ಕೋಲಾರ:ಆತಂಕಕ್ಕೆ ಗೊಳಗಾಗದೆ SSLC ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಅಂಕಗಳೊಂದಿಗೆ ಗುಣಮಟ್ಟದ ಫಲಿತಾಂಶ ಪಡೆಯುವಂತೆ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಕರೆ ಇತ್ತರು.
ಅವರು ಕೋಲಾರ ಜಿಲ್ಲೆಯ SSLC ಪರೀಕ್ಷೆಯ ಕೋಲಾರ ತಾಲ್ಲೂಕಿನ ನೋಡಲ್ ಅಧಿಕಾರಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನ ಮುದುವಾಡಿ,ಸರ್ಕಾರಿ ನ್ಯೂ ಗವರ್ನಮೆಂಟ್ ಹೈಸ್ಕೂಲ್ ಕೆಂಬೋಡಿ ಸರ್ಕಾರಿ ಜನತಾ ಫ್ರೌಡ ಶಾಲೆ ಸೇರಿದಂತೆ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಸದರಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದರಿಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ಉತ್ತರಿಸಲು ಸಿದ್ದರಾಗಿರಬೇಕು, ಅದಕ್ಕೆ ಪರಿಶ್ರಮ ಅಗತ್ಯವಿದೆ, ಕ್ರೀಡೆ, ಆಟ,ಸಿನಿಮಾ ಎಲ್ಲವನ್ನು ಪರೀಕ್ಷೆ ಮುಗಿಯುವವರೆಗೂ ಮರೆತುಬಿಡಿ ಓದಿನ ಕಡೆ ಹೆಚ್ಚು ಗಮನ ಇರಲಿ ಉತ್ತಮ ನಿದ್ದೆಯೂ ಅಗತ್ಯವಿದ್ದು ಮೊಬೈಲ್ ನೋಡದಿರಿ ಆರೋಗ್ಯದ ಕಡೆ ಗಮನ ಹರಿಸಿ ಮುರುಕುಲು ತಿಂಡಿ,ಎಣ್ಣೆ ಪದಾರ್ಥಗಳಿಂದ ದೂರ ಇದ್ದು ಆರೋಗ್ಯ ಕಾಪಾಡಿಕೊಂಡು ಉತ್ತಮ ಫಲಿತಾಂಶದತ್ತ ಗುರಿ ಇಟ್ಟುಕೊಳ್ಳಿ ಎಂದರು.

ಅಡುಗೆ ಮನೆ ಉಟೋಪಚಾರ ಪರಶೀಲನೆ
ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗಾಗಿ ತಯಾರಿಸಿದ್ದ ಉಟೋಪಚಾರವನ್ನು ಪರಿಶೀಲಿಸಿ ವಿವಿಧ ಆಹಾರ ಉತ್ಪನ್ನಗಳ ಗುಣಮಟ್ಟ ಹಾಗು ಶೇಖರಿಸಿಡಲು ಅನುಸರಿಸಬೇಕಾದ ಕೆಲವು ಸಾಮಾನ್ಯ ಕ್ರಮಗಳ ಕುರಿತು ನಿಲಯದ ಅಡುಗೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳನ್ನು ಪರಿಕ್ಷೆ ಎದುರಿಸಲು ಸಜ್ಜುಮಾಡಲು ಶಾಲೆಗಳ ಮುಖ್ಯೋಪಾಧ್ಯಯರು ಮತ್ತು ಶಿಕ್ಷಕರಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.