ನ್ಯೂಜ್ ಡೆಸ್ಕ್:- ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಲಕಲೆಚೆರವು ವ್ಯಾಪ್ತಿಯ ಪೆದ್ದತಿಪ್ಪಸಮುದ್ರಂ ವಲಯದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಕರ್ನಾಟಕದ ಮದ್ಯದ 434 ಪ್ಯಾಕೆಟ್ಗಳನ್ನು ಚಿತ್ತೂರು ಎಸ್.ಇ.ಬಿ ಅಧಿಕಾರಿಗಳು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿ ನಾಲ್ಕು ಮೋಟರ್ ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಟಿಎಂ ವಲಯ ಸಂಪತಿ ಫೋರ್ಟ್ ಕ್ರಾಸ್ನಲ್ಲಿ ಎಸ್ಇಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಪಾಸಣೆ ನಡೆಸಿದಾಗ್ ಅನಂತಪುರ ಜಿಲ್ಲೆಯ ತನಕಲ್ಲು ವಲಯದ ನಂದಗಣಿಪಲ್ಲಿಗೆ ದ್ವಿಚಕ್ರ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದ ಹುಸೇನ್ ಬಾಷಾ, ಕರ್ನಾಟಕದ ಭಜಂತ್ರಿ ಸಿದ್ಧಿಯಾ ಅವರನ್ನು ಬಂಧಿಸಿ 192 ಕರ್ನಾಟಕ ಮದ್ಯ ಪ್ಯಾಕೆಟ್ಗಳು ಸೇರಿದಂತೆ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 96 ಪ್ಯಾಕೆಟ್ ಮದ್ಯವನ್ನು ಬಿ. ಕೊಟ್ಟಕೋಟಕ್ಕೆ ಸಾಗಿಸುತ್ತಿದ್ದ ಶಂಕರ್ನನ್ನು ಬಂಧಿಸಲಾಗಿ, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ಮುಲಕಲಾ ಚೆರುವು ಪಂಚಾಯತ್ ಬುರುಜುಪಲ್ಲೆಗೆ ಮದ್ಯದ ಪ್ಯಾಕೆಟ್ಗಳನ್ನು ಸಾಗಿಸುತ್ತಿದ್ದ ರೆಡ್ಡೇಪ್ಪನನ್ನು ಬಂಧಿಸಲಾಗಿದ್ದು, 48 ಕರ್ನಾಟಕ ಮದ್ಯದ ಪ್ಯಾಕೆಟ್ಗಳು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳನ್ನು ನೋಡಿದ ವ್ಯಕ್ತಿಯೊಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. 96 ಮದ್ಯದ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಸ್ತುವಾರಿ ಸಿಐ ವೆಂಕಟಲಕ್ಷ್ಮಮ್ಮ, ಎಸ್ಐ ನಾರಾಯಣಸ್ವಾಮಿ ಮತ್ತು ಇತರರು ಈ ದಾಳಿಯಲ್ಲಿ ಭಾಗವಹಿಸಿದ್ದರು.
ಚಿತ್ತೂರು:- ನಾಲ್ಕು ಲಕ್ಷ ಮೌಲ್ಯದ ಕರ್ನಾಟಕ ಮದ್ಯವನ್ನು ಚಿತ್ತೂರು ಪೊಲೀಸರು ವಶಪಡಿಸಿಕೊಂಡು ಮಾಲು ಸಾಗಿಸುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ,ಮೂವರನ್ನು ಬಂಧಿಸಲಾಗಿದೆ ಮತ್ತು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಡಿಎಸ್ಪಿ ಸುಧಾಕರ್ ರೆಡ್ಡಿ ಸುದ್ದಿಘೋಷ್ಠಿ ನಡೆಸಿ ತಿಳಿಸಿದರು. ಚಿತ್ತೂರು ನಗರದ ಎರಡನೇ ಪಟ್ಟಣ ಪೊಲೀಸರಿಗೆ ದೊರೆತ ಮಾಹಿತಿಯ ಪ್ರಕಾರ ಗುರುವಾರ ಬೆಳಿಗ್ಗೆ 11.30 ಕ್ಕೆ ತಿರುಪತಿ-ಬೆಂಗಳೂರು ಮುಖ್ಯ ರಸ್ತೆಯ ಸೀತಂ ಕಾಲೇಜು ಬಳಿ ವಾಹನಗಳ ನಾಕ ಬಂದಿ ಮಾಡುತ್ತಿರುವಾಗ ಬೆಂಗಳೂರಿನಿಂದ ತಿರುಪತಿ ಕಡೆಗೆ ಹೋಗುತ್ತಿದ್ದ ಕಾರೊಂದನ್ನು ನಿಲ್ಲಿಸಿರುತ್ತಾರೆ ಕಾರಿನಲ್ಲಿದ್ದ ಐವರು ಪೋಲಿಸರನ್ನು ಕಂಡು ಗಾಭರಿಯಿಂದ ಮೂವರು ಪರಾರಿಯಾಗಿರುತ್ತಾರೆ ಇದರಿಂದ ಅನುಮಾನಿತರಾದ ಪೋಲಿಸರು ಕಾರು ಪರಶೀಲನೆ ಮಾಡಿದಾಗ ಕಾರಿನಲ್ಲಿ ಸುಮಾರು 4 ಲಕ್ಷ ರೂ.ಗಳ 1,680 ಪ್ಯಾಕೆಟ್ ಕರ್ನಾಟಕ ಮದ್ಯ ಟೆಟ್ರಾ ಪ್ಯಾಕೆಟ್ ಗಳು ಪತ್ತೆಯಾಗಿದೆ, ಕಾರಿನೊಂದಿಗೆ ಅದರಲ್ಲಿದ್ದ ಇಬ್ಬರನ್ನು ಬಂಧಿಸಿದ್ದಾರೆ.