ಶ್ರೀನಿವಾಸಪುರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿಯವರನ್ನು ಶಾಸಕ ರಮೇಶ್ ಕುಮಾರ್ ಪೋಲಿಸ್ ಠಾಣೆಯಲ್ಲಿ ಅಗೌರವದಿಂದ ಮಾತನಾಡಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಶಾಸಕರ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟಿಸಿದ ಘಟನೆ ಇಂದು ತಡ ಸಂಜೆ ಶ್ರೀನಿವಾಸಪುರ ಪೋಲಿಸ್ ಠಾಣೆ ಮುಂಬಾಗದಲ್ಲಿ ನಡೆದಿರುತ್ತದೆ.
ತಾಲೂಕಿನ ಪಾತಬಲ್ಲಪಲ್ಲಿ ಗ್ರಾಮದಲ್ಲಿ ಎರಡು ಮನೆಗಳ ನಡುವೆ ಇದ್ದ ಹಳೇ ವೈಶ್ಯಮ್ಯದ ಹಿನ್ನಲೆಯಲ್ಲಿ ಬುಧವಾರ ರಾತ್ರಿ ಎರಡು ಕುಟುಂಬಗಳ ನಡೆವೆ ಗಲಭೆ ನಡೆದಿರುತ್ತದೆ ಈ ಸಂಭಂದ ಎರಡು ಕುಟುಂಬಗಳಿಂದ ಪೋಲಿಸರಿಗೆ ದೂರು ಪ್ರತಿ ದೂರು ದಾಖಲಾಗಿದ್ದು ಈ ವಿಚಾರವಾಗಿ ವೃತ್ತ ನೀರಿಕ್ಷಕ ರವಿಕುಮಾರ್ ಅವರನ್ನು ಮಾತನಾಡಲು ಇಂದು ಸಂಜೆ ತೂಪಲ್ಲಿನಾರಯಣಸ್ವಾಮಿ ಶ್ರೀನಿವಾಸಪುರ ಪೋಲಿಸ್ ಸ್ಟೇಷನ್ ಗೆ ಹೋಗಿದ್ದು ಇದೇ ಸಂದರ್ಭದಲ್ಲಿ ಶಾಸಕ ರಮೇಶ್ ಕುಮಾರ್ ಸಹ ಪೋಲಿಸ್ ಸ್ಟೇಷನ್ ಗೆ ಬಂದಿರುತ್ತಾರೆ ಅಲ್ಲಿ ತೂಪಲ್ಲಿನಾರಯಣಸ್ವಾಮಿ ಇರುವುದನ್ನು ನೋಡಿದ ಶಾಸಕರು ಏಕಾ ಏಕಿ ನಾರಯಣಸ್ವಾಮಿ ವಿರುದ್ದ ಕೂಗಾಡಿ ರಾತ್ರಿ ವೇಳೆ ಸಹ ಪೋಲಿಸ್ ಠಾಣೆಗಳಲ್ಲಿ ರಾಜಕೀಯ ಮಾಡುತ್ತಿರ ಎಂದು ಏರಿ ಧನಿಯಲ್ಲಿ ಅಬ್ಬರಿಸುತ್ತ ಅವರೊಬ್ಬ ಜನಪ್ರತಿನಿಧಿ ಎಂಬುದನ್ನು ಗೌರವಿಸದೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿ ಶ್ರೀನಿವಾಸಪುರ ಪೋಲಿಸ್ ಠಾಣೆ ಮುಂಬಾಗದಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು, ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡ ಜಗದೀಶ್ ಹಾಗು ಶ್ರೀನಿವಾಸ್ ಮಾತನಾಡಿ ಈ ಘಟನೆಯನ್ನು ಖಂಡಿಸಿ ಶುಕ್ರವಾರ ಶ್ರೀನಿವಾಸಪುರ ಬಂದ್ ಗೆ ಕರೆ ನೀಡಿರುವುದಾಗಿ ತಿಳಿಸಿದರು.
ಮಾಜಿ ಶಾಸಕ ಖಂಡನೆ.
ವರದಿ:ನಂಬಿಹಳ್ಳಿ ಸುರೇಶ್