ಶ್ರೀನಿವಾಸಪುರ:-ತಾಲೂಕಿನ ಪ್ರತಿಷ್ಠಿತ ಪಂಚಾಯಿತಿ ಕೇಂದ್ರವಾದ ಜೆ.ತಿಮ್ಮಸಂದ್ರ ಪಂಚಾಯಿತಿ ಜೆ.ಡಿ.ಎಸ್ ಪಾಲಾಗಿದೆ ಇದುವರಿಗೂ ಅಲ್ಲಿ ಕಾಂಗ್ರೆಸ ಅಧಿಕಾರದಲ್ಲಿತ್ತು ಅದ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಅಲವಾಟ ಚೌಡಮ್ಮ ಆನಾರೋಗ್ಯದಿಂದ ಮೃತ ಪಟ್ಟ ಹಿನ್ನಲೆಯಲ್ಲಿ ನಡೆದ ಅಧ್ಯಕ್ಷ ಪದವಿ ಚುನಾವಣೆಯಲ್ಲಿ ಮೂವರು ಕಾಂಗ್ರೆಸ್ ಸದಸ್ಯರು ಜೆ.ಡಿ.ಎಸ್ ಪರ ಬೆಂಬಲ ವ್ಯಕ್ತಪಡಿಸಿದ್ದು ಮತ್ತು ಒಂದು ಕ್ರಾಸ್ ಮತದ ಬೆಂಬಲದೊಂದಿಗೆ ಜೆ.ತಿಮ್ಮಸಂದ್ರ ಪಂಚಾಯಿತಿಯಲ್ಲಿ ಜೆ.ಡಿ.ಎಸ್ ಅಧಿಕಾರ ಪಡೆದುಕೊಂಡಿದೆ.
17 ಸಂಖ್ಯಾ ಬಲದ ಜೆ.ತಿಮ್ಮಸಂದ್ರ ಪಂಚಾಯಿತಿಯಲ್ಲಿ ಕಾಂಗ್ರೆಸ್ 10 ಜೆ.ಡಿ.ಎಸ್ 7 ಜನ ಸದಸ್ಯರಿದ್ದು ಅಧ್ಯಕ್ಷರಾಗಿದ್ದ ಚೌಡಮ್ಮ ನಿಧನರಾದ ಹಿನ್ನಲೆಯಲ್ಲಿ ಅಧ್ಯಕ್ಷ ಪದವಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರಸ್ ಬೆಂಬಲಿತ ಕಲ್ಲೂರು ಗ್ರಾಮದ ಸದಸ್ಯರಾದ ಶಂಕರರೆಡ್ಡಿ ಮಂಜುಳವೆಂಕಟ್ರಮಣ ಮತ್ತು ಜೆ.ವಿ ಕಾಲೋನಿ ಕೃಷ್ಣಮ್ಮವೆಂಕಟರಮಣ ಜೆ.ಡಿ.ಎಸ್ ಪರವಾಲಿದಲ್ಲದೇ ಕೃಷ್ಣಮ್ಮವೆಂಕಟರಮಣ ಜೆ.ಡಿ.ಎಸ್ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಕಾರಣಗಳು
ಜೆ.ತಿಮ್ಮಸಂದ್ರ ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆ ಅಧಿಕಾರ ಕಳೆದುಕೊಳ್ಳಲು ಕಸಬಾ ಹೋಬಳಿಯ ಕೆಲ ಯುವ ಮುಖಂಡರು ಜೆ.ತಿಮ್ಮಸಂದ್ರ ಪಂಚಾಯಿತಿಯಲ್ಲಿ ತಮ್ಮ ವೈಯುಕ್ತಿಕ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಪಂಚಾಯಿತಿ ಕಾಂಗ್ರೆಸ್ ಮುಖಂಡರ ನಡುವೆ ಸಾಮರಸ್ಯ ಹದಗೆಡಿಸಿ ಸ್ಥಳೀಯ ನ್ಯಾಯ ಪಂಚಾಯಿತಿಗಳಿಗೆ ಬೆರೆ ಪಂಚಾಯಿತಿ ಮುಖಂಡರನ್ನು ಕರೆತಂದು ದೊಡ್ಡಸ್ಥಿಗೆ ಮಾಡಿಸುತ್ತಾರಂತೆ ಈ ಬೆಳವಣಿಗೆಗಳಿಂದ ಬೆಸೆತ್ತಿರುವ ಬಹುತೇಕ ಕಾಂಗ್ರೆಸ್ ಮುಖಂಡರು ಅಧ್ಯಕ್ಷ ಚುನಾವಣೆಯಿಂದ ದೂರ ಉಳಿದು ಅಧಿಕಾರ ಜೆ.ಡಿ.ಎಸ್ ಪಾಲಾಗಲು ಪರೋಕ್ಷವಾಗಿ ಸಹಕಾರ ನೀಡಿದ್ದಾರೆಂದು ಹೇಳಲಾಗುತ್ತಿದೆ. ಇದರ ನಡುವೆ ಕಲ್ಲೂರು ಗ್ರಾಮದ ಇಬ್ಬರು ಸದಸ್ಯರ ಪಕ್ಷ ಬದಲಾವಣೆ ತಾಲೂಕು ಕಾಂಗ್ರೆಸ್ ಯುವ ಮುಖಂಡನಿಗೆ ಹಿನ್ನಡೆಯಾಗಿದಿಯಂತೆ