- ಪ್ರಥಮ ದ್ವೀತಿಯ ತೃತೀಯ ಬಹುಮಾನ ವಿತರಣೆ
- ಬಹುತೇಕ ಸ್ಪರ್ದಿಗಳು ಶ್ರೀರಾಮ ನವಮಿ
- ಕಲ್ಪನೆಯಲ್ಲಿ ರಂಗೋಲಿ ಬಿಡಿಸಿದ್ದು ವಿಶೇಷ
ಶ್ರೀನಿವಾಸಪುರ: ಶ್ರೀರಾಮನವಮಿ ಅಂಗವಾಗಿ ಶ್ರೀನಿವಾಸಪುರ ಪಟ್ಟಣದ ಶ್ರೀ ಚೌಡೇಶ್ವರಿ ಯುವಕ ಸಂಘದ ವತಿಯಿಂದ ಪಟ್ಟಣದ ಸುಭಾಷ್ ರಸ್ತೆಯಲ್ಲಿ ಏರ್ಪಡಿಸಿದ್ದ ‘ಸಡಗರದ ರಂಗೋಲಿ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸುಭಾಷ್ ರಸ್ತೆಯ ನಿವಾಸಿಗರ ಸಹಕಾರದೊಂದಿಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಬಣ್ಣ ಬಣ್ಣದ ರಂಗವಲ್ಲಿ ಬಿಡಿಸಲು ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ 10 ವರ್ಷದ ಹೆಣ್ಮಕ್ಕಳಿಂದ ಹಿಡಿದು, ವಯಸ್ಸಾದ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡು ರಂಗೋಲಿ ಬಿಡಿಸಿದರು.
ರಂಗವಲ್ಲಿ ಬಿಡಿಸುವವರು ಒಬ್ಬರಾದರೆ ಅವರಿಗೆ ಉತ್ತೇಜನ ನೀಡಲು ಕುಟುಂಬದ ಕೆಲ ಸದಸ್ಯರು, ಸ್ನೇಹಿತರು ಸಹ ಆಗಮಿಸಿ ಸಲಹೆ ಸೂಚನೆಗಳನ್ನು ನೀಡುತ್ತ ಉತ್ತೇಜಿಸುತ್ತಿದ್ದರು ಎಲ್ಲರಲ್ಲೂ ಕುತೂಹಲ ಒಂದಕ್ಕಿಂತ ಮತ್ತೊಂದು ಭಿನ್ನವಾದ ರಂಗವಲ್ಲಿ ಕಂಡು ಸಂತಸ ವ್ಯಕ್ತಪಡಿಸುತ್ತಿದ್ದರು.
ಶ್ರೀರಾಮನವಮಿ ಪರಿಕಲ್ಪನೆಯಡಿಯಲ್ಲಿ ಬಹುತೇಕ ಸ್ಪರ್ದಾಳುಗಳು ರಾಮಮಂದಿರ ರಾಮಸೀತೆ ಅಂಜನೇಯ ಬಿಲ್ಲುಭಾಣಗಳ
ರಂಗೋಲಿಗಳನ್ನು ಬಿಡಿಸಿದ್ದು ವಿಶೇಷವಾಗಿತ್ತು ಸಂಜೆ ನಾಲ್ಕು ಗಂಟೆಯ ಪ್ರಕರ ಸೂರ್ಯಯನ ಬೆಳಕಿನಲ್ಲೆ ಪ್ರಾರಂಭವಾದ ರಂಗೋಲಿ ಸ್ಪರ್ದೆ ಮುಗಿಯುವ ಹೊತ್ತಿಗೆ ರಾತ್ರಿ ಹತ್ತುಗಂಟೆಯಾಗಿತ್ತು.ರಂಗೋಲಿ ಪೂರ್ಣಗೊಳಿಸಿದವರು ಕೊನೆಯಲ್ಲಿ ತಾವು ಬಿಡಿಸಿದ ರಂಗೋಲಿಯೊಂದಿಗೆ ಚೆಂದದ ರಂಗೋಲಿ ಬಿಡಿಸಿದ್ದೇನೆ’ ಎಂದು ಸೇಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಸುಭಾಷ್ ರಸ್ತೆಗೆ ಮೆರುಗು ತಂದ ರಂಗೋಲಿಗಳು
ರಸ್ತೆಯಲ್ಲಿ ಸಾಲು ಸಾಲಾಗಿ ಬಿಡಿಸಿದ್ದ ಬಣ್ಣ ಬಣ್ಣದ ಚಿತ್ತಾರದ ರಂಗೋಲಿಗಳು ಜನಮನ ಸೇಳೆಯಿತಲ್ಲದೆ ರಂಗೋಲಿಗಳ ಚಿತ್ತಾರ ರಸ್ತೆಗೆ ಹೊಸ ಮೆರುಗು ನೀಡಿದಂತಿತ್ತು.ರಾಶಿ ಎನ್ನುವರು ಬಿಡಿಸಿದ್ದ ಶ್ರೀರಾಮ ಸೀತೆ ರಾಮಂದಿರಕ್ಕೆ ತೆರಳುತ್ತಿರುವ ರಂಗವಲ್ಲಿ ವಿಶೇಷವಾಗಿ ಜನರನ್ನು ಆಕರ್ಷಿಸಿತು. ರಂಗೋಲಿ ಸ್ಪರ್ದೆಯಲ್ಲಿ ವಿಜೇತರಾದ ತಿರುಮಲದ ರಂಗೋಲಿ ಬಿಡಿಸಿದ್ದ ಶೃತಿರಾವ್ ಪ್ರಥಮ ಬಹುಮಾನ ಪಡೆದು ಕಂಚಿನ ದೀಪ ಪಡೆದಿರುತ್ತಾರೆ.ದ್ವೀತೀಯ ಸ್ಥಾನ ಯುಕ್ತಿ ಗಳಿಸಿ ಬೆಳ್ಳಿಕುಂಕಮ ಭರಣಿ ಪಡೆದಿರುತ್ತಾರೆ,ಮೂರನೆ ಸ್ಥಾನ ಗಳಿಸಿದ ನಂದಿನಿ ಕಂಚಿನ ದೀಪಗಳನ್ನು ಪಡೆದಿರುತ್ತಾರೆ.
ರಂಗೋಲಿ ತಿರ್ಪುಗಾರರಾಗಿ ಸಾಹಿತಿ,ಲೇಖಕಿ ಮಾಯಬಾಲಚಂದ್ರ ಮತ್ತು ಅರುಣಾ ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಉಸ್ತುವಾರಿಯಾಗಿ ಶ್ರೀ ಚೌಡೇಶ್ವರಿ ಯುವಕ ಸಂಘದ ಮುಖ್ಯಸ್ಥ ಮುರಳಿರೆಡ್ಡಿ,ಶ್ರೀನಿವಾಸ್ ಮುಂತಾದವರು ಇದ್ದರು.