ಶ್ರೀನಿವಾಸಪುರದ: ಶ್ರೀನಿವಾಸಪುರದ ನೆಲದ ಸ್ವಾತಂತ್ಯ ಹೋರಾಟ ಇತಿಹಾಸ ತಿಳಿಯದೆ ಸ್ವಾತಂತ್ರ್ಯಯ ಹೋರಾಟದ ಬಗ್ಗೆ ಪುಸ್ತಕಗಳನ್ನು ಬರೆದು ಈ ನೆಲದ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ ಎಂದು ತಾಲೂಕು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳ ವಾರಸುದಾರರ ವೇದಿಕೆ ಆರೋಪಿಸಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಅಮೃತ ಭಾರತಿಗೆ ಕನ್ನಡದಾರತಿ ಎನ್ನುವ ಕಾರ್ಯಕ್ರಮ ಆಯೋಜಿಸಿದೆ ಇದಕ್ಕೆ ಪೂರಕವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀನಿವಾಸಪುರ ಎಂಬ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರತಂದಿದೆ ಇದನ್ನು ಪ್ರೊ ಕೆ.ಆರ್.ಜಯಶ್ರೀ ಎನ್ನುವರು ಬರೆದಿದ್ದು ಇದರಲ್ಲಿ ಶ್ರೀನಿವಾಸಪುರದ ಸ್ವಾತಂತ್ರ್ಯ ಹೋರಾಟಗಾರ ಹಾಗು ಹೋರಾಟದ ಕುರಿತಾಗಿ ಸಮರ್ಪಕ ಮಾಹಿತಿ ಇಲ್ಲದೆ ಎಲ್ಲವನ್ನೂ ತಿರುಚಿ ಸುಳ್ಳುಗಳ ಸರಮಾಲೆಯನ್ನು ಬರೆದು ಹೋರಾಟಗಾರರನ್ನು ಅಪಮಾನ ಮಾಡಿದ್ದಾರೆ ಎಂದು ಸರ್ವತಾ ತೀವ್ರ ವಿರೋಧ ವ್ಯಕ್ತವಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಚಂದ್ರಯ್ಯಶೆಟ್ಟಿಯವರ ಪತ್ನಿ ವನಜಾಕ್ಷಮ್ಮ ಈ ಬಗ್ಗೆ ಹೇಳಿಕೆ ನೀಡಿ ಭಾರತ ಸ್ವಾತಂತ್ರ್ಯ ಗೊಂಡು 75 ವರ್ಷಗಳು ತುಂಬಿದ್ದು ಅಮೃತ ಮಹೋತ್ಸವ ಆಚರಿಸುತ್ತಿರುವ ಕರ್ನಾಟಕ ಸರ್ಕಾರ ಈ ಹಿನ್ನಲೆಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎನ್ನುವ ಕಾರ್ಯಕ್ರಮ ಆಯೋಜಿಸಿದೆ ಇದು ಹರ್ಷದಾಯಕವಾಗಿದ್ದು ಇದಕ್ಕೆ ನಾವು ಸ್ವಾಗತಿಸುತ್ತೇವೆ ಎಂದಿರುವ ಅವರು ಈ ಸಂದರ್ಭದಲ್ಲಿ ಕನ್ನಡ ಸಂಸೃತಿ ಇಲಾಖೆ ಕನ್ನಡ ಸಾಹಿತ್ಯ ಅಕಾಡಮಿ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಎಂದು ಅಯಾ ತಾಲೂಕುಗಳ ಹೆಸರಿನಲ್ಲಿ ಪುಸ್ತಕಗಳನ್ನು ಹೊರತಂದಿದೆ ಈ ಮಾಲಿಕೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀನಿವಾಸಪುರ ಹೆಸರಲ್ಲೂ ಪುಸ್ತಕ ಬಂದಿದ್ದು ಇದನ್ನು ಪ್ರೊ.ಕೆ.ಆರ್.ಜಯಶ್ರೀ ಎನ್ನುವರು ಬರೆದಿದ್ದಾರೆ ಆದರೆ ಪುಸ್ತಕದಲ್ಲಿ ಶ್ರೀನಿವಾಸಪುರದ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಹೋರಾಟ ಕುರಿತಾಗಿ ಯಾವುದೇ ಸಮರ್ಪಕವಾಗಿ ಮಾಹಿತಿ ನೀಡದೆ ನಡೆಯದೆ ಇಲ್ಲದ ಮಾಹಿತಿಯನ್ನು ಪುಸ್ತಕದಲ್ಲಿ ಬರೆದು ಇಲ್ಲಿನ ಹೋರಾಟಗಾರರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿರುತ್ತಾರೆ.
ಈ ಬಗ್ಗೆ ಬಿ.ಎಲ್ ಕುಟುಂಬದ ದುರ್ಗಾಪ್ರಸಾದ್ ಮಾತನಾಡಿ ಇಂದು ನಡದದ್ದು ಮುಂದಿನ ಪೀಳಿಗೆಗಳಿಗೂ ಮಾಹಿತಿ ಸಿಗಬೇಕು ಎನ್ನುವುದಾದರೆ ಸತ್ಯಾಸತ್ಯ್ರೆಗಳ ದಾಖಲಿಸಬೇಕು ಸತ್ಯವನ್ನು ಮಾರೆ ಮಾಚಿ ಇಲ್ಲದನ್ನು ಬರೆದು ಸಮಾಜಕ್ಕೆ ತಿರುಚಿದ ಸುಳ್ಳನ್ನು ರವಾನಿಸುವುದು ಎಷ್ಟು ಸರಿ ಎನ್ನುತ್ತಾರೆ ಇಲ್ಲಿನ ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿಳಿಯದವರು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ಪ್ರಮುಖರಲ್ಲಿ ವೆಂಕಟಪ್ಪಶೆಟ್ಟಿ, ಬಿ.ಎಲ್.ನಾರಯಣಸ್ವಾಮಿ, ಬೊಲೊ ಸುಬ್ಬರಾವ್, ಮಾ.ನಂಜುಂಡಪ್ಪ.ಮುಗಬಾಳಪ್ಪ, ರ್ರಂವಾರಿಪಲ್ಲಿಗಂಗಿರೆಡ್ಡಿ ವೈ.ಬಿ.ನಾರಯಣರೆಡ್ಡಿ, ಆರ್.ಜಿ.ನಾರಯಣರೆಡ್ದಿ, ಕಾಶಿಪಲ್ಲಿ ವೆಂಕಟರಮಣ,ಗುಡಿಸಿವಾರಿಪಲ್ಲಿ ಕೃಷ್ಣಾರೆಡ್ದಿ,ಮಿಟ್ಟಾಜನಾಥಶೆಟ್ಟಿ ವೆಂಕಟರೆಡ್ಡಿ,ಸುಂದರಮೂರ್ತಿ ಮುಗವಾಳಪ್ಪ ಸೇರಿದಂತೆ ಕಾಶಿಪಲ್ಲಿ ಸಮಸ್ತ ಗ್ರಾಮಸ್ಥರು ಜೊತೆಯಾಗಿ ಹೋರಾಟದಲ್ಲಿ ಭಾಗವಹಿಸಿದ್ದರು ತಾಲೂಕಿನ ಉತ್ತರ ಭಾಗದಲ್ಲಿ ಹೋರಾಟ ತಾರಕ್ಕೇರಿತ್ತು ಈ ಐತಿಹಾಸಿಕ ಹೋರಾಟದ ದಾಖಲೆಯನ್ನು ಪುಸ್ತಕದಲ್ಲಿ ಬರಿಯದೆ ಇರುವುದು ದುರಂತ ಎಂದು ದೂರುತ್ತಾರೆ.
ಬ್ರಿಟಿಷ್ ಆಡಳಿತದಲ್ಲಿ ನಡೆದ ಹೋರಾಟದಲ್ಲಿ ನಿರ್ದಯಿಯಾಗಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ ಮಾಡಿದ ದಾಖಲೆಗೆ ಪಟ್ಟಣದಲ್ಲಿ ಬ್ರಿಟಿಷರು ನಿರ್ಮಿಸಿರುವ ಆಡಳಿತ ಕಚೇರಿ(ಹಳೇಯ ತಾಲೂಕು ಆಫೀಸ್) ಸಾಕ್ಷಿ ಇದ್ಯಾವುದನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀನಿವಾಸಪುರ ಪುಸ್ತಕದಲ್ಲಿ ಉಲೇಖಿಸಿಲ್ಲ ಇಂತಹ ಪುಸ್ತಕವನ್ನು ಇಂದಿನ ಪೀಳಿಗೆಗೆ ಯಾವರಿತಿಯಾಗಿ ನೀಡಬೇಕು ದಯವಿಟ್ಟು ಸರ್ಕಾರ ಈ ಬಗ್ಗೆ ಕೂಲಂಕುಶವಾಗಿ ಪರಶೀಲನೆ ಮಾಡಬೇಕು ಎಂದು ಕೃಷ್ಣಾರೆಡ್ಡಿ ಒತ್ತಾಯಿಸಿರುತ್ತಾರೆ.