ಶ್ರೀನಿವಾಸಪುರ:ತಾಲ್ಲೂಕು ನೌಕರರ ಸಂಘದ ಚುನಾವಣೆ ಮತದಾರ ಪಟ್ಟಿಯನ್ನು ತೆಯಾರಿಸಲಾಗಿದ್ದು ಇದರಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಪ್ರಮುಖ ನೌಕರರ ಹೆಸರುಗಳನ್ನು ಕೈ ಬಿಟ್ಟು ಮತದಾರರ ಪಟ್ಟಿ ಮಾಡಿದ್ದಾರೆ ಇದನ್ನು ಸರಿಪಡಿಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮುರಳಿಬಾಬು ನೇತೃತ್ವದಲ್ಲಿ ತಾಲ್ಲೂಕು ದಂಡಾಧಿಕಾರಿ ಜಿ.ಎನ್. ಸುಧೀಂದ್ರ ರವರಿಗೆ ಮನವಿ ಪತ್ರ ಸಲ್ಲಿಸಿದರು.
ನೌಕರರ ಸಂಘದ ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮುರಳಿ ಬಾಬು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು ಪ್ರಸ್ತುತ ಇರುವ ನೌಕರ ಸಂಘದ ಅಧ್ಯಕ್ಷರಾದ ಎಸ್.ವಿ. ಜನಾರ್ಧನ್ ಹಿಟ್ಲರ್ ವರ್ತನೆ ಇದ್ದು ಸಂಘದ ಬೈಲಾ ನಿಯಮದಂತೆ ಚುನಾವಣೆ ನಡೆಸುವ 22 ದಿನಗಳ ಮುಂಚಿತವಾಗಿ ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಬೇಕಾಗಿತ್ತು ಆದರೆ ತರಾತುರಿಯಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೌಕರ ಸಂಘದ ನಿರ್ದೇಶಕರ ಹೆಸರೆ ವ್ಯತ್ಯಾಸ
ಪ್ರಸ್ತುತ ಸರ್ಕಾರಿ ನೌಕರ ಸಂಘದ ನಿರ್ದೇಶಕರಾಗಿರುವ ಎಂ.ಭೈರೇಗೌಡ ಅವರು ಕಳೆದ 2 ಬಾರಿ ಪ್ರೌಢಶಾಲಾ ವಿಭಾಗದಲ್ಲಿ ಸ್ಪರ್ದಿಸಿ ಚುನಾಯಿತರಾಗಿದ್ದರು ಆದರೆ ಈಗ ಅವರನ್ನು ಪ್ರಾಥಮಿಕ ಶಾಲಾ ವಿಭಾಗದ ಪಟ್ಟಿಯಲ್ಲಿ ಸೇರಿಸಿರುವುದು ಖಂಡನೀಯ ಇದರ ಹಿಂದೆ ನೀಕಟ ಪೂರ್ವ ಅಧ್ಯಕ್ಷರ ಕೈವಾಡ ಇದೆ ಎಂದು ದೂರಿದರು.
ನಿವೃತ್ತರಾದವರ ಹೆಸರು ಕೈ ಬಿಟ್ಟಿಲ್ಲ
ಜೂನ್ 2024 ಕ್ಕೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ 4 ಜನ ನಿವೃತ್ತಿ ಆಗಿದ್ದಾರೆ ಅದರಲ್ಲಿ ಮತದಾರರ ಪಟ್ಟಿಯಲ್ಲಿ ಇಬ್ಬರ ಹೆಸರನ್ನು ಮಾತ್ರ ಕೈ ಬಿಟ್ಟು ತಮಗೆ ಬೇಕಾದವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಂಡಿದ್ದಾರೆ. ಇಂತಹ ಹಲವಾರು ಲೋಪಗಳು ಮತದಾರರ ಪಟ್ಟಿಯಲ್ಲಿದೆ ಇವೆಲ್ಲವನ್ನು ಸರಿಪಡಿಸದೆ ಹೋದರೆ ನೌಕರ ಸಂಘದ ಮುಂದೆ ನಿರಂತರ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ತಾಲೂಕು ಸಂಘಕ್ಕೆ ಉತ್ತಮ ಹೆಸರು ಇದೆ
ತಾಲೂಕು ನೌಕರ ಸಂಘದ ಸ್ಥಾಪನೆಗೆ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಅವರ ಶ್ರಮದ ಫಲ ಇಂದು ಉತ್ತಮ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಿದೆ ಸಂಘಕ್ಕೂ ಒಳ್ಳೆಯ ಹೆಸರು ಇದೆ ಅದರೆ ಕೆಲವರು ತಮ್ಮ ಸ್ವಾರ್ಥಕ್ಕೆ ಸಂಘವನ್ನು ದುರುಪಯೋಗ ಪಡಿಸಿಕೊಂಡು ಸಂಘದ ಬೈಲಾವನ್ನು ಬದಿಗೊತ್ತಿ ಸಂಘದ ಖಜಾಂಚಿ ಸ್ಥಾನಕ್ಕೆ ಚುನಾವಣೆ ನಡೆಸದೆ ತರಾತುರಿಯಲ್ಲಿ ಕದ್ದುಮಚ್ಚಿ ಖಜಾಂಚಿಯನ್ನು ನೇಮಕ ಮಾಡಿಕೊಂಡಿರುವ ಉದ್ದೇಶ ಏನು ಎಂದು ಶಿಕ್ಷಕ ಕಲಾ ಶಂಕರ್ ಪ್ರಶ್ನಿಸಿದರು.
ಬೈಲಾ ನಿಯಮಗಳನ್ನು ಗಾಳಿಗೆ ವಾರ್ಷಿಕ ಮಹಾ ಸಭೆಗಳನ್ನು ನಡೆಸದೆ ಆರ್ಥಿಕ ವಿಷಯಗಳನ್ನು ಸಭೆಗೆ ತಿಳಿಸದೆ ನಿರ್ದೇಶಕರುಗಳ ಸಹಿಗಳನ್ನು ಅವರ ಕಛೇರಿಗೆಳಿಗೆ ತೆರಳಿ ಸಹಿ ಪಡೆದು ಅನುಮೋದಿಸಿಕೊಂಡು ತಮ್ಮ ಇಷ್ಟದ ಪ್ರಕಾರ ಬಳಿಕೆ ಮಾಡಿಕೊಂಡು ತಾಲ್ಲೂಕಿನ ಸಮಸ್ತ ನೌಕರರನ್ನು ವಂಚಿಸಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದರು.
ಮತದಾರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಸುಗಮವಾಗಿ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಚುನಾವಣಾಧಿಕಾರಿ ಐಮಾರೆಡ್ಡಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗೌರಾಧ್ಯಕ್ಷರಾದ ನಂಜಾರೆಡ್ಡಿ, ಕಾರ್ಯದರ್ಶಿ ಆಶೋಕ್.ಎಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈಯಾರೆಡ್ಡಿ, ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಸಿ.ಎಂ. ವೆಂಕಟರವಣ, ಶಿಕ್ಷಕರಾದ ಹೆಚ್. ಅಂಜಪ್ಪ, ಆರ್. ಎಂ. ಮಂಜುನಾಥ್, ಚನ್ನಕೇಶ್, ಅಮರನಾಥ್, ಪೃಥ್ವಿರಾಜ್ ಜಿ.ಎಂ. ಕೃಷ್ಣಪ್ಪ, ಜಿ.ಸಿ. ಗೋಪಾಕೃಷ್ಣ ಸೇರಿದಂತೆ ಹಲವಾರು ಶಿಕ್ಷಕರು ಪಾಲ್ಗೋಂಡಿದ್ದರು.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Friday, April 4