ನ್ಯೂಜ್ ಡೆಸ್ಕ್:ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಪ್ರತಿ 30 ಸೆಕೆಂಡಿಗೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳಿತ್ತಿವೆ ಕಣ್ಣಿಗೆ ಕಾಣದ ಅಗೋಚರ ರೂಪದಲ್ಲಿ ಪ್ಲಾಸ್ಟಿಕ್ ಮನುಷ್ಯರ ದೇಹವನ್ನು ಪ್ರವೇಶಿಸುತ್ತಿದ್ದು ಇದನ್ನು ತಡೆಯಲು ವಿಫಲವಾಗುತ್ತಿದ್ದೇವೆ, ಒಮ್ಮೆ ಬಳಸಿ ಬಿಸಾಡಬಹುದಾದ ರೇಜರ್ಗಳು ಈಗ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿವೆ. ಪದೇ ಪದೇ ತೊಳೆದು ಉಪಯೋಗಿಸಲು ಸಮಯವಿಲ್ಲದವರು ಇಂತಹ ರೇಜರ್ ಗಳನ್ನು ಖರೀದಿಸುತ್ತಿದ್ದಾರೆ. ವಾಸ್ತವವಾಗಿ, ಈ ವಸ್ತುಗಳ ತಯಾರಿಕೆ ಮತ್ತು ಪ್ಯಾಕಿಂಗ್ ಗಾಗಿ ಹೆಚ್ಚು ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಪ್ಲ್ಯಾಸ್ಟಿಕ್ ಹೊದಿಕೆ ಮತ್ತು ಪ್ಲಾಸ್ಟಿಕ್ ಕೇಸ್ ಅನ್ನು ಹೆಚ್ಚುವರಿಯಾಗಿ ರೇಜರ್ ಪ್ಯಾಕಿಂಗ್ ಸಂದರ್ಭದಲ್ಲಿ ಬಳಸಲಾಗುತ್ತದೆ. ರೇಜರ್ ಸಂಪೂರ್ಣವಾಗಿ ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟಿದೆ. ಬದಲಿಗೆ ಲೋಹದಿಂದ ಮಾಡಲ್ಪಟ್ಟ ರೇಜರ್ ಬಳಸಿದರೆ ಅದಕ್ಕೆ ಬ್ಲೇಡ್ ಅನ್ನು ಮಾತ್ರ ಬದಲಾಯಿಸಬಹುದಾಗಿರುತ್ತದೆ ಲೋಹದ ರೇಜರ್ ಪ್ಲಾಸ್ಟಿಕ್ ಬಳಸಿ ಬಿಸಾಡಬಹುದಾದ ರೇಜರ್ಗಿಂತ ತುಸು ದುಬಾರಿ ಅನಿಸಬಹುದು ಆದರೆ ಒಮ್ಮೆ ಖರೀದಿಸಿದ ನಂತರ ಬ್ಲೇಡ್ಗಳು ಕಡಿಮೆ ವೆಚ್ಚಕ್ಕೆ ಸಿಗುತ್ತದೆ.
ಅಡುಗೆ ಮಾಡಲು ಸಮಯವಿಲ್ಲದ ಸೋಮಾರಿ ಜನರು ರೆಡಿಮೇಡ್ ಆಹಾರವನ್ನು ಆಶ್ರಯಿಸುತ್ತಾರೆ. ರೆಡಿಮೇಡ್ ಆಹಾರ ಪ್ಲಾಸ್ಟಿಕ್ ಪಾತ್ರೆ ಹಾಗು ಕವರುಗಳಲ್ಲಿ ಬರುತ್ತದೆ. ಅವುಗಳ ಮೇಲೆ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಫಿಲ್ಮ್ ಇರುತ್ತದೆ ಒಂದು ಹೊತ್ತಿನ ಊಟಕ್ಕೆ ಇಷ್ಟೊಂದು ಪ್ಲಾಸ್ಟಿಕ್ ಬಳಕೆ ಮಾಡುವುದು ಅನಗತ್ಯ ಎಂದು ಯಾರಿಗೂ ಅನಿಸುವುದಿಲ್ಲ ಹಾಗಾಗಿ ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಹುದಾದ ಆಹಾರ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನಮ್ಮ ಆರೋಗ್ಯ ಪರಿಸರ ರಕ್ಷಣೆಯ ಹೊಣೆ ನಾವು ಹೊತ್ತರೆ ಪ್ಲಾಸ್ಯಿಕ್ ಉತ್ಪಾದನೆಯಲ್ಲಿ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಸೆಲ್ಫ್ ಆಡ್ ಶೈವ್ ಪ್ಲಾಸ್ಟಿಕ್ ಟೇಪ್ ಬದಲಿಗೆ ತೆಂಗಿನ ನಾರನ್ನು ಸಹ ಬಳಸಬಹುದು. ಕಾಯಿರ್ ಪುಷ್ಪಗುಚ್ಛವು ಸುಂದರ ಮತ್ತು ಆಧುನಿಕವಾಗಿರುತ್ತದೆ. ಬಣ್ಣದ ಉಣ್ಣೆ ದಾರ, ರೇಷ್ಮೆ ರಿಬ್ಬನ್ಗಳು ಸಹ ಬಳಸಬಹುದಾಗಿದೆ, ಒಡೆಯಬಹುದಾದ ಗಾಜಿನ ಸಾಮಾನುಗಳನ್ನು ಪ್ಯಾಕಿಂಗ್ ಮಾಡಲು ನಾವು ಥರ್ಮಾಕೋಲ್ ಅಥವಾ ಪಾಲಿಸ್ಟೈರೀನ್ ಬಳಸುತ್ತೇವೆ. ಆದರೆ ಇವು ಪ್ಲಾಸ್ಟಿಕ್ ಆಧಾರಿತ ವಸ್ತುಗಳಾಗಿದ್ದು, ಮರುಬಳಕೆ ಮಾಡಲಾಗುವುದಿಲ್ಲ. ಆದ್ದರಿಂದ ನೀವು ಪಾಪ್ ಕಾರ್ನ್ ಬಳಸಬಹುದು. ಅಥವಾ ಕಾಗದದ್ದ ತುಂಡುಗಳನ್ನು ಇಟ್ಟು ಪ್ಯಾಕ್ ಮಾಡಬಹುದು. ಐಸ್ ಕ್ರೀಮ್ ತಿನ್ನಲು ಬಯಸುವುದಾದರೆ ಕೋನ್ ಐಸ್ ಕ್ರೀಮ್ ಅನ್ನು ಮೊದಲ ಆಯ್ಕೆ ಮಾಡಿ ಇದರಿಂದ ಪರಿಸರಕ್ಕೆ ಹಾನಿ ಆಗುವ ಪ್ಲಾಸ್ಟಿಕ್ ಕಪ್ ಪ್ಲಾಸ್ಟಿಕ್ ಚಮಚ ಬಳಕೆ ಕಡಿಮೆಯಾಗುತ್ತದೆ.
ಸ್ನಾನಗೃಹ ಶೌಚಾಲಯ ಸ್ವಚ್ಛಗೊಳಿಸಲು ಟಾಯ್ಲೆಟ್ ಕ್ಲೀನರ್ಗಳನ್ನು ಅವಲಂಬಿಸಿದ್ದೇವೆ. ಇವೆಲ್ಲವೂ ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ಬರುತ್ತವೆ. ಅವು ಸ್ವಲ್ಪ ದುಬಾರಿಯೂ ಹೌದು. ನೀವು ಪ್ಲಾಸ್ಟಿಕ್ ತ್ಯಾಜ್ಯದ ಜೊತೆಗೆ ವೆಚ್ಚವನ್ನು ಕಡಿಮೆ ಮಾಡಲು ಬಯಸಿದರೆ, ನೀರಿನಲ್ಲಿ ಕೆಲವು ಚಮಚ ವಿನೆಗರ್ ಅನ್ನು ಬೆರೆಸಿ, ಅದನ್ನು ಎರಡು ನಿಮಿಷಗಳ ಕಾಲ ಬಿಡಿ ಮತ್ತು ನಂತರ ಆ ನೀರಿನಿಂದ ತೊಳೆಯಿರಿ. ಟಾಯ್ಲೆಟ್ ಕ್ಲೀನರ್ಗಿಂತ ಉತ್ತಮ ಫಲಿತಾಂಶ ನೀಡುತ್ತದೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬಹುದಾಗಿದೆ.