ಶ್ರೀನಿವಾಸಪುರ:-ತಾಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮೊಗಿಲಹಳ್ಳಿ ಗ್ರಾಮದಲ್ಲಿ ಕೊರೋನಾ ಸೋಂಕು ಹರಡುತಿದ್ದು ಗ್ರಾಮದಲ್ಲಿ ಸುಮಾರು 16 ಜನ ಸೋಂಕಿಗೆ ಒಳಗಾಗಿದ್ದಾರೆ. ಇಂದು ಗ್ರಾಮದ ಒರ್ವ ವ್ಯಕ್ತಿ ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿಸ್ಥೆಗೆ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯಿದಿದ್ದ್ರು ಆತ ಇಂದು ಮುಂಜಾನೆ ಮೃತ ಪಟ್ಟ ಹಿನ್ನಲೆಯಲ್ಲಿ ಗ್ರಾಮದ ಜನರ ಆತಂಕ ಹೆಚ್ಚಾಗಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಗ್ರಾಮದಲ್ಲಿ, ಚಲ್ದಿಗಾನಹಳ್ಳಿ ಪಂಚಾಯಿತಿ ವತಿಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಗ್ರಾಮಕ್ಕೆ ಹೊರಗಿನಿಂದ ಯಾರು ಬರಬಾರದು ಎಂದು ಗ್ರಾಮವನ್ನು ಜನ ನೀಷೆದಿತ ಪ್ರದೇಶ(ಕಂಟೈನ್ಮೆಂಟ್) ಪ್ರದೇಶ ಎಂದು ಘೋಷಿಸಿರುವುದಾಗಿ ಪಂಚಾಯಿತಿ ಅಧಿಕಾರಿ ಶಂಕರಪ್ಪ ತಿಳಿಸಿರುತ್ತಾರೆ.
ಗ್ರಾಮದಲ್ಲಿ ವ್ಯಾಪಕವಾಗಿ ಸೋಂಕು ಹರಡುತ್ತಿಡರುವ ಹಿನ್ನಲೆಯಲ್ಲಿ ಗ್ರಾಮಕ್ಕೆ ನೋಡಲ್ ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಸೋಮಶೇಖರ್,ತಹಶೀಲ್ದಾರ್ ಶ್ರೀನಿವಾಸ್,ತಾಲೂಕು ಪಂಚಾಯಿತಿ ಇಒ ಆನಂದ್, ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿ ಪರಶೀಲನೆ ನಡೆಸಿರುತ್ತಾರೆ.
ನಂಬಿಹಳ್ಳಿ ಪ್ರಾಥಾಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಮೊಗಿಲಹಳ್ಳಿ ಗ್ರಾಮದಲ್ಲಿ ಸೋಂಕು ಹರಡಲು ಕಾರಣವಾಗಿದ್ದು ಗ್ರಾಮದ ಯುವಕನೊಬ್ಬ ಹಾಸನದಲ್ಲಿದ್ದು ಆತ ಇತ್ತಿಚಿಗೆ ಗ್ರಾಮಕ್ಕೆ ಬಂದು ಇಲ್ಲಿನ ಯುವಕರೊಂದಿಗೆ ಬೆರತು ಆಟೋಟಗಳಲ್ಲಿ ಸಮಾರಂಭಗಳಲ್ಲಿ ಭಾಗವಹಿಸಿದ ಹಿನ್ನಲೆಯಲ್ಲಿ ಸೋಂಕು ಹರಡಿದೆ ಎಂದು ಆರೋಗ್ಯ ಇಲಾಖೆಯವರು ಶಂಕೆ ವ್ಯಕ್ತಪಡಿಸಿರುತ್ತಾರೆ.ಸೋಂಕಿತರಲ್ಲಿ ಬಹುತೇಕರು ಆರೋಗ್ಯ ಇಲಾಖೆ ನೌಕರರ ಸಹಕಾರದಿಂದ ಮನೆಯಲ್ಲೆ ಹೋಂಕ್ವಾರಂಟೈನ್ ಅಗಿದ್ದು ಉಳಿದಂತೆ ಉಸಿರಾಟದ ತೊಂದರೆ ಇರುವಂತವರು ಶ್ರೀನಿವಾಸಪುರ ಮತ್ತು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯಿತ್ತಿದ್ದಾರಂತೆ
ಸಂಜೆ ವೈದ್ಯಾಧಿಕಾರಿಗಳು ಬಿಡುಗಡೆ ಮಾಡಿರುವ ಮಾಹಿತಿಯಂತೆ ತಾಲೂಕಿನಲ್ಲಿ ಸುಮಾರು 75 ಕೊರೋನಾ ಪಾಸಿಟಿವ್ ಕೇಸುಗಳು ದಾಖಲಾಗಿದೆ.