ನ್ಯೂಜ್ ಡೆಸ್ಕ್:ಕ್ಷಮಿಸಿ ಅಪ್ಪ ಅಮ್ಮನನ್ನು ಕೊಂದು ಬಿಟ್ಟೆ ! ಅಪ್ಪನೊಂದಿಗೆ ಒರ್ವ ಮಗ ಹೀಗೆಂದು ಹೇಳಿದಾಗ ಯಾವ ತಂದೆ ಏನು ಮಾಡಲು ಸಾಧ್ಯ ವಿದೇಶಕ್ಕೆ ಹೋಗುವುನಿದ್ದ ಮಗನಿಗೆ ಬುದ್ಧಿ ಹೇಳಿದ ತಾಯಿಗೆ ಚಾಕು ಹಾಕಿದ ದುರುಳನ ಕಥೆಯಿದು.
ದೆಹಲಿಯ ಆಗ್ನೇಯ ಭಾಗಾದ ಬದರ್ಪುರದಲ್ಲಿ 50 ವರ್ಷದ ಮಹಿಳೆಯನ್ನು ಆಕೆಯ ಮಗ ಚಾಕುವಿನಿಂದ ಇರಿದು ಕೊಂದಿದ್ದಾನೆ ಈ ದುಷ್ಕೃತ್ಯ ಆತಂಕಕಾರಿಯಾಗಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಅಕೆಯ ಗಂಡ ಆಸ್ಪತ್ರೆ ಸೇರಿಸಿದರು ಆಕೆ ಉಳಿಯಲಿಲ್ಲ.
ಆಸ್ಪತ್ರೆ ಸಿಬ್ಬಂದಿ ಪರಿಸ್ಥಿತಿಯನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಲ್ಲಿಗೆ ಬಂದ ಪೊಲೀಸ್ ತಂಡ ಪ್ರಾಥಮಿಕ ಮಾಹಿತಿ ಪಡೆದು ಘಟನೆ ನಡೆದ ಜೈತ್ ಪುರಕ್ಕೆ ತೆರಳಿದ್ದಾರೆ ಅಲ್ಲಿ ಪರಿಸ್ಥಿತಿ ನೋಡಿದ ಪೊಲೀಸರಿಗೆ ಅಚ್ಚರಿಯ ವಿಷಯಗಳು ಬೆಳಕಿಗೆ ಬಂದಿವೆ. 31 ವರ್ಷದ ಕೃಷ್ಣಕಾಂತ್ ತನ್ನ ತಾಯಿಯನ್ನು ಚಾಕುವಿನಿಂದ ಹಲವಾರು ಬಾರಿ ಇರಿದು ಕೊಂದಿದ್ದಾನೆ ನಂತರ ತಂದೆ ಸುರ್ಜಿತ್ ಗೆ ಫೋನ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ, ತಂದೆ ಬಂದಾಗ ಕೃಷ್ಣಕಾಂತ್ ಕ್ಷಮಿಸಿ ಅಪ್ಪಾ ಎಂದು ಬೇಡಿಕೊಂಡಿದ್ದಾನೆ ನಂತರ ಮೊದಲ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ ತಂದೆ ಮನೆಯೊಳಗೆ ಹೋದಾಗ ಹೊರಗಡೆಯಿಂದ ಬೀಗ ಹಾಕಿಕೊಂಡು ಓಡಿ ಹೋಗಿದ್ದಾನೆ.ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ಗೀತಾಳನ್ನು ನೋಡಿ ಸುರ್ಜೀತ್ ಆಘಾತಗೊಂಡಿದ್ದಾರೆ. ಅಕ್ಕಪಕ್ಕದ ಮನೆಯವರ ಸಹಾಯದಿಂದ ಬಾಗಿಲು ತೆರೆದು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಗಲೇ ಅಕೆಯ ಪ್ರಾಣ ಪಕ್ಷಿ ಹೋಗಿದೆ. ಸುರ್ಜಿತ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಕಿರಿಯ ಮಗ ಬ್ಯಾಂಕ್ ಉದ್ಯೋಗಿಯಾಗಿದ್ದು ಆರೋಪಿ ಕೃಷ್ಣಕಾಂತ್ ನಿರುದ್ಯೋಗಿಯಾಗಿ ಮತ್ತು ಮಾದಕ ವ್ಯಸನಿಯಾಗಿದ್ದಾನೆ ಕೆನಡಾಕ್ಕೆ ಹೋಗಿ ಅಲ್ಲಿ ಕೆಲಸ ಮಾಡುವುದು ಅವನ ಗುರಿಯಾಗಿತ್ತು ಇದಕ್ಕೆ ಅವನ ತಾಯಿ ಗೀತಾ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮೊದಲು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು ಕೊಲೆಯಾದ ದಿನ,ಕೃಷ್ಣಕಾಂತ್ ಮತ್ತು ಅವನ ತಾಯಿ ನಡುವೆ ಮತ್ತೆ ಜಗಳ ಉಂಟಾಗಿದೆ ತಾಯಿ ತನ್ನ ಕೆನಡಾ ಪ್ರವಾಸಕ್ಕೆ ಅಡ್ಡಗಾಲು ಹಾಕುತ್ತಿದ್ದಾಳೆ ಎಂದು ಕೆಲವು ದಿನಗಳ ಹಿಂದೆ ಖರೀದಿಸಿದ್ದ ಚಾಕುವಿನಿಂದ ಅಕೆಯನ್ನು ಇರಿದಿದ್ದಾನೆ, ಇದನ್ನು ಪೋಲಿಸರ ವಿಚಾರಣೆಯಲ್ಲಿ ಆರೋಪಿ ಬಾಯಿಬಿಟ್ಟಿದ್ದಾನೆ.
Breaking News
- ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
- ಪ್ರೇಮಕ್ಕೆ ಅಡ್ದಿ ಪ್ರಿಯತಮೆ ತಂದೆ ಮೇಲೆ ಗುಂಡು ಹಾರಿಸಿದ ಪಾಗಲ್ ಪ್ರೇಮಿ!
- ಅತ್ಯಂತ ದುಬಾರಿ ಕಂಪನಿಯ CEO ವಾಚ್ ಧರಿಸುವುದಿಲ್ಲವಂತೆ!
- ಕೋಲಾರ ಜಿಲ್ಲೆ ಸೇರಿದಂತೆ ವಿವಿಧಡೆ ಮುಂದಿನ ಮುರ್ನಾಲ್ಕು ದಿನ ಮಳೆ!
- ಚಿಂತಾಮಣಿ ತಿಮ್ಮಸಂದ್ರದ ಮೊರಿಯಲ್ಲಿ ಅಪರಿಚಿತ ಶವ ಪತ್ತೆ!
- ಕನ್ನಡ ಜೀವನದ ಭಾಷೆಯಾಗಬೇಕು ಚಿಂತಾಮಣಿ ಕಸಾಪ ಅಧ್ಯಕ್ಷ ಶ್ರೀನಿವಾಸ್
- ಕ್ಷಮಿಸಿ ಅಪ್ಪ,ಅಮ್ಮನನ್ನು ಕೊಂದು ಬಿಟ್ಟೆ ದುರುಳ ಮಗನ ಮಾತು!
- ಅಂಗನವಾಡಿ ಸಿಬ್ಬಂದಿಯನ್ನು ಖಾಯಂ ನೌಕರರಂತೆ ಪರಿಗಣಿಸಿ ಹೈಕೋರ್ಟ್ ನಿರ್ದೇಶನ.
- ಶ್ರೀನಿವಾಸಪುರದ VIP ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ
- ಕಾಂಗ್ರೆಸ್ ಮುಖ್ಯಮಂತ್ರಿಗೆ BIRTHDAY ಶುಭ ಕೋರಿರುವ ಪ್ರಧಾನಿ ಮೋದಿ
Tuesday, November 12