ಶ್ರೀನಿವಾಸಪುರ:ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ತಾನು ಹುಟ್ಟಿದ ಊರು ತಾನು ಕಲಿತ ಶಾಲೆ ಇವುಗಳನ್ನು ಮರೆಯುವಂತಾಗಬಾರದು ಇದನ್ನು ನಿವೃತ್ತ ಇಂಜನಿಯರ್ ಬೀಸೇಗೌಡ ತನ್ನೂರು ಚಿರುವನಹಳ್ಳಿಯ ಅಭಿವೃದ್ಧಿಗೆ ಸದಾ ಚಿಂತಿಸುತ್ತ ಗ್ರಾಮದ ಅಭಿವೃದ್ಧಿಯನ್ನು ತಪ್ಪದೆ ಮಾಡುತ್ತ ಬಂದಿದ್ದಾರೆ ಎಂದು ಶಾಸಕ ವೆಂಕಟಶಿವಾರೆಡ್ದಿ ಹೇಳಿದರು ಅವರು ತಾಲೂಕಿನ ಕಸಬಾ ಹೋಬಳಿ ಚಿರುವನಹಳ್ಳಿಯ ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಅಭಿಯಂತರ ಬಿಸೇಗೌಡ ಅವರು ತಮ್ಮ ತಂದೆ-ತಾಯಿ ಮುನಿಲಕ್ಷ್ಮಮ್ಮ ಹಾಗೂ ಶ್ರೀ ತಾಚೇಗೌಡ ನೆನಪಿಗೆ ಗ್ರಾಮದ ಸರ್ಕಾರಿ ಶಾಲೆಗೆ ಎರಡು ಕೊಠಡಿಗಳನ್ನು ನಿರ್ಮಿಸಿದ್ದು ಅದರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದೆ,ಅವರು ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಪಡೆದು ಗ್ರಾಮದ ಬಗ್ಗೆ ಕಾಳಜಿವಹಿಸಿ ಸರ್ಕಾರಿ ಶಾಲೆಗೆ ಬೇಕಾದ ಕೊಠಡಿ,ವಿದ್ಯಾರ್ಥಿಗಳಿಗೆ ಡೆಸ್ಕ್,ಕಂಪ್ಯೂಟರ್ ಗಳನ್ನು ಸಹ ಕೊಡುಗೆಯಾಗಿ ನೀಡಿದ್ದಾರೆ ಸರ್ಕಾರಿ ಶಾಲೆಗಳ ಬಗ್ಗೆ ಇವರಿಗೆ ಇರುವ ಕಾಳಜಿ ಗ್ರಾಮೀಣ ಭಾಗದಿಂದ ಬಂದು ಉನ್ನತ ಪದವಿಗಳಲ್ಲಿ ಇರುವ ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಕೊಠಡಿಗಳ ದಾನಿ ಅಭಿಯಂತರ ಬಿಸೇಗೌಡ ಮಾತನಾಡಿ ನಾನು ಓದಿದ ಶಾಲೆಯ ವಿಧಾರ್ಥಿಗಳು ಸಹ ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನ ಪದವಿ ಪಡೆದು ದೇಶಕ್ಕೆ ಮಾದರಿಯಾಗಬೇಕು ಎಂಬ ಸದುದ್ದೇಶ ಬಾವನೆಯೊಂದಿಗೆ ಕೊಠಡಿಗಳು ನಿರ್ಮಾಣ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿದ್ದ ಕೋಲಾರ ಜಿಲ್ಲಾ ಎಸ್ ಪಿ ನಾರಾಯಣ್,ಅಡಿಷನಲ್ ಎಸ್ ಪಿ ರವಿಶಂಕರ್ ಮಾಡಲಿಯೆಂದು ಶುಭಕೋರಿದರು.
ಶ್ರೀನಿವಾಸಪುರ ತಹಶೀಲ್ದಾರ್ ಸುಧೀಂದ್ರ,ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಪೋಲಿಸ್ ಇನ್ಸಪೇಕ್ಟರ್ ಗೋರವನಕೊಳ್ಳ,ಶಿಕ್ಷಕ ಶಿವಮೂರ್ತಿ,ನಂಬಿಹಳ್ಳಿ ರಮೇಶ್ ಮುಂತಾದವರು ಕಾರ್ಯಕ್ರಮದಲ್ಲಿದ್ದರು.
