- ಶ್ರೀನಿವಾಸಪುರದ ರಕ್ಷಿತಾರಣ್ಯ
- ಹೊಗಳಗೆರೆ ರಸ್ತೆಯಲ್ಲಿರುವ ಅರಣ್ಯ ಭೂಮಿ
- ಮದ್ಯರಾತ್ರಿಯಲ್ಲೆ ಅಬ್ಬರಿಸಿದ ಜೆಸಿಬಿಗಳು
- ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ
ಶ್ರೀನಿವಾಸಪುರ:ಅರಣ್ಯ ಇಲಾಖೆ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸುಮಾರು 120 ಎಕರೆ ಅರಣ್ಯ ಭೂಮಿಯ ಒತ್ತುವರಿ ಮಾಡಿಕೊಂಡಿರುವ ಜಮೀನು ತೆರವು ಕಾರ್ಯ ಚರಣೆಯನ್ನು ಕೋಲಾರ ಜಿಲ್ಲಾ ಅರಣ್ಯಾಧಿಕಾರಿ ಎಡುಕೊಂಡಲು ನೇತೃತ್ವದಲ್ಲಿ ಮಂಗಳವಾರ ಮದ್ಯರಾತ್ರಿಯಿಂದಲೆ ತೆರವು ಗೊಳಿಸಲಾಗಿದೆ ಸುಮಾರು 25ಕ್ಕೂ ಹೆಚ್ಚು ಜೆಸಿಬಿಗಳು,ಬುಲ್ಡೋಜರಗಳು, ಕಾರ್ಯಚರಣೆಯಲ್ಲಿ ಉಪಯೋಗಿಸಲಾಗಿದ್ದು ಹತ್ತಾರು ವರ್ಷಗಳ ಮಾವಿನ ಮರಗಳು,ನೆರಳೆ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳ ಮರಗಳು ಮತ್ತು ಬೊರವೆಲ್ ಶೆಡ್ ಗಳು,ಕೃಷಿಹೊಂಡಗಳು,ನೆಲಸಮ ವಾದರೆ ಇನ್ನು ಕೆಲವು ಭಾಗದಲ್ಲಿ ಬೆಳೆದಿದ್ದ ತರಕಾರಿ ಬೆಳೆಗಳು ಜೆಸಿಬಿಗಳ,ಬುಲ್ಡೋಜರ್ ವಾಹನಗಳ ಚಕ್ರಗಳ ಕೆಳಗೆ ನಲಗಿ ಹೋದವು.
ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ರಸ್ತೆಯಲ್ಲಿರುವಂತ ಅರಣ್ಯ ಭೂಮಿ ಒತ್ತುವರಿಯಾಗಿದ್ದ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಅರಣ್ಯ ಇಲಾಖೆ ಡಿಎಫ್ಓ ಏಡುಕೊಂಡಲ ನೇತೃತ್ವದಲ್ಲಿ ಶ್ರೀನಿವಾಸಪುರ ರೇಂಜ್ ಫಾರೆಸ್ಟರ್ ಮಹೇಶ್,ಮುಳಬಾಗಿಲು ರೇಂಜ್ ಫಾರೆಸ್ಟರ್ ಜ್ಯೋತಿ ಸೇರಿದಂತೆ 150 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗು 100ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ರಕ್ಷಣೆಯಲ್ಲಿ ಮಂಗಳವಾರ ಮದ್ಯರಾತ್ರಿ ತೆರವು ಕಾರ್ಯ ಚರಣೆ ಆರಂಬಿಸಿ ಬೆಳಗಿನ ಹೊತ್ತಿಗೆ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸುಮಾರು 120 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ದಾರರಿಂದ ತೆರವು ಮಾಡಿರುತ್ತಾರೆ.
ಅರಣ್ಯ ಮರಗಳ ನಾಟಿ ಅರಂಭ
ಒತ್ತುವರಿ ದಾರರಿಂದ ತೆರವು ಗೊಳಿಸಿದ ಅರಣ್ಯ ಭೂಮಿಯಲ್ಲಿ ಅರಣ್ಯ ಇಲಾಖೆವತಿಯಿಂದ ಸ್ಥಳದಲ್ಲಿಯೇ ಅರಣ್ಯ ಮರಗಳನ್ನು ನಾಟಿ ಮಾಡುವ ಮೂಲಕ ಅರಣ್ಯ ಇಲಾಖೆ ಅರಣ್ಯ ರಕ್ಷಣೆಗೆ ಮುಂದಾಗಿದೆ.
ವಿರೋಧ ವ್ಯಕ್ತ ಪಡಿಸಿದವರ ವಿರುದ್ದ ಕಾನೂನು ಕ್ರಮ
ಮದ್ಯರಾತ್ರಿಯಲ್ಲಿ ಅರಣ್ಯ ಭೂಮಿ ಒತ್ತುವರಿ ಪ್ರಾರಂಭವಾಗುತ್ತಿದ್ದಂತೆ ಒತ್ತುವರಿ ದಾರರು ಎನ್ನಲಾದ ಕುಟುಂಬದ ಸದಸ್ಯರು ಒತ್ತುವರಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಮತ್ತು ಪೋಲಿಸ್ ಸಿಂಬಂದಿಯೊಂದಿಗೆ ಒತ್ತುವರಿ ಕುಟುಂಬದ ಸದಸ್ಯರ ನಡುವೆ ಕೆಲ ಹೊತ್ತು ಮಾತಿನ ಚಕಮುಕಿ ನಡೆಯಿತು ಈ ಸಂದರ್ಭದಲ್ಲಿ ಅರಣ್ಯ ಒತ್ತುವರಿ ಕುಟುಂಬದ ಸದಸ್ಯರು ಕಾರ್ಯಚರಣೆಯಲ್ಲಿದ್ದ ಜೆಸಿಬಿಗಳನ್ನು ಜಕಂ ಗೊಳಿಸಿದ್ದಾರೆ ಕಾರ್ಯಚರಣೆಗೆ ಅಡ್ಡಪಡಿಸಿದ್ದು ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಅರಣ್ಯಾಧಿಕಾರಿ ಎಡುಕೊಂಡಲು ತಿಳಿಸಿದರು.
ಊರೆಲ್ಲ ಅರಣ್ಯ ಒತ್ತುವರಿ ಸುದ್ದಿ ವೈರಲ್
ಇಡಿ ವಿಶ್ವ ಭಾರಿ ಕುತೂಹಲದಿಂದ ಚಂದ್ರಯಾನ-3 ಯೋಜನೆಯ ಲ್ಯಾಂಡರ್ ಶಶಿಯ ಸ್ಪರ್ಶಕ್ಕೆ ರೆಡಿಯಾಗಿರುವ ಬಾಹ್ಯಕಾಶದ ಸುದ್ದಿಗಾಗಿ ಕಾಯುತ್ತಿದ್ದರೆ, ಇತ್ತ ಇಡಿ ಶ್ರೀನಿವಾಸಪುರ ತಾಲೂಕಿನಾದ್ಯಂತ ಅರಣ್ಯ ಭೂಮಿ ಒತ್ತುವರಿಯಾಗಿರುವ ಬಗ್ಗೆ ಕುರಿತಾಗಿ ಪುಂಕಾನು ಪುಂಕವಾಗಿ ಹೇಳಿಕೊಂಡು ತಿರುಗುವರ ಸಂಖ್ಯೆಯೆ ಹೆಚ್ಚಾಗಿದೆ.