ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಾನೆ ಬಿಜೆಪಿ ಅಭ್ಯರ್ಥಿಯಾಗಿದ್ದು ಜನತೆ ಬಿಜೆಪಿಗೆ ಮತ ಹಾಕಿ ಗೆಲ್ಲಿಸುವಂತೆ ವಿಧಾನಪರಿಷತ್ ಮುಖ್ಯಸಚೇತಕ ವೈ ಎ ನಾರಾಯಣಸ್ವಾಮಿ ಹೇಳಿದರು ಅವರು ಇಂದು ತಮ್ಮ ಸ್ವಗ್ರಾಮವಾದ ಹೆಚ್ಚನಹಳ್ಳಿ ಹಾಗು ದೊಡ್ಡಪಲ್ಲಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸ್ ರೆಡ್ಡಿ ಪರ ಮತ ಯಾಚನೆ ಮಾಡಿ ಮಾತನಾಡಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಕ್ಕೂ ತೆರಳಿ ಮತಯಾಚನೆ ಮಾಡುತ್ತಿದ್ದು ಇಂದು ಯಚ್ಚನಹಳ್ಳಿ ಗ್ರಾಮದಲ್ಲಿ ಈ ಭಾಗದ ಗ್ರಾಮಗಳ ಜನರ ಸಭೆ ನಡೆಸಿ ಮತ ಕೇಳುತ್ತಿದ್ದೇವೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಬಡವರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಬಿಜೆಪಿ ರೈತರ ಪರ ನಿಲವು ಹೊಂದಿದೆ ಎಂದರು.
ಜನಧನ್ ಯೋಜನೆಯಿಂದಾಗಿ ದೊಡ್ದ ಮಟ್ಟದಲ್ಲಿ ಜನಸಾಮನ್ಯರಿಗೆ ಅನಕೂಲ ಆಗಿದೆ ಅದೆ ರೀತಿ ಕಿಸಾನ್ ಸನ್ಮಾನ ಯೋಜನೆ ಜಾರಿಗೆ ತಂದಿದ್ದು ಇದರಿಂದ ಸಾಮನ್ಯ ರೈತರು ಅನಕೂಲ ಪಡೆದಿರುತ್ತಾರೆ ಆಯಿಷ್ಮಾನ್ ಭಾರತ್ ಯೊಜನೆ ಪರಿಣಾಮ ಸಾಮನ್ಯ ಜನರು ಉತ್ತಮ ವೈದ್ಯಕೀಯ ಪಡೆಯಲು ಸಹಕಾರಿಯಾಗಿದೆ,ಕೊರೋನಾ ಸಮಯದಲ್ಲಿ ಉಚಿತ ಅಕ್ಕಿ ವಿತರಣೆ ಮಾಡುವ ಮೂಲಕ ಮೋದಿ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ನೀಡಿ ಜನರ ವಿಶ್ವಾಸವನ್ನು ಬಿಜೆಪಿ ಗಳಿಸಿದೆ ಎಂದರು.
ಅಭ್ಯರ್ಥಿ ಗುಂಜೂರು ಶ್ರೀನಿವಾಸ್ ರೆಡ್ಡಿ ಮಾತನಾಡಿ ಶ್ರೀನಿವಾಸಪುರವನ್ನು ಮಾದರಿ ತಾಲೂಕನ್ನಾಗಿಸಲು ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಅಶೋಕರೆಡ್ದಿ,ನಿಲಟೂರುಚಂದ್ರಾರೆಡ್ಡಿ,ಕೊಡಿಪಲ್ಲಿಶ್ರೀರಾಮರೆಡ್ದಿ, ನಾರಯಣಸ್ವಾಮಿ,ರಮೇಶರೆಡ್ದಿ, ವೆಂಕಟೇಗೌಡ, ಗುತ್ತಿಗೇದಾರ ಮಂಜು,ರಮೇಶ್ ಇತರರು ಇದ್ದರು.

