ಭೇದಿ ಉಂಟಾದಾಗ ಅಥವಾ ರಕ್ತ ಭೇದಿ ಸಮಸ್ಯೆ ಉಂಟಾದಾಗ ಒಣಗಿಸಿದ ದಾಳಿಂಬೆಯ ಸಿಪ್ಪೆಯನ್ನು ಲಿಂಬೆ ಹಣ್ಣಿನಲ್ಲಿ ತೇದಿ ಚೂರ್ಣವಾಗಿ ಮಾಡಿ ಸೇವಿಸುವುದರಿಂದ ಅತಿಸಾರದ ಸಮಸ್ಯೆ ಗುಣಮುಖವಾತ್ತದೆ.
ದಾಳಿಂಬೆಯನ್ನು ಸಲಾಡ್, ಜ್ಯೂಸ್, ಇಲ್ಲ ಹಾಗೇ ಕೂಡ ಸೇವಿಸಬಹುದಾಗಿದ್ದು, ಬೀಜಗಳಂತಿರುವ ದಾಳಿಂಬೆಯನ್ನು ಹಲವಾರು ಪಾಕಪದ್ಧತಿಯಲ್ಲೂ ಉಪಯೋಗಿಸುತ್ತಾರೆ.ಸಿರಪ್ ಮಾಡಲು, ಕೆಲವರು ಪಚಡಿಯಂತಹ ರೆಸಿಪಿಗಳಿಗೆ ಸೇರಿಸುತ್ತಾರೆ.ಇದು ಐಸ್ ಕ್ರೀಮ್ ಟಾಪಿಂಗ್ ಆಗಿಯೂ ಉತ್ತಮವಾಗಿರುತ್ತದೆ.ದಾಳಿಂಬೆ ಹಣ್ಣನ್ನು ಇಂತಹವರೆ ಸೇವಿಸಬೇಕೆಂಬ ಕಟ್ಟುನಿಟ್ಟು ಇಲ್ಲ ಯಾರು ಬೇಕಾದರೂ ಹಣ್ಣನ್ನು ಸೇವಿಸಬಹುದು. ಹಣ್ಣಿನಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂಬುದು ತಜ್ಞರ ಮಾತು.
ಮಧುಮೇಹ ರೋಗಿಗಳು ದಾಳಿಂಬೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಹಣ್ಣಿನಲ್ಲಿ ಸುಕ್ರೋಸ್, ಗ್ಲೂಕೋಸ್ ಮತ್ತು ಫ್ರಕ್ಟೋಸ್ನಂತಹ ಸಕ್ಕರೆಯ ಅಂಶಗಳಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ಮಧುಮೇಹ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಜ್ಞರು, ವೈದ್ಯರ ಸಲಹೆ ಮೇರೆಗೆ ಹಣ್ಣನ್ನು ಸೇವನೆ ಮಾಡಬಹುದು.