- ಇಸ್ರೇಲ್ – ಪ್ಯಾಲೆಸ್ಟೈನ್ ನಡುವೆ ಉದ್ವಿಗ್ನತೆ ಮತ್ತೆ ಕಾವೇರಿದೆ.
- ಎರಡು ದೇಶಗಳ ನಡುವೆ ಯುದ್ಧದ ವಾತವರಣ ನಿರ್ಮಾಣವಾಗಿದೆ
- ಎರಡು ರಾಷ್ಟ್ರಗಳು ಸ್ಥಾಪನೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದಗಳು ಕೇಳಿಬರುತ್ತದೆ.
ನ್ಯೂಜ್ ಡೆಸ್ಕ್:ಇಸ್ರೇಲ್ನ ಅತಿದೊಡ್ಡ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಇತರ ನಗರ ಪ್ರದೇಶಗಳಲ್ಲಿ ಇದರಿಂದ ಅಪಾರ ಪ್ರಮಾಣದ ತೊಂದರೆ ಆಗಿದ್ದು, ಅನೇಕ ಬಹುಮಹಡಿ ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿವೆ. ಈ ಹಿಂದೆ 2007ರಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆ ವೇಳೆ, 233 ಜನರು ಸಾವನ್ನಪ್ಪಿದ್ದರು. ಆದರೆ, ಇದೀಗ ಮತ್ತೊಮ್ಮೆ ಅದೇ ರೀತಿಯ ಹಿಂಸಾಚಾರ ಆರಂಭಗೊಂಡಿದೆ.ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಉದ್ವಿಗ್ನತೆಯ ಪರಿಣಾಮ, ಸುಮಾರು 103 ಮಂದಿ ಈಗಾಗಲೇ ಸಾವನ್ನಪ್ಪಿದ್ದು, 580ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ಧಗಧಗಿಸುತ್ತಿದೆ, ಹಿಂಸಾಚಾರಕ್ಕೆ ಇದುವರಿಗೂ 70ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ. ಹಿಂಸೆ ಭುಗಿಲೆದ್ದ ಬಳಿಕ ಹಲವು ದೇಶಗಳು ಘಟನೆಯನ್ನು ಖಂಡಿಸಿವೆ. ಭಾರತ ಸಹ ಹಿಂಸಾಚಾರದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದೆ. ಜೆರುಸಲೇಂನ ‘ಟೆಂಪಲ್ ಮೌಂಟ್’ ಬಳಿ ನಡೆದ ಹಿಂಸಾಚಾರವನ್ನು ಖಂಡಿಸಿದೆ.ಹಿಂಸೆ ಬಿಟ್ಟು ಶಾಂತಿಯಿಂದ ವರ್ತಿಸಲು ಭಾರತ ಗೌರವಿತ ಸಲಹೆ ನೀಡಿದೆ.
ಶೇಕ್ ಜರಾ ಸುತ್ತಲೂ ನೆಲೆಸಿರುವವರನ್ನು ಬಲವಂತವಾಗಿ ಹೊರದಬ್ಬುತ್ತಿರುವ ಕೃತ್ಯಕ್ಕೂ ಭಾರತ ಬೇಸರ ವ್ಯಕ್ತಪಡಿಸಿದೆ. ಎರಡೂ ಬಣಗಳು ಯಥಾಸ್ಥಿತಿ ಕಾಪಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದೆ. ಪ್ಯಾಲೆಸ್ತೇನ್-ಇಸ್ರೇಲ್ ಮಧ್ಯೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅತ್ತ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ.
ಆದರೆ ರಣ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯುತ್ತಿದೆ. ಸಾವಿರಾರು ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಎಲ್ಲೆಂದರಲ್ಲಿ ದೀಪಾವಳಿ ಪಟಾಕಿಗಳಂತೆ ರಾಕೆಟ್ಗಳು ಹಾರಿ ಬರುತ್ತಿದ್ದು, ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಗಡಿ ಭಾಗಗಳಲ್ಲಿ ಜನತೆ ಜೀವ ಕೈಲಿಡಿದುಕೊಂಡು ಬದುಕುತ್ತಿದ್ದಾರೆ.
ಆದರೆ ಇಬ್ಬರ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯುತ್ತಿದೆ. ಸಾವಿರಾರು ಜನರು ಸೂರು ಕಳೆದುಕೊಂಡು ಬೀದಿಗೆ
ಉಗ್ರರ ದಾಳಿಯಲ್ಲಿ ಭಾರತ ಮೂಲದ ಸೌಮ್ಯ ನಿಧನ
ಹಮಾಸ್ ಉಗ್ರರು ನಡೆಸಿರುವಂತ ದಾಳಿಯಲ್ಲಿ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಕೇರಳ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕೇರಳದ ಇಡುಕ್ಕಿಯ ಸೌಮ್ಯ ಸಂತೋಷ್ ಮಂಗಳವಾರ ದಕ್ಷಿಣ ಇಸ್ರೇಲ್ನ ಕರಾವಳಿ ಭಾಗದಲ್ಲಿ ಅಶ್ಕೆಲೋನ್ನಲ್ಲಿ ವೃದ್ದೆಯೊಬ್ಬರಿಗೆ ಆರೈಕೆ(HOSPITALITY) ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ಹಮಾಸ್ ಉಗ್ರರು ನಡೆಸಿದ ರಾಕೇಟ್ ದಾಳಿಯಿಂದ ವೃದ್ದೆಯ ನಾಶವಾಗಿದ್ದು ಅದರಲ್ಲಿದ್ದ ಸೌಮ್ಯ ತೀವ್ರವಾಗಿ ಗಾಯಗೊಂಡು ಚಿಕಿಸ್ಥೆ ಫಲಕಾರಿಯಾಗದೆ ಸೌಮ್ಯ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ಯಾಲೆಸ್ತೈನ್ ಉಗ್ರರ ಗ್ಯಾಂಗ್ ಸೋಮವಾರದಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭಿಸಿತ್ತು. ನಿನ್ನೆಯಿಂದ ದಾಳಿಯನ್ನ ಇನ್ನಷ್ಟು ಭೀಕರಗೊಳಿಸಿದೆ. ಹಲವು ದಶಕಗಳ ಕಾಲ ಹಮಾಸ್ ಹಾಗೂ ಇಸ್ರೇಲ್ ನಡುವೆ ಘೋರ ಕಾಳಗ ನಡೆಯುತ್ತಾ ಬಂದಿದೆ
ಗಲಾಟೆ ಶುರುವಾಗಿದ್ದು ಹೇಗೆ..?
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಘರ್ಷಣೆ ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರೆ, 24 ಮಂದಿ ಜೀವ ಕಳೆದುಕೊಂಡಿದ್ದಾರೆ.
ಕಾಯುತ್ತಿದ್ದಾರೆ ಇಸ್ರೇಲ್ ಶತ್ರುಗಳು!
ಇಸ್ರೇಲ್ ಪುಟಾಣಿ ದೇಶವಾದರೂ ಅರಬ್ ಒಕ್ಕೂಟದ ಹತ್ತಾರು ದೇಶಗಳನ್ನ ಎದುರು ಹಾಕಿಕೊಂಡಿದೆ. ಅಲ್ಲಿ ತನ್ನ ನೆಲೆ ಖಚಿತ ಪಡಿಸಿಕೊಳ್ಳಲು ಇಸ್ರೇಲ್ಗೆ ಇದು ಅನಿವಾರ್ಯವೂ ಹೌದು. ಆದರೆ ಇದೀಗ ದೇಶದೊಳಗೆ ಘರ್ಷಣೆ ಆರಂಭವಾಗಿದೆ. ತನ್ನ ವೈರಿ ಪ್ಯಾಲೆಸ್ತೇನ್ ಬಗ್ಗುಬಡಿಯಲು ಇಸ್ರೇಲ್ ಪಡೆಗಳು ಬಲಪ್ರಯೋಗವನ್ನು ಮುಂದುವರಿಸಿದ್ದಾರೆ.ಇದು ಸಹಜವಾಗಿಯೆ ಇಸ್ರೇಲ್ ವಿರೋಧಿ ರಾಷ್ಟ್ರಗಳಿಗೆ ಪ್ರಚೋದನೆ ನೀಡಿದಂತಾಗಿದೆ. ಇಸ್ರೇಲ್ನಲ್ಲಿ ಈಗಾಗಲೇ ಪ್ರಧಾನಿಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಈ ನಡುವೆ ಕೋಮು ಗಲಭೆಗಳೂ ಆರಂಭವಾಗಿದ್ದು ದ್ವೇಷ ಭಾವನೆಯನ್ನು ಕೆರಳುವಂತೆ ಮಾಡಿದೆ.
ಶಾಂತಿ ನೆಲೆಸುತ್ತದಾ..?
ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ಜೇರುಸಲಾಂ ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದರೆ. ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಹಮಾಸ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಇವರಿಬ್ಬರ ಕಿತ್ತಾಟದಿಂದ ಸಾಮಾನ್ಯ ಜನರು ಬೀದಿಪಾಲಾಗಿದ್ದಾರೆ. ಗಾಜಾಪಟ್ಟಿಯಲ್ಲಿ ಲಕ್ಷಾಂತರ ಮಂದಿ ಮನೆ ಬದುಕು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.ಹಾಗೇ ಲೆಕ್ಕವಿಲ್ಲದಷ್ಟು ಯುವಕರೂ ಪ್ರಾಣ ಕಳೆದುಕೊಂಡಿದ್ದಾರೆ.ಇನ್ನೂ ಹಲವರು ಹೋರಾಡುವಾಗ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಿದೆ. ವಿಶ್ವಸಂಸ್ಥೆ ಕೂಡ ಹಲವು ದಶಕಗಳಿಂದ ಇಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶತ ಪ್ರಯತ್ನ ಪಡುತ್ತಿದೆ ಆದರು ಸಾಧ್ಯವಾಗುತ್ತಿಲ್ಲ.
ಇಸ್ರೇಲ್ ಕೇಂದ್ರ ನಗರವಾದ ಲಾಡ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.
ಸೋಮವಾರ ಸಂಜೆಯಿಂದ 1,000 ಕ್ಕೂ ಹೆಚ್ಚು ರಾಕೆಟ್ಗಳನ್ನು ಮಧ್ಯ ಮತ್ತು ದಕ್ಷಿಣ ಇಸ್ರೇಲ್ ಕಡೆಗೆ ಪ್ಯಾಲೇಸ್ಟಿನಿಯನ್ ಉಗ್ರರು ಹಾರಿಸಿದ್ದಾರೆ, ಎಂದು ಇಸ್ರೇಲ್ ಸೈನ್ಯ ತಿಳಿಸಿದೆ.
ಇಸ್ರೇಲ್ ವಾಯುದಾಳಿಯು ಮಂಗಳವಾರ ಗಾಜಾ ಪ್ರದೇಶದಲ್ಲಿ ಟವರ್ ಬ್ಲಾಕ್ ಅನ್ನು ನೆಲಸಮಗೊಳಿಸಿದ ನಂತರ ಪ್ಯಾಲೇಸ್ಟಿನಿಯನ್ ಉಗ್ರರು ಹೇಳುವಂತೆ ಇಸ್ರೇಲ್ ನ ಟೆಲ್ ಅವೀವ್ ನಗರವನ್ನು ಗುರಿಯಾಗಿಸಿಕೊಂಡಿದ್ದಾರಂತೆ ಎಂದು ಹೇಳಲಾಗಿದೆ.
ಗಾಜಾ ಪಟ್ಟಿ (ಪ್ಯಾಲೆಸ್ತೀನ್) ನಗರದಲ್ಲಿ ಅನೇಕ ಕಟ್ಟಡಗಳು ಇಸ್ರೇಲ್ – ಪ್ಯಾಲೆಸ್ತೀನ್ ವೈಮಾನಿಕ ದಾಳಿಯಲ್ಲಿ ನೆಲಸಮವಾಗಿದೆ ಸ್ವಲ್ಪ ಅಂತರದಲ್ಲಿ ಅಸೋಸಿಯೇಟೆಡ್ ಪ್ರೆಸ್ (ಎಪಿ) ಬ್ಯೂರೋ ದಾಳಿಯಿಂದ ಪಾರಾಗಿದೆ
.ಅರಬ್-ಯಹೂದಿ ದೇಶಗಳಲ್ಲಿ ಭಾರಿ ಹಿಂಸಾಚಾರ ಹಾಗೂ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲಾಡ್ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ನಿನ್ನೆ ಸಂಜೆ ಗಾಜಾದಲ್ಲಿರುವ ಅಮೆರಿಕದ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಕಚೇರಿಯ ಕೆಲವೇ ಮೀಟರ್ ದೂರದಲ್ಲಿ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದಕ್ಕೆ ಎಪಿ ಸಿಬ್ಬಂದಿ ಹೌಹಾರಿ ಗಾಭರಿಯಾಗಿದ್ದಾರೆ.
ಶಾಂತಿ ಬಯಸಿ ಹಾಲಿಹುಡ್ ತಾರೆ ಟ್ವೀಟ್
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಇತ್ತೀಚಿನ ಘರ್ಷಣೆ ಹಿನ್ನೆಲೆ ಹಾಲಿವುಡ್ ತಾರೆ ಗಾಲ್ ಗಡೊಟ್ ಅವರು ಶಾಂತಿಯ ಸಂದೇಶವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.