ಶ್ರೀನಿವಾಸಪುರ:ಸಾರ್ವಜನಿಕ ಶಿಕ್ಷಣ ಇಲಾಖೆ 2012-13 ಹಾಗೂ 2014-15 ನೇ ಸಾಲಿನಲ್ಲಿ ನಡೆದ ಸಹ ಶಿಕ್ಷಕರ ನೇಮಕಾತಿಯಲ್ಲಿ ವಾಮಮಾರ್ಗದಲ್ಲಿ ಹುದ್ದೆ ಪಡೆದಿದ್ದ ಶಿಕ್ಷಕರ ನೇಮಕಾತಿಯ ಅಕ್ರಮ ಪ್ರಕರಣದ ಬೆನ್ನು ಹತ್ತಿರುವ ಸಿಐಡಿ ಅಧಿಕಾರಿಗಳು ಕೋಲಾರ ಜಿಲ್ಲೆಯಲ್ಲೂ ಕಾರ್ಯಚರಣೆ ನಡೆಸಿ ಜಿಲ್ಲಾಲ್ಲಾಧ್ಯಂತ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮವಾಗಿ ನೇಮಕಾತಿ ಆಗಿರುವ 24 ಫೇಕ್ ಸಹ ಶಿಕ್ಷಕರನ್ನು ಬಂಧಿಸಿದ್ದಾರೆ.
ಬಂದಿತ 24 ಸಹ ಶಿಕ್ಷಕರಲ್ಲಿ ಕೆ.ಜಿ.ಎಫ್. ಮತ್ತು ಬಂಗಾರಪೇಟೆಯಲ್ಲಿ 12, ಮುಳಬಾಗಿಲಿನಲ್ಲಿ 6 ಮಾಲೂರಿನಲ್ಲಿ 2 ಮತ್ತು ಶ್ರೀನಿವಾಸಪುರ ತಾಲೂಕಿನಲ್ಲಿ 6 ಮಂದಿ ಶಿಕ್ಷಕರಿದ್ದು ಇವರೆನೆಲ್ಲ ಏಕಕಾಲಕ್ಕೆ ಬಂಧಿಸಿದ್ದಾರೆ .
ಶ್ರೀನಿವಾಸಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫೇಕ್ ಶಿಕ್ಷಕರು ಇವರೆ! ಶ್ರೀನಿವಾಸಪುರ ತಾಲೂಕಿನ 6 ಶಿಕ್ಷಕರ ವಿವರ ಹೀಗಿದೆ ಕಲ್ಲೂರಿನ ಆದರ್ಶ ಶಾಲೆಯ ಕನ್ನಡ ಶಿಕ್ಷಕ ಬಸವರಾಜ್ ಬಿರಾದಾರ ಹಾಗು ಹಿಂದಿ ಶಿಕ್ಷಕಿ ಎ.ರೂಪ, ಪುಲಗೂರುಕೋಟೆಯ ಸರ್ಕಾರಿ ಹೈಸ್ಕೂಲಿನ ಇಂಗ್ಲಿಷ್ ಶಿಕ್ಷಕ ಪ್ರಭುಬಿರಾದಾರ,ರಾಯಲ್ ಪಾಡು ಸರ್ಕಾರಿ ಹೈಸ್ಕೂಲಿನ ದೈಹಿಕ ಶಿಕ್ಷಕ ವಿರೇಶ್ ಕೋಮನೂರು,ಬೈರಗಾನಹಳ್ಳಿ ಸರ್ಕಾರಿ ಹೈಸ್ಕೂಲಿನ ಕನ್ನಡ ಶಿಕ್ಷಕ ಚಂದ್ರಶೇಖರ್ ಬೆಳ್ಳಿ, ಕೂರಿಗೆಪಲ್ಲಿ ಪ್ರೌಡಶಾಲೆಯ ಆಂಗ್ಲಾಭಾಷೆ ಶಿಕ್ಷಕ ರಾಮನಗೌಡಗುರೆಡ್ಡಿ ಶಿಕ್ಷಕರು ಶಾಲಾ ಶಿಕ್ಷಕರು ಅಕ್ರಮ ನೇಮಕಾತಿ ಅಡಿಯಲ್ಲಿ ಸಿಒಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
24 ಸಹ ಶಿಕ್ಷಕರ ಪೈಕಿ ಕೋಲಾರ ತಾಲೂಕಿನ ನಾಯಕರಹಳ್ಳಿಯಲ್ಲಿ ಶಿಕ್ಷಕರಾಗಿದ್ದ ಸಿದ್ರಾಮಾಪ್ಪ ಬಿರದಾರ್ ಬಿಜಾಪುರಕ್ಕೆ ವರ್ಗಾವಣೆಯಾಗಿದ್ದು ಒಂದು ತಿಂಗಳ ಹಿಂದೆ ಅಲ್ಲಿಯೇ ಅವರನ್ನು ಬಂಧಿಸಿರುತ್ತಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಿಒಡಿ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಇಬ್ಬರು ಶಿಕ್ಷಕರನ್ನು ಬಂಧಿಸಿದ್ದಾರೆ ಕುಂದಲಗುರ್ಕಿಯ ಸರ್ಕಾರಿ ಹೈಸ್ಕೂಲಿನ ದೈಹಿಕ ಶಿಕ್ಷಕ ವಿಶ್ವನಾಥ್ ದುಳಿಕರ್ ಮತ್ತು ಚಿಂತಾಮಣಿ ತಾಲೂಕಿನ ಮುರಗಮಲ್ಲ ಸರ್ಕಾರಿ ಹೈಸ್ಕೂಲಿನ ಸಮಾಜ ವಿಙ್ಞಾನದ ಶಿಕ್ಷಕ ಬಸಪ್ಪ ಹುನಿಸಿಮರ ಇನ್ನಿಬ್ಬರು ವಿವಿಧ ಕಾರಣಗಳಿಂದ ಶಾಲೆಗೆ ರಜಾ ಹಾಕಿದ್ದ ಹಿನ್ನಲೆಯಲ್ಲಿ ಸಿಕ್ಕಿಲ್ಲವಂತೆ.
ಕಾಂಗ್ರೆಸ್ ಅಧಿಕಾರವಧಿಯ ಸಿದ್ದರಾಮಯ್ಯ ಕಾಲದ ಅಕ್ರಮವಂತೆ!
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದ್ದು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿ ನೇಮಕವಾಗಿದ್ದವರನ್ನು ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 30 ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದು ಸಿಐಡಿ ಎಸ್ಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ಕೆಜಿಎಫ್, ತುಮಕೂರು, ಚಿತ್ರದುರ್ಗ, ಚಳ್ಳಕೆರೆಯಲ್ಲಿ 100ಕ್ಕೂ ಹೆಚ್ಚು ಸಿಐಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿರುತ್ತಾರೆ.ಕಾರ್ಯಚರಣೆಯಲ್ಲಿ 18ಡಿ.ವೈ.ಎಸ್.ಪಿ ಹಾಗು 14ಪೋಲಿಸ್ ಇನ್ಸೆಪೇಕ್ಟರ್ ಗಳು ಭಾಗವಹಿಸಿದ್ದರು ಎನ್ನಲಾಗಿದೆ.
ಪ್ರಥಮ ದರ್ಜೆ ಸಹಾಯಕ ಪ್ರಸಾದ್ ಹೇಳಿಕೆಯಂತೆ ಕಾರ್ಯಚರಣೆ !
ಅಕ್ರಮ ಶಿಕ್ಷಕರ ನೇಮಕಾತಿಯ ಪ್ರಕರಣದಲ್ಲಿ ಈಗಾಗಲೆ ಬಂದಿತನಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಸಾದ್ ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆ ಅಧಾರದಂತೆ ಕಾರ್ಯಚರಣೆ ನಡೆದಿರುವುದಾಗಿ ಹೇಳಲಾಗಿದೆ.