ಶ್ರೀನಿವಾಸಪುರ:ಶ್ರೀ ರಾಮನವಮಿ ಪ್ರಯುಕ್ತ ಶ್ರೀನಿವಾಸಪುರ ತಾಲೂಕಿನ ಎಲ್ಲಾ ವೈಷ್ಣವ, ಶ್ರೀರಾಮ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಿಗೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದರು
ಬೆಳಗ್ಗೆಯಿಂದಲೇ ಭಕ್ತರು ಶ್ರದ್ಧಾ ಭಕ್ತಿಯಿಂದ ವೈಷ್ಣವ ಮಂದಿರಗಳಿಗೆ ಭೇಟಿ ಇತ್ತು ಭಗವಂತನ ದರ್ಶನ ಪಡೆದರು, ಶ್ರೀ ರಾಮನ ದೇವಾಲಯಗಳಲ್ಲಿ ಜೈ ಶ್ರೀರಾಮ್ ಘೋಷಣೆಗಳು ಕೂಗುತ್ತ ಭಕ್ತರು ರಾಮನ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನಿತರಾದರು.ವಿಶೇಷವಾಗಿ ತಾಲೂಕಿನ ಯಲ್ದೂರು ಪುರಾಣ ಪ್ರಸಿದ್ಧ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜೆ ಕಾರ್ಯಕ್ರಮಗಳು ನಡೆಯಿತು.ಎನ್ ಮರೇಪಲ್ಲಿ ಶ್ರೀ ಪಂಚಮುಖಿ ಅಂಜನೇಯ ದೇವಾಲಯದಲ್ಲಿ ರಾಮತಾರಕ ಹೋಮ ಪೂಜೆ ಸೀತಾರಾಮ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು.
ಶ್ರೀನಿವಾಸಪುರ ಪಟ್ಟಣದಲ್ಲಿ ವಲ್ಲಭಾಯ್ ರಸ್ತೆಯಲ್ಲಿ ರಾಮರ ಗುಡಿಯಲ್ಲಿ ಶ್ರೀರಾಮನವಮಿಯಂದು ಇಡಿ ರಾತ್ರಿ ಭಜನೆ ನಡೆಯಿತು ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ನಡೆಯಿತು.

ಪಾನಕ ಪನ್ಯಾರ ಹಂಚಿದ ಯುವಕ ಸಂಘಗಳು
ದೇವಾಲಯಗಳಲ್ಲಿ ಸೇರಿದಂತೆ ಯುವಕ ಸಂಘಗಳು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮುಳಬಾಗಿಲು ವೃತ್ತದ ಆಟೋ ನಿಲ್ದಾಣ,ಎಂ.ಜಿ ರಸ್ತೆಯ ತರಕಾರಿ ಮಾರುಕಟ್ಟೆ ವೃತ್ತ, ವಿವೇಕಾನಂದ ವೃತ್ತ ಬಸ್ ನಿಲ್ದಾಣದ ಮಹಾತ್ಮಾಗಾಂಧಿ ಆಟೋಸ್ಟಾಂಡ್, ಪವನ್ ಆಸ್ಪತ್ರೆ ಬಳಿ ಪೆಂಡಾಲ್ ಹಾಕಿ ಶ್ರೀರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಜನರಿಗೆ ಪಾನಕ, ಮಜ್ಜಿಗೆ, ಹೆಸರು ಬೇಳೆ ವಿತರಣೆ ಮಾಡಿದರೆ ಕೆಲವು ಕಡೆ ಅನ್ನದಾಸೋಹ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಪಟ್ಟಣದಲ್ಲಿ ರಾಮನವಮಿ Vibes
ಶ್ರೀನಿವಾಸಪುರ ಪಟ್ಟಣದಲ್ಲಿ ಇದೆ ಮೊದಲಬಾರಿಗೆ ಯುವಕರು ದೊಡ್ದ ಮಟ್ಟದಲ್ಲಿ ಒಗ್ಗೂಡಿ ಶ್ರೀರಾಮನವಮಿ ಉತ್ಸವ ಆಯೋಜಿಸಿದ್ದರು ಕಾರ್ಯಕ್ರಮದಲ್ಲಿ ಮಹಿಳೆಯರ ಚಂಡೆ ವಾದ್ಯ ಹಾಗೆ ವಿಶೇಷವಾಗಿ ಮಹಿಳೆಯರು ಭಾಗವಹಿದ್ದರು. ಪಟ್ಟಣದಲ್ಲಿ ಇದೊಂದು ಕಂಪನವನ್ನೆ(Vibes) ಸೃಷ್ಟಿಸಿತು.Dj ಹಾಡುಗಳಿಗೆ ಯುವಕರು ಕುಣಿದರೆ ತಮತೆ ಸದ್ದಿಗೆ ಯುವತಿಯರು ಹಾಗೆ ಮಹಿಳೆಯರು ಹುಚ್ಚೆದ್ದು ಕುಣಿದರು,ಯುವಕರು ಉತ್ಸಾಹದಿಂದ ಆಯೋಜಿಸಿದ್ದ ರಾಮನವಮಿ ಉತ್ಸವಕ್ಕೆ ಪಟ್ಟಣದ ಹಾಗು ತಾಲೂಕಿನ ಹಿರಿಯರು ಪ್ರಮುಖರು ಮುಖಂಡರು ಶ್ರೀರಾಮನವಮಿ ಉತ್ಸವದಲ್ಲಿ Volunteer ಅಗಿ ಭಾಗವಹಿಸಿ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.



ಮೊಡಿ ಮಾಡಿದ ಹಾಡುಗಾರ Jr.SPB ಅಕ್ಬರ್
ಎಂ.ಜಿ.ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆ ಅಂಗಡಿಗಳ ಪ್ರದೇಶದಲ್ಲಿ ರಸ್ತೆಯಲ್ಲಿ ಹಾಕಿದ್ದ ಭವ್ಯವಾದ ವೇದಿಕೆಯಲ್ಲಿ ಬೃಹತ್ ರಾಮನವಮಿಯ ಸುಂದರ ಸಂಜೆಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ರಸ ಸಂಜೆಯಲ್ಲಿ ಬಣ್ಣ-ಬಣ್ಣದ ವಿದ್ಯತ್ ದೀಪಗಳ ಕಾಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಪ್ರಖ್ಯಾತ ಹಾಡುಗಾರ SPಬಾಲಸುಬ್ರಣ್ಯಮ್ ನಂತೆ ಹಾಡುಗಳನ್ನು ಪ್ರಸ್ತುತ ಪಡಿಸಿದ ಮೋಡಿಮಾಡಿದ ಹಾಡುಗಾರ Jr.SPB ಅಕ್ಬರ್ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಂತ ಹಾಡುಗಳು ಶೋತ್ರಧಾರಿಗಳನ್ನು ಚೇರು ಬಿಟ್ಟು ಕದಲದಂತೆ ಮಾಡಿದ್ದು ವಿಶೇಷ. ಕನ್ನಡ ಕಿರುತೆರೆ ಕಾಮಿಡಿ ಕಿಲಾಡಿಗಳು ಶೋ ನಟ ಚಂದ್ರಪ್ರಭ ಮತ್ತು ತಂಡ ನಡೆಸಿಕೊಟ್ಟ ಹಾಸ್ಯಸಂಜೆ ಜನರನ್ನು ಮೋಡಿ ಮಾಡಿತು.